ನಾಡಿನ ರಾಜ ಒಳ್ಳೆಯವನಾಗಿದ್ದರೆ ನಾಡು ಸುಭಿಕ್ಷವಾಗಿರುತ್ತದೆ – ಕುಪ್ಪೂರು ಶ್ರೀ

ತುಮಕೂರು: ನಾಡು ಆಳುವ ದೊರೆ ಒಳ್ಳೆಯವನಾಗಿದ್ದರೆ ನಾಡು ಸುಭಿಕ್ಷವಾಗಿರುತ್ತದೆ ಎಂದು ಕುಪ್ಪೂರು ಶ್ರೀ ಹೇಳಿದರು.

ಕುಪ್ಪೂರು ಗದ್ದಿಗೆ ಮಠಕ್ಕೆ ಸಿಎಂ ಯಡಿಯೂರಪ್ಪ ಭೇಟಿ ನೀಡಿ ಭಾವೈಕ್ಯ ಧರ್ಮಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಯತೀಶ್ವರ ಶಿವಾಚಾರ್ಯ ಶ್ರೀಗಳು, ಯಡಿಯೂರಪ್ಪ ಸಿಎಂ ಆಗಿದಾಗಿಂದ ನಾಡಿನಲ್ಲಿ ಒಳ್ಳೆಯ ಮಳೆ ಬೆಳೆ ಆಗುತ್ತಿದೆ. ಸಿಎಂ ಯಡಿಯೂರಪ್ಪ ದೈವಕ್ಕೆ ಹೆಚ್ಚಿನ ಒತ್ತು ಕೊಡುವವರು ಹಾಗಾಗಿ ನಾಡು ಸುಭೀಕ್ಷವಾಗಿದೆ ಎಂದು ಹಾಡಿಹೊಗಳಿದರು.

ಚಿಕ್ಕನಾಯಕನಹಳ್ಳಿ ತಾಲೂಕಿನ ಕಪ್ಪೂರು ಗ್ರಾಮದಲ್ಲಿರುವ ಮಠದ ಆವರಣದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಸಚಿವರಾದ ಜೆ.ಸಿ ಮಾಧುಸ್ವಾಮಿ, ಆರ್ ಅಶೋಕ್ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮರಳುಸಿದ್ದೇಶ್ವರ ಪವಾಡ ಪುಸ್ತಕ ಹಾಗೂ ಹಲವು ಸಾಧಕರಿಗೆ ಕುಪ್ಪೂರು ಮಠ ನೀಡುವ ಪ್ರಶಸ್ತಿ ಪ್ರಧಾನ ಮಾಡಿದರು.

Comments

Leave a Reply

Your email address will not be published. Required fields are marked *