ವಾಹನಗಳ ಮೇಲೆ RTO ಅಧಿಕಾರಿಗಳು ದಾಳಿ

– ನಿಯಮ ಬಾಹಿರವಾಗಿ ನಂಬರ್ ಪ್ಲೇಟ್ ಅಳವಡಿಕೆ

ಯಾದಗಿರಿ: ವಾಹನ ಸವಾರರು ನಿಯಮ ಬಾಹಿರವಾಗಿ ತಮ್ಮ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ RTO ಅಧಿಕಾರಿಗಳು ವಾಹನಗಳ ಮೇಲೆ ದಾಳಿ ಮಾಡಿ, ನಂಬರ್ ಪ್ಲೇಟ್ ಕಿತ್ತು ಹಾಕಿ ದಂಡವನ್ನು ಹಾಕುತ್ತಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯ ವಿವಿಧ ಭಾಗದಲ್ಲಿ RTO ವಸಂತ್ ಚೌಹ್ವಾನ್ ನೇತೃತ್ವದಲ್ಲಿ ಈ ದಾಳಿ ನಡೆಯುತ್ತಿದೆ. ಈಗಾಗಲೇ ನೂರಾರು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ವಾಹನಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸುಮಾರು 30 ವಾಹನಗಳ ಮಾಲೀಕರ ವಿರುದ್ಧ ಕೇಸ್ ದಾಖಲಿಸಿ, ಸುಮಾರು 15,000 ದಂಡವನ್ನು ಸಂಗ್ರಹಿಸಿದ್ದಾರೆ.

ವಾಹನಗಳ ನಂಬರ್ ಪ್ಲೇಟ್‍ನಲ್ಲಿ ಸಂಘಟನೆಗಳ, ಕಂಪನಿಯ ಹೆಸರು ಮತ್ತು ನಿರ್ವಹಿಸುತ್ತಿರುವ ಹುದ್ದೆಗಳ ಹೆಸರನ್ನು ವಾಹನ ಸವಾರರು ಹಾಕಿಸುವುದು ಸಾಮಾನ್ಯ. ಆದರೆ ಈ ರೀತಿಯಾಗಿ ನಂಬರ್ ಪ್ಲೇಟ್‍ನಲ್ಲಿ ಹಾಕಿಸುವುದು ನಿಯಮ ಬಾಹಿರವಾಗಿದೆ. ಅಲ್ಲದೆ ರಸ್ತೆ ಸಾರಿಗೆ ನಿಗಮ ಸೂಚಿಸಿದ ರೀತಿಯಲ್ಲಿ ವಾಹನಗಳ ಸಂಖ್ಯಾ ಫಲಕ ಇಲ್ಲದೆ ಹೋದರೆ ದಂಡ ಹಾಕುವುದು ಅನಿವಾರ್ಯವಾಗಿದೆ. ಹೀಗಾಗಿ ವಾಹನ ಸವಾರರು ಎಚ್ಚೆತ್ತುಕೊಳ್ಳಬೇಕು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *