ಬಿಜೆಪಿ ನಾಯಕನಿಂದ ಪೊಲೀಸರ ಮೇಲೆಯೇ ಗೂಂಡಾಗಿರಿ

ಬೆಳಗಾವಿ/ಚಿಕ್ಕೋಡಿ : ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಸಹೋದರ ಜಗದೀಶ್ ಕವಟಗಿಮಠ ಪೊಲೀಸರ ಮೇಲೆ ಗೂಂಡಾಗಿರಿ ಪ್ರದರ್ಶನ ನಡೆಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ.

ಮಹಾಂತೇಶ್ ಕವಟಗಿಮಠ ಸಹೋದರ ಹಾಗೂ ಚಿಕ್ಕೋಡಿ ಪುರಸಭೆ ಸದಸ್ಯ ಆಗಿರುವ ಜಗದೀಶ್ ಕವಟಗಿಮಠ ಚಿಕ್ಕೋಡಿ ಪಟ್ಟಣದಲ್ಲಿ ಅವರ ಕಾರನ್ನ ಟ್ರಾಫಿಕ್ ಪೊಲೀಸರು ತಡೆದಿದ್ದರು. ಇದರಿಂದ ಕೋಪಗೊಂಡ ಜಗದೀಶ್ ಅವಾಚ್ಯ ಶಬ್ದಗಳಿಂದ ಪೊಲೀಸರನ್ನ ನಿಂದಿಸಿದ್ದಾರೆ.

ಮಹಾಂತೇಶ್ ಕವಟಗಿಮಠ

ಪೊಲೀಸರು ಕೂಡ ಮರಳಿ ಮಾತಾಡಿದ್ದಕ್ಕೆ ಹಲ್ಲೆ ಮಾಡಲು ಕೂಡ ಜಗದೀಶ್ ಕವಟಗಿಮಠ ಮುಂದಾದಾಗ ಕೆಲ ಪೊಲೀಸರು ಅವರನ್ನ ತಡೆದಿದ್ದಾರೆ. ಸದ್ಯ ಪೊಲೀಸರ ಮೇಲೆ ಗೂಂಡಾಗಿರಿ ಪ್ರದರ್ಶಿಸಿರುವ ಜಗದೀಶ್ ಕವಟಗಿಮಠ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ರಾಜಕಾರಣಿಗಳ ಗೂಂಡಾಗಿರಿ ಪ್ರಕರಣಗಳಿಗೆ ಕೊನೆ ಯಾವಾಗ ಎನ್ನುವ ಪ್ರಶ್ನೆಯನ್ನ ಸಾರ್ವಜನಿಕರು ಮಾಡುತ್ತಿದ್ದಾರೆ. ಪೊಲೀಸರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಪ ತೋರಿರುವ ಜಗದೀಶ್ ಕವಟಗಿಮಠ ಕ್ರಮಕೈಗೊಳ್ಳಬೇಕೆಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Comments

Leave a Reply

Your email address will not be published. Required fields are marked *