ಶಾಂತಿ ಸಂದೇಶ, ಸಮಾಜದ ಒಳಿತಿಗಾಗಿ ಹಾಸನದಲ್ಲಿ ಜೈನರ ಶೋಭಾಯಾತ್ರೆ

ಹಾಸನ: ಶಾಂತಿ ಸಂದೇಶ ಹಾಗೂ ಸಮಾಜದ ಒಳಿತಿಗಾಗಿ ಮತ್ತು ಸ್ವಯಂ ಸಂಯಮ ಪಾಲನೆ ಸಂದೇಶ ವಿಚಾರವಾಗಿ ಹಾಸನ ನಗರದಲ್ಲಿ ಪ್ರಸಿದ್ಧ ಜೈನಗುರು ಶ್ರೀ ಮಹಾಶ್ರಮಣ್ ಜೀ ನೇತೃತ್ವದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು.

ಹಾಸನ ರೈಲ್ವೇ ನಿಲ್ದಾಣದಿಂದ ಎಸ್‍ಡಿಎಂ ಆಯುರ್ವೇದ ಕಾಲೇಜಿನವರೆಗೂ ನಡೆದ ಶೋಭಾಯಾತ್ರೆಯಲ್ಲಿ 150ಕ್ಕೂ ಹೆಚ್ಚು ಜೈನ ಯತಿಗಳ ಜೊತೆ ಸಾವಿರಕ್ಕೂ ಹೆಚ್ಚು ಜೈನ ಸಮಾಜದ ಬಂಧುಗಳು ಹೆಜ್ಜೆ ಹಾಕಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಪಾಲ್ಗೊಂಡಿದ್ದರು.

ದೇಶದಲ್ಲಿ ಹೈದರಾಬಾದ್ ಪಶುವೈದ್ಯೆ ಹತ್ಯೆ ವಿಚಾರ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಹೀಗಾಗಿ ದೇಶದಲ್ಲಿ ಈಗ ಇಂತಹ ಗುರುಗಳ ಸಂದೇಶ ಮತ್ತು ಧರ್ಮದ ಕಾರ್ಯಕ್ರಮಗಳು ಅಗತ್ಯ ಇದೆ. ಮನುಷ್ಯ ಸ್ವಯಂ ಸಂಯಮದಿಂದ ಮಾತ್ರವೇ ಸಮಾಜದಲ್ಲಿ ಶಾಂತಿ ಸಾಧ್ಯ ಎಂದು ಶ್ರೀ ಮಹಾಶ್ರಮಣ್ ಜೀ ಸಂದೇಶ ನೀಡಿದರು.

ತೇರಾಪಂಥ್ ಸಭಾ ವತಿಯಿಂದ ಆಯೋಜನೆಗೊಂಡಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಮಠದ ಶಂಭುನಾಥ ಸ್ವಾಮೀಜಿ ಹಾಗೂ ನೂರಕ್ಕೂ ಹೆಚ್ಚು ದೇಶದ ವಿವಿಧ ಭಾಗದ ಜೈನ ಯತಿಗಳು ಆಗಮಿಸಿದ್ದರು.

Comments

Leave a Reply

Your email address will not be published. Required fields are marked *