ಪ್ರತಿ ಹಳ್ಳಿಗಳಲ್ಲಿ ರಾಮನವಮಿ ರಥಯಾತ್ರೆ- ವಿಎಚ್‍ಪಿ ಬೈಠಕ್‍ನಲ್ಲಿ ನಿರ್ಣಯ

– ಪ್ರಮುಖ ನಿರ್ಣಯಗಳಿಗೆ ಸಾಕ್ಷಿಯಾದ ಅಂತರಾಷ್ಟ್ರೀಯ ಬೈಠಕ್

ಮಂಗಳೂರು: ಅಂತರಾಷ್ಟ್ರೀಯ ಹಿಂದೂ ಸಂಘಟನೆ ವಿಶ್ವ ಹಿಂದೂ ಪರಿಷತ್‍ನ ಅಂತರಾಷ್ಟ್ರೀಯ ಬೈಠಕ್ ಮಂಗಳೂರಿನ ಸಂಘನಿಕೇತನದಲ್ಲಿ ಕಳೆದ ಐದು ದಿನಗಳಿಂದ ನಡೆದಿದ್ದು, ಸೋಮವಾರ ಮುಕ್ತಾಯಗೊಂಡಿದೆ. ಬೈಠಕ್‍ನಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಈ ಕುರಿತು ವಿಎಚ್‍ಪಿ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಮಾಹಿತಿ ನೀಡಿ, ಪ್ರತಿ ಹಳ್ಳಿಗಳಲ್ಲಿ ರಾಮನವಮಿ ರಥಯಾತ್ರೆ ನಡೆಸಲು ಬೈಠಕ್ ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ಆಂಧ್ರ ಪ್ರದೇಶ ಸರ್ಕಾರ ಅನುಸರಿಸುತ್ತಿರುವ ಹಿಂದೂಗಳ ವಿರುದ್ಧ ದಮನಕಾರಿ ನೀತಿ ವಿರುದ್ಧ, ತಿರುಪತಿಯಲ್ಲಿ ಅನ್ಯಧರ್ಮೀಯರಿಗೆ ನೌಕರಿ ನೀಡಿರುವ ಬಗ್ಗೆ, ಮುಸ್ಲಿಂ, ಕ್ರೈಸ್ತ ಧರ್ಮದ ಉತ್ಸವಗಳಿಗೆ ಉಚಿತ ಬಸ್ ನೀಡಿ, ಹಿಂದೂಗಳಿಗೆ ಬಸ್ ಬಾಡಿಗೆ ಹೆಚ್ಚು ವಿಧಿಸುವ ಬಗ್ಗೆಯೂ ಹೋರಾಟ ನಡೆಸಲಾಗುಗುವುದು ಎಂದು ತಿಳಿಸಿದ್ದಾರೆ.

ಬೈಠಕ್‍ನಲ್ಲಿ ಮತಾಂತರ, ಗೋಹತ್ಯೆ ಸೇರಿದಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಬಗ್ಗೆಯೂ ಚರ್ಚೆಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ವಿಎಚ್‍ಪಿಯಿಂದ ಏನೆಲ್ಲಾ ಕಾರ್ಯ ಮಾಡಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ ರಾಮನವಮಿಯಂದು ರಾಷ್ಟ್ರಾದ್ಯಂತ ರಾಮೋತ್ಸವ ನಡೆಸಲು ನಿರ್ಧರಿಸಿಲಾಗಿದೆ.

ದೇಶ, ವಿದೇಶದ ಒಟ್ಟು 350 ಪ್ರತಿನಿಧಿಗಳು ಈ ಬೈಠಕ್ ನಲ್ಲಿ ಭಾಗಿಯಾಗಿದ್ದರು. ವಿಎಚ್‍ಪಿಯ ಎಲ್ಲ ಹಿರಿಯ ಮುಖಂಡರು ಭಾಗವಹಿಸಿದ್ದರು. ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *