28ನೇ ಕರ್ನಾಟಕ ರಾಜ್ಯ ಸ್ಕೌಟ್ಸ್-ಗೈಡ್ಸ್ ಜಾಂಬೊರೇಟ್‍ಗೆ ಸಿಎಂ ಬಿಎಸ್‍ವೈ ಚಾಲನೆ

ಚಿಕ್ಕಬಳ್ಳಾಪುರ: 28ನೇ ಕರ್ನಾಟಕ ರಾಜ್ಯ ಸ್ಕೌಟ್ಸ್-ಗೈಡ್ಸ್ ಜಾಂಬೊರೇಟ್‍ಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಹೊರವಲಯದ ಡಾ.ಅನಿಬೆಸೆಂಟ್ ಸ್ಕೌಟ್ಸ್-ಗೈಡ್ಸ್ ರಾಜ್ಯ ತರಬೇತಿ ಶಿಬಿರ ಕೇಂದ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಸಿಎಂ ಆಗಮಿಸುತ್ತಿದ್ದಂತೆ ಕೊರಳಿಗೆ ಕರವಸ್ತ್ರ ಹಾಕಿ ಕಾರ್ಯಕ್ರಮ ಆಯೋಜಕರು ಬರ ಮಾಡಿಕೊಂಡರು. ಮತ್ತೊಂದೆಡೆ ಪೊಲೀಸರು ಗೌರವ ವಂದನೆ ಸಲ್ಲಿಸಿದರು.

ತೆರೆದ ವಾಹನದಲ್ಲಿ ಒಂದು ಸುತ್ತು ಹಾಕಿದ ಸಿಎಂ ಯಡಿಯೂರಪ್ಪ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ವೇದಿಕೆಗೆ ಸಿಎಂ ಆಗಮಿಸುತ್ತಿದ್ದಂತೆ ಸ್ಕೌಟ್ಸ್ ಅಂಡ್ ಗೈಡ್ಸ್‍ನ ಬ್ಯಾಂಡ್ ಸೆಟ್ ತಂಡ ಹಾಗೂ ಸಾಹಸಿ ಬೈಕ್ ರೈಡ್ ಪ್ರದರ್ಶನದ ಮೂಲಕ ಸ್ವಾಗತ ಕೋರಲಾಯಿತು. ಕಾರ್ಯಕ್ರಮದಲ್ಲಿ ಸಚಿವರಾದ ಸುರೇಶ್ ಕುಮಾರ್, ಸಿಟಿ ರವಿ ಹಾಗೂ ಮಾಜಿ ಸಚಿವರಾದ ಯುಟಿ ಖಾದರ್, ಶಾಸಕರಾದ ವೆಂಕಟರಮಣಯ್ಯ, ವಿಶ್ವನಾಥ್ ಹಾಗೂ ಸಂಸದ ಪಿಸಿ ಮೋಹನ್ ಭಾಗಿಯಾಗಿದ್ದರು.

Comments

Leave a Reply

Your email address will not be published. Required fields are marked *