ಡೇಟಿಂಗ್ ಆ್ಯಪ್ ಮೂಲಕ 73 ಲಕ್ಷ ರೂ. ಕಳೆದುಕೊಂಡ 65ರ ವೃದ್ಧ

ಮುಂಬೈ: 65 ವರ್ಷದ ವೃದ್ಧ ಫೇಕ್ ಡೇಟಿಂಗ್ ಆ್ಯಪ್ ಮೂಲಕ 73 ಲಕ್ಷ ರೂ. ಕಳೆದುಕೊಂಡ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

ಖಾರ್ಘರ್ ಪೊಲೀಸ್ ಠಾಣಾ ಪೊಲೀಸರು ಫೇಕ್ ಕಾಲ್ ಸೆಂಟರ್‍ನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಮಹಿಳೆ ಹಾಗೂ ತೃತೀಯ ಲಿಂಗಿ ಕೂಡ ಭಾಗಿಯಾಗಿದ್ದರು. ಪೊಲೀಸರು ಆರೋಪಿಗಳ ಬಳಿಯಿದ್ದ 73.5 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡರು.

ಈ ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿ, ಸೆಪ್ಟೆಂಬರ್ 2018ರಂದು ಸ್ನೇಹ ಹೆಸರಿನ ಮಹಿಳೆಯೊಬ್ಬಳು 65 ವರ್ಷದ ವೃದ್ಧನನ್ನು ಕರೆ ಮಾಡಿದ್ದಳು. ಆಕೆ ವೃದ್ಧನಿಗೆ ಡೇಟಿಂಗ್ ಸರ್ವಿಸ್ ಬಗ್ಗೆ ಮಾಹಿತಿ ನೀಡಿದ್ದಳು. ಅಲ್ಲದೆ ಮೆಂಬರ್ ಶಿಪ್ ಹಾಗೂ ರಿಜಿಸ್ಟ್ರೇಶನ್ ಎಂದು ಭಾರೀ ಮೊತ್ತವನ್ನು ಶುಲ್ಕವನ್ನಾಗಿ ಪಡೆದು ಡೇಟಿಂಗ್‍ಗಾಗಿ ಯುವತಿ ನಿಗದಿಯಾದ ಸ್ಥಳಕ್ಕೆ ಬರುತ್ತಾಳೆ ಎಂದು ಹೇಳಿದ್ದಳು. ಆದರೆ ಯಾವುದೇ ಯುವತಿ ಬರಲಿಲ್ಲ.

ಇದಾದ ಬಳಿಕ ವೃದ್ಧ, ಸ್ನೇಹಗೆ ಕರೆ ಮಾಡಿ ತನ್ನ ಮೆಂಬರ್ ಶಿಪ್ ಕ್ಯಾನ್ಸಲ್ ಮಾಡಲು ಹೇಳಿದ್ದರು. ಇದಕ್ಕೂ ಕೂಡ ಆಕೆ ಹಣವನ್ನು ಕೇಳಲು ಶುರು ಮಾಡಿದ್ದಳು. ಜೊತೆಗೆ ಹುಡುಗಿಯರನ್ನು ಕಳುಹಿಸು ಎಂದು ಒತ್ತಾಯಿಸುತ್ತಿದ್ದೇನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ ಎಂದು ವೃದ್ಧನಿಗೆ ಬೆದರಿಕೆ ಹಾಕಿದ್ದಳು. ಅಲ್ಲದೆ ನಕಲಿ ಲೀಗಲ್ ನೋಟಿಸ್ ಕೂಡ ವೃದ್ಧನ ಮನೆಗೆ ಕಳುಹಿಸಿಕೊಟ್ಟಿದ್ದಳು.

ಈ ಬಗ್ಗೆ ಪ್ರತಿಕ್ರಿಯಿಸಿದ ವೃದ್ಧ, ನಾನು ಈ ಪ್ರಕರಣದಿಂದ ಭಯಗೊಂಡಿದೆ. ನಾನು ಬೇರೆ ಬೇರೆ ಖಾತೆಗಳ ಮೂಲಕ 73.5 ಲಕ್ಷ ರೂ. ವರ್ಗಾವಣೆ ಮಾಡಿದೆ. ಇದಾದ ಬಳಿಕ ನಾನು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದೆ ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ಸ್ನೇಹ, ಅರ್‍ನಬ್ ದಾಸ್ ಹಾಗೂ ಪ್ರಬೀರ್ ಸಾಹಾನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *