ಇಂಟರ್‌ನ್ಯಾಷನಲ್‌ ಸೂಪರ್ ಮಾಡೆಲ್ ಇನ್ ಇಂಡಿಯಾ ಅವಾರ್ಡ್ ಗೆದ್ದ ಜೂ. ಮಾಡೆಲ್

ಕಲಬುರಗಿ: ಈ ಹಿಂದೆ ಹಾಂಕಾಂಗ್‍ನ ಟ್ಯಾಲೆಂಟ್ ಸ್ಟಾರ್ ಇಂಟರ್‌ನ್ಯಾಷನಲ್‌ ಅವಾರ್ಡ್ ಪಡೆದಿದ್ದ ಕಲಬುರಗಿಯ ಅನನ್ಯ ರೈ, ಇದೀಗ ಯಂಗೆಸ್ಟ್ ಇಂಟರ್‌ನ್ಯಾಷನಲ್‌ ಸೂಪರ್ ಮಾಡೆಲ್ ಇನ್ ಇಂಡಿಯಾ ಅವಾರ್ಡ್ ಪಡೆದಿದ್ದಾಳೆ.

ಬೆಂಗಳೂರಿನ ಖಾಸಗಿ ಹೋಟಲಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಮೂಲೆಗಳಿಂದ 13 ವರ್ಷದೊಳಗಿನ ಹಲವು ಜೂನಿಯರ್ ಮಾಡಲ್‍ಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಕಲಬುರಗಿಯ ಅನನ್ಯ ರೈಗೆ ಯಂಗೆಸ್ಟ್ ಸ್ಟಾರ್ ಇಂಟರ್‌ನ್ಯಾಷನಲ್‌ ಅವಾರ್ಡ್ ಸಿಕ್ಕಿದೆ. ಈ ಮೂಲಕ ಕಲಬುರಗಿಯ ಕೀರ್ತಿ ಪಟಾಕೆಯನ್ನು ಅನನ್ಯ ರೈ ಇಡೀ ದೇಶದ ತುಂಬಾ ಪಸರಿಸಿದ್ದಾಳೆ. ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಅವರೇ ಪ್ರಶಸ್ತಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಅಂತರಾಷ್ಟ್ರೀಯ ಮಾಡೆಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕಲಬುರಗಿಯ ಬಾಲಕಿ

ಅನನ್ಯ ತಮ್ಮ ತಂದೆ-ತಾಯಿಯ ಏಕೈಕ ಪುತ್ರಿ. ಅನನ್ಯಳ ತಂದೆ ಹೋಟೆಲ್ ಉದ್ಯಮಿ ಆಗಿದ್ದು, ತಾಯಿ ರೂಪಾಕ್ಷಿ ಅವರು ಕಲಬುರಗಿಯ ಜೆಸ್ಕಾಂ ಇಲಾಖೆಯಲ್ಲಿ ಜೆಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನನ್ಯ ಹೈದರಾಬಾದ್‍ನ ನರ್ಸರಿ ಶಾಲೆಯಲ್ಲಿ ಕ್ಯಾಟ್‍ವಾಕ್ ಮಾಡಿ ಬಹುಮಾನ ಗೆದಿದ್ದಳು. ಬಳಿಕ ಅನನ್ಯ ಮಾಡೆಲ್ ಆಗಬೇಕೆಂಬ ಆಸೆಯನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಸುಮಿತ್ರ ರೈ ಅವರು ತಮ್ಮ ಮಗಳ ಡಯಟ್ ಬಗ್ಗೆ ನಿರ್ಧರಿಸುತ್ತಾರೆ. ಆರೋಗ್ಯ ಮತ್ತು ಸೌಂದರ್ಯವನ್ನು ನೋಡಿಕೊಳ್ಳುವ ಸಲುವಾಗಿ ಅನನ್ಯ ಜಂಕ್ ಫುಡ್ ತಿನ್ನುವುದಿಲ್ಲ.

ಈ ಹಿಂದೆ ಹಾಂಕಾಂಗ್‍ನಲ್ಲಿ ನಡೆದ ಜೂನಿಯರ್ ಇಂಟರ್‌ನ್ಯಾಷನಲ್‌ ಮಾಡೆಲ್ ಸ್ಪರ್ಧೆಯಲ್ಲಿ ಅನನ್ಯ ರೈ ಚಿನ್ನದ ಪದಕ ಗಳಿಸಿದ್ದಳು. ಭಾರತದ ಪರ ಜೂನಿಯರ್ ಮಾಡೆಲಿಂಗ್‍ನಲ್ಲಿ ಮೊದಲ ಬಾರಿಗೆ ರಾಜ್ಯದಿಂದ ಆಯ್ಕೆಯಾದ ಮಾಡೆಲ್ ಅನನ್ಯ ಆಗಿದ್ದಳು. ದೇಶದಲ್ಲಿ ಮಿಂಚಿದ್ದ ಅನನ್ಯ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರತಿಭೆಯನ್ನು ಅನಾವರಣಗೊಳಿಸಿ, ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಳು

Comments

Leave a Reply

Your email address will not be published. Required fields are marked *