I Know ಯಡಿಯೂರಪ್ಪ ಕೆಪಾಬಿಲಿಟಿ ಎಂದ ಮೋದಿ..!

ಬೆಂಗಳೂರು: ಇದು ಕೇವಲ 1 ನಿಮಿಷದ ರಾಜಭವನ ರಹಸ್ಯದ ಎಕ್ಸ್‍ಕ್ಲೂಸೀವ್ ಸ್ಟೋರಿ. ಮೂವರು ಘಟಾನುಟಿಗಳ ನಡುವೆ ನಡೆದ ಮಾತುಕತೆಯ ಎಕ್ಸ್‍ಕ್ಲೂಸೀವ್ ಡಿಟೇಲ್ಸ್ ಇದಾಗಿದೆ. ಪ್ರಧಾನಿ, ರಾಜ್ಯಪಾಲ, ಮುಖ್ಯಮಂತ್ರಿ ನಡುವೆ ನಡೆದ ಮಾತುಕತೆ ಇಂಟರೆಸ್ಟಿಂಗ್ ಆಗಿದೆ.

ಅಂದಹಾಗೆ ರಾಜಕೀಯವಾಗಿ ಹೆಚ್ಚು ಮಾತಾಡದಿದ್ದರೂ ಯಡಿಯೂರಪ್ಪಗೆ ಪ್ರಶಂಸೆ ಸುರಿಮಳೆ ಬಿದ್ದಿದೆ. ಶುಕ್ರವಾರ ರಾಜಭವನದಲ್ಲಿ ಸ್ವಾರಸ್ಯಕರ ಘಟನೆ ನಡೆದಿದೆ. ರಾಜಭವನದಿಂದ ಪ್ರಧಾನಿ ನರೇಂದ್ರ ಮೋದಿ ತೆರಳುವಾಗ ಉಪಚುನಾವಣೆಯ ಗೆಲುವಿನ ಬಗ್ಗೆ ರಾಜ್ಯಪಾಲ ವಜುಬಾಯ್ ವಾಲಾ ಪ್ರಸ್ತಾಪಿಸಿದ್ದರಂತೆ. ಯಡಿಯೂರಪ್ಪ ಸಮ್ಮುಖದಲ್ಲೇ ಮೋದಿಗೆ ಬೈ ಎಲೆಕ್ಷನ್ ಗೆಲುವಿನ ಬಗ್ಗೆ ರಾಜ್ಯಪಾಲ ವಿ.ಆರ್.ವಾಲಾ ಹೇಳಿದ್ದಾರೆ.

ಆಗ ಬೈ ಎಲೆಕ್ಷನ್ ಪ್ರಸ್ತಾಪಕ್ಕೆ ನಕ್ಕ ಮೋದಿ ನನಗೆ ಯಡಿಯೂರಪ್ಪ ಕೆಪಾಬಿಲಿಟಿ ಗೊತ್ತಿದೆ. ಬೈ ಎಲೆಕ್ಷನ್ ರಿಸಲ್ಟ್ ವಂಡರ್‍ಫುಲ್ ಎಂದು ನಕ್ಕು ಯಡಿಯೂರಪ್ಪ ಕೈ ಹಿಡಿದ್ರಂತೆ. ಬಳಿಕ ಹೆಚ್ಚು ಮಾತನಾಡದೇ ಪ್ರಧಾನಿ ಮೋದಿ ರಾಜಭವನದಿಂದ ಹೊರಟ್ರಂತೆ. ಇದೇ ವೇಳೆ ಯಡಿಯೂರಪ್ಪ ಅವರನ್ನ ತಮ್ಮದೇ ಕಾರಿನಲ್ಲಿ ಕೂರಿಸಿಕೊಂಡು ಹೊರಟಿದ್ದು ವಿಶೇಷವಾಗಿದೆ. ಪ್ರಧಾನಿ ಮೋದಿ ಪ್ರಶಂಸೆಗೆ ಕೈಮುಗಿದು ಸಿಎಂ ಯಡಿಯೂರಪ್ಪ ಸ್ಮೈಲ್ ಮಾಡಿದ್ರು ಎನ್ನಲಾಗಿದೆ.

ಈ ಸ್ವಾರಸ್ಯಕರ ಘಟನೆ ನೋಡಿದ ಮೇಲೆ ಬಿಎಸ್‍ವೈ ಆಪ್ತರು ಕಾಲ ಬದಲಾಯ್ತು ಬಿಡಿ ಅಂತಾರೆ. ಒಟ್ಟಾರೆಯಾಗಿ ಲೋಕಸಭೆ ಚುನಾವಣೆಗೂ ಮುನ್ನ ಯಡಿಯೂರಪ್ಪ ಅವರನ್ನ ಇದೇ ಮೋದಿ, ಹೈಕಮಾಂಡ್ ನಡೆಸಿಕೊಂಡ ರೀತಿಗೂ ಈಗ ನಡೆಸಿಕೊಳ್ಳುತ್ತಿರುವ ರೀತಿಗೆ ವ್ಯತ್ಯಾಸಗಳಿದ್ದು, ಯಡಿಯೂರಪ್ಪ ಸ್ಟ್ರಾಂಗ್ ಆಗ್ತಿದ್ದಾರಾ ಅನ್ನೋ ಚರ್ಚೆಯಂತೂ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *