ಪಪ್ಪಾಯಿ ಹಣ್ಣು ಮಾತ್ರವಲ್ಲ ಬೀಜಗಳು ಆರೋಗ್ಯಕ್ಕೆ ಬೆಸ್ಟ್

ಸಾಮಾನ್ಯವಾಗಿ ಪಪ್ಪಾಯಿ ಹಣ್ಣು ತಿಂದು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ಸಂಶೋಧನೆಯೊಂದು ಕೇವಲ ಪಪ್ಪಾಯಿ ಹಣ್ಣು ಮಾತ್ರವಲ್ಲ ಅದರ ಬೀಜಗಳು ಕೂಡ ಆರೋಗ್ಯಕರ ಅಂಶವನ್ನು ಹೊಂದಿದೆ. ಅದನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆದು ಎನ್ನುವುದನ್ನು ತಿಳಿಸಿದೆ.

ಹೌದು. ಯಾವಾಗಲು ಪಪ್ಪಾಯಿ ಹಣ್ಣನ್ನು ಕತ್ತರಿಸಿ ಅದರೊಳಗಿರುವ ಬೀಜ ಯಾವುದಕ್ಕೂ ಪ್ರಯೋಜನವಿಲ್ಲ ಎಂದು ಎಸೆಯುತ್ತಾರೆ. ಕೆಲವರು ಆ ಬೀಜಗಳನ್ನು ಮಣ್ಣಿನಲ್ಲಿ ನೆಟ್ಟು ಗಿಡ ಬೆಳೆಸುತ್ತಾರೆ. ಆದರೆ ಹಲವರಿಗೆ ಪಪ್ಪಾಯಿ ಹಣ್ಣಿನ ಬೀಜವನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಲಾಭವಿದೆ ಎನ್ನುವ ಬಗ್ಗೆ ತಿಳಿದಿಲ್ಲ. ಆದ್ದರಿಂದ ಪಪ್ಪಾಯಿ ಬೀಜದ ಆರೋಗ್ಯಕರ ಲಾಭವೇನು ಎನ್ನುವ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ.

ಪಪ್ಪಾಯಿ ಬೀಜಗಳ ಉಪಯೋಗವೇನು?

1. ಹೊಟ್ಟೆನೋವು ಕಡಿಮೆ ಮಾಡುತ್ತದೆ
ಹೊಟ್ಟೆನೋವಿನಿಂದ ಬಳಲುತ್ತಿರುವವರು ದಿನಕ್ಕೆ 3 ಬಾರಿ ಒಂದು ಚಮಚ ಪಪ್ಪಾಯಿ ಬೀಜದ ಪುಡಿಯನ್ನು ನೀರಿನಲ್ಲಿ ಬೆರಿಸಿ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.

2. ಯಕೃತ್ತಿನ(ಲಿವರ್) ಕಾಯಿಲೆ
ಪಪ್ಪಾಯಿ ಬೀಜಗಳು ಯಕೃತ್ತಿನ ಸಿರೋಸಿಸ್ ಗುಣಪಡಿಸುವ ಪೋಷಕಾಂಶಗಳನ್ನು ಹೊಂದಿದೆ. 6 ಒಣಗಿದ ಪಪ್ಪಾಯಿ ಬೀಜಗಳನ್ನು ಪುಡಿಮಾಡಿ ಅಥವಾ ಜಜ್ಜಿ ಅದನ್ನು ಆಹಾರ ಅಥವಾ ನೀರು, ನಿಂಬೆ ರಸದೊಂದಿಗೆ ಬೆರಿಸಿ ಸೇವಿಸಿದರೆ ಲಿವರ್ ಸಮಸ್ಯೆ ಕ್ರಮೇಣ ಕಡಿಮೆಯಾಗುತ್ತದೆ. 30 ದಿನಗಳ ಕಾಲ ಪ್ರತಿನಿತ್ಯ ಹೀಗೆ ಮಾಡುವುದರಿಂದ ಲಿವರ್ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದಾಗಿದೆ.

3. ಮೂತ್ರಪಿಂಡದ ಸಮಸ್ಯೆ
ಮೂತ್ರಪಿಂಡದ ಸಮಸ್ಯೆ, ಕಾಯಿಲೆ, ವೈಫಲ್ಯಗಳನ್ನು ತಡೆಗಟ್ಟುವಳ್ಳಿ ಪಪ್ಪಾಯಿ ಬೀಜ ಪ್ರಮುಖ ಪಾತ್ರ ವಹಿಸುತ್ತದೆ. ಮೂತ್ರಪಿಂಡದ ಸಮಸ್ಯೆ ಇದ್ದವರು 3ರಿಂದ 4 ಪಪ್ಪಾಯಿ ಬೀಜವನ್ನು ಪುಡಿಮಾಡಿ ಅಥವಾ ಅರೆದು ನೀರಿನಲ್ಲಿ ಬೆರಿಸಿ ಕುಡಿದರೆ ನಿಧಾನವಾಗಿ ಸಮಸ್ಯೆಯಿಂದ ಪಾರಾಗಬಹುದು.

4. ಕ್ಯಾನ್ಸರ್
ಪಪ್ಪಾಯಿ ಬೀಜಗಳು ಆ್ಯಂಟಿ ಕ್ಯಾನ್ಸರ್ ಅಂಶಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿದೆ. ಹೀಗಾಗಿ ಪಪ್ಪಾಯಿ ಬೀಜಗಳು ಕ್ಯಾನ್ಸರ್ ಕೋಶಗಳು ಮತ್ತು ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುವ ಅಂಶವನ್ನು ಹೊಂದಿದೆ.

5. ಮೊಡವೆ ಸಮಸ್ಯೆ
ದೇಹದ ಹಾರ್ಮೊನ್‍ನಲ್ಲಿ ಆಗುವ ಏರುಪೇರಿನಿಂದ ಸಾಮಾನ್ಯವಾಗಿ ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಪಪ್ಪಾಯಿ ಬೀಜಗಳು ಮತ್ತು ಪಪ್ಪಾಯಿ ಎಲೆಗಳನ್ನು ಅರೆದು ಫೇಸ್‍ಪ್ಯಾಕ್ ತಯಾರಿಸಿ, ಮುಖಕ್ಕೆ ಹಚ್ಚಿ 10 ನಿಮಿಷದ ಬಳಿಕ ತಣ್ಣಿರಲ್ಲಿ ಮುಖ ತೊಳೆದರೆ ಮೊಡವೆ ಕಡಿಮೆಯಾಗುತ್ತದೆ.

ಆರೋಗ್ಯಕ್ಕೆ ಒಳ್ಳೆಯದು ಎಂದು ಹೆಚ್ಚಾಗಿ ಪಪ್ಪಾಯಿ ಬೀಜಗಳನ್ನು ಸೇವಿಸಿದರೂ ಅಪಾಯಕಾರಿ. ಹೆಚ್ಚಿನ ಪ್ರಮಾಣದಲ್ಲಿ ಪಪ್ಪಾಯಿ ಬೀಜಗಳನ್ನು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ಮಿತವಾಗಿ, ಸ್ವಲ್ಪ ಪ್ರಮಾಣದಲ್ಲಿ ಪಪ್ಪಾಯಿ ಬೀಜ ಸೇವಿಸಿ ಆರೋಗ್ಯಕರ ಲಾಭ ಪಡೆಯಿರಿ.

Comments

Leave a Reply

Your email address will not be published. Required fields are marked *