ಆನ್‍ಲೈನ್ ಪರೀಕ್ಷೆ ರದ್ದತಿಗೆ ಒತ್ತಾಯಿಸಿ ಐಟಿಐ ತರಬೇತುದಾರರ ಪ್ರತಿಭಟನೆ

ಕೊಪ್ಪಳ: ಐಟಿಐ ತರಬೇತಿ ಪಡೆಯುತ್ತಿರುವ ತರಬೇತುದಾರರಿಗೆ ಉದ್ಯೋಗ ಮತ್ತು ತರಬೇತಿ ಇಲಾಖೆ ಆನ್‍ಲೈನ್ ಮೂಲಕ ಪರೀಕ್ಷೆ ನಡೆಸಲು ನಿರ್ಧಾರ ಕೈಗೊಂಡಿದ್ದು, ಕೂಡಲೇ ಆನ್‍ಲೈನ್ ಪರೀಕ್ಷೆ ರದ್ಧತಿಪಡಿಸಿ ಮ್ಯನುವಲ್ ಪರೀಕ್ಷೆಗೆ ಅನುಕೂಲ ಮಾಡಿಕೊಡಬೇಕು ಎಂದು ವಿದ್ಯಾರ್ಥಿ ಪರಿಷತ್ ಸಂಘಟನೆಗಳು ಗ್ರೇಡ್-2 ವಿಜಯಾ ಮುಂಡರಗಿ ಅವರಿಗೆ ಮನವಿಪತ್ರ ಸಲ್ಲಿಸಿದರು.

ಕೊಪ್ಪಳದ ಕುಷ್ಟಗಿ ಕನಕದಾಸ ವೃತ್ತದಿಂದ ಬಸವೇಶ್ವರ ವೃತ್ತದವರೆಗೂ ಐಟಿಐ ಕಾಲೇಜಿನ ತರಬೇತುದಾರರು ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.

ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ತಾಲೂಕು ಅಧ್ಯಕ್ಷ ದೇವರಾಜ ಅರಸೂ ಮಾತನಾಡಿ, ಐಟಿಐ ವಿದ್ಯರ್ಥಿಗಳಿಗೆ ಆನ್‍ಲೈನ್ ಪರೀಕ್ಷೆ ನಡೆಸುವಂತೆ ಈಗಾಗಲೇ ಇಲಾಖೆ ಆದೇಶ ಹೊರಡಿಸಿದ್ದು, ಅವೈಜ್ಞಾನಿಕದಿಂದ ಕೂಡಿದ್ದು, ಐಟಿಐ ತರಬೇತುದಾರರಿಗೆ ಏಕಾ ಏಕಿಯಾಗಿ ಆನ್‍ಲೈನ್ ಪರೀಕ್ಷೆ ನಡೆಸಲಾಗುತ್ತಿದ್ದು, ಬೇರೆ ಯಾವುದೇ ಉನ್ನತ ಕೋರ್ಸ್ ಗಳಾದ ಮೆಡಿಕಲ್, ಇಂಜಿನೀಯರ್, ಡಿಪ್ಲೋಮಾ, ನ್ಯಾಯಾಂಗ ಸೇರಿದಂತೆ ಇತರೆ ಕೋರ್ಸ್ ಗಳಿಗೆ ಆನ್‍ಲೈನ್ ಪರೀಕ್ಷೆ ಜಾರಿಯಾಗಿರುವುದಿಲ್ಲ. ಆದರೆ ಐಟಿಐ ತರಬೇತುದಾರರಿಗೆ ಆನ್‍ಲೈನ್ ಪರೀಕ್ಷೆ ನಡೆಸುತ್ತಿರುವುದರಿಂದ ಬಹಳ ತೊಂದರೆಯಾಗುತ್ತಿದ್ದು, ಇದರಿಂದಾಗಿ ಕೇಂದ್ರ ಸರ್ಕಾರ ಹೊರಡಿಸಿದ ಆದೇಶವನ್ನು ಕೂಡಲೇ ರದ್ದತಿಗೊಳಿಸಿ ಮ್ಯಾನ್ವಲ್ ಪರೀಕ್ಷೆಗೆ ಅನುಕೂಲ ಕಲ್ಪಿಸಿಕೊಡಬೇಕು.

ಕೇಂದ್ರ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ (RFEN) ವತಿಯಿಂದ ಜನವರಿ ತಿಂಗಳಿನಲ್ಲಿ ಅಖಿಲ ಬಾರತ ವೃತ್ತಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಹಿಂದೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ತರಬೇತುದಾರರಿಗೆ ಮತ್ತು ಪ್ರಸಕ್ತಸಾಲಿನ ಪ್ರಥಮ ಮತ್ತು ದ್ವಿತೀಯ ವರ್ಷದ ತರಬೇತುದಾರರಿಗೆ ಆನ್‍ಲೈನ್ ಪರೀಕ್ಷೆ ನಡೆಸಲು ನಿರ್ಧಾರ ಕೈಗೊಂಡಿದೆ. ಈ ಹಿಂದೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ತರಬೇತುದಾರರಿಗೆ ಆನ್‍ಲೈನ್ ಪರೀಕ್ಷೆ ಕುರಿತು ಮಾಹಿತಿ ಇರುವುದಿಲ್ಲ ಏಕಾಏಕಿ RFEN ಇಂಥಹ ನಿರ್ಧಾರ ಕೈಗೊಂಡಿದ್ದು, ಕೂಡಲೇ ಆನ್‍ಲೈನ್ ಪರೀಕ್ಷೆ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಉದ್ಯೋಗ ಮತ್ತು ತರಬೇತು ಇಲಾಖೆ ವತಿಯಿಂದ ನೀಡುವಂತಹ RFEN ಆನ್‍ಲೈನ್ ವೆಬ್‍ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಇದರಿಂದಾಗಿ ಅದೇಷ್ಟೋ ಕಾಲೇಜುಗಳಿಗೆ ಇಲಾಖೆಯ ನಿಯಮಗಳು ಆದೇಶಗಳು ಮಾಹಿತಿ ದೊರೆಯದೇ ಸಾಕಷ್ಟು ತೊಂದರೆ ಪಡುವಂತಾಗಿದೆ. ಇಲಾಖೆ ಎಚ್ಚೆತ್ತುಕೊಂಡು ವೆಬ್‍ಸೈಟ್ ಸುಸರ್ಜಿತವಾಗಿ ಕಾರ್ಯನಿರ್ವಹಿಸುವಂತೆ ಕ್ರಮಕೈಗೊಳ್ಳಬೇಕು. ಇಂತಹ ಅವೈಜ್ಞಾನಿಕ ಆದೇಶಗಳಿಂದ ಅದೆಷ್ಟೋ ಕಾಲೇಜಿನ ತರಬೇತುದಾರರು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಶಿಕ್ಷಣ ಮಟ್ಟ ಅತ್ಯಂತ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಹೊಂತ್ತುಕೊಂಡಿದ್ದು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರಿ ಅರೆಸರ್ಕಾರಿ ಅನುದಾನಿತ ಐಟಿಐ ಸಂಸ್ಥೆಗಳಲ್ಲಿ ಜ್ಞಾನಾರ್ಜನೆ ಪಡೆಯುತ್ತಿರುವ ತರಬೇತುದರರಿಗೆ ಆನ್‍ಲೈನ್ ಮೂಲಕ ಪರೀಕ್ಷೆ ನಡೆಸಲಾಗುವುದು ಎಂದು ಇಲಾಖೆ ಆದೇಶ ಹೊರಡಿಸಿದೆ. ಈ ಭಾಗದಲ್ಲಿ ಇಲಾಖೆಯ ದೃಢ ನಿರ್ಧಾರದಿಂದ ಮತ್ತಷ್ಟು ಶಿಕ್ಷಣದಿಂದ ಹಿದೆ ಉಳಿಯುವಂತಾಗುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಆನ್‍ಲೈನ್ ಪರೀಕ್ಷೆ ರದ್ಧುಗೊಳಿಸಿ ಈ ಭಾಗದ ಐಟಿಐ ರಬೇತುದಾರರಿಗೆ ಅನೂಕೂಲಕರ ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

Comments

Leave a Reply

Your email address will not be published. Required fields are marked *