ವೈದ್ಯೆಗೆ ಕೂಲ್ ಡ್ರಿಂಕ್ಸ್‌ನಲ್ಲಿ ವಿಸ್ಕಿ ಕುಡಿಸಿ ಅತ್ಯಾಚಾರಗೈದ ಪಾಪಿಗಳು

– ಕೃತ್ಯವೆಸುಗುವಾಲೇ ಉಸಿರುಗಟ್ಟಿಸಿ ಕೊಂದ್ರು

ಹೈದರಾಬಾದ್: ತೆಲಂಗಾಣದ ಪಶುವೈದ್ಯೆಗೆ ಕೂಲ್ ಡ್ರಿಂಕ್ಸ್ ನಲ್ಲಿ ವಿಸ್ಕಿ ಬೆರಸಿ ಕುಡಿಸಿ ನಾಲ್ವರು ಆರೋಪಿಗಳು ಅತ್ಯಾಚಾರ ಮಾಡಿದ್ದಾರೆ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗಗೊಂಡಿದೆ.

26 ವರ್ಷದ ಪಶುವೈದ್ಯೆ ಪ್ರಿಯಾಂಕ ರೆಡ್ಡಿಯನ್ನು ಬೈಕ್ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ, ಮೂವರು ಕ್ಲೀನರ್ ಗಳು ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರಾಬಾದ್ ಪೊಲೀಸರು, ನಾಲ್ವರು ಮೃಗೀಯ ಮನುಷ್ಯರನ್ನು ಬಂಧಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದಾಗ, ಆರೋಪಿಗಳು ಒಂದೂವರೆ ಬಾಟಲು ವಿಸ್ಕಿ, ಸ್ಯ್ನಾಕ್ಸ್ ಮತ್ತು ಕೂಲ್ ಡ್ರಿಂಕ್ಸ್ ಅನ್ನು ತೋಂಡುಪಲ್ಲಿ ಗ್ರಾಮದ ಬಳಿ ಖರೀದಿಸಿದ್ದಾರೆ. ಶಂಶಾಬಾದ್ ಟೋಲ್ ಗೇಟ್ ಬಳಿ ನಾಲ್ವರು ಕುಳಿತು ಮದ್ಯಪಾನ ಮಾಡಿದ್ದಾರೆ. ನಂತರ ಕೂಲ್ ಡ್ರಿಂಕ್ಸ್‍ಗೆ ವಿಷ್ಕಿ ಬೆರೆಸಿ ಪ್ರಿಯಾಂಕಳಿಗೆ ಕಡಿಯಲು ಒತ್ತಾಯ ಮಾಡಿದ್ದಾರೆ. ಕೃತ್ಯ ಎಸಗುವಾಗ ಎಲ್ಲಾ ಆರೋಪಿಗಳು ಕಂಠ ಪೂರ್ತಿ ಕುಡಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಟೋಲ್ ಗೇಟ್ ಸಮೀಪದಲ್ಲಿ ಮದ್ಯ ಖರೀದಿಸಿ ಕಂಠ ಪೂರ್ತಿ ಕುಡಿದಿರುವ ಆರೋಪಿಗಳು ನಂತರ ಯುವತಿಯನ್ನು ರೇಪ್ ಮಾಡಿದ್ದಾರೆ. ರೇಪ್ ಮಾಡುವ ಸಮಯದಲ್ಲಿ ಯುವತಿಯ ಬಾಯಿ ಮತ್ತು ಮೂಗುನ್ನು ಗಟ್ಟಿಯಾಗಿ ಮುಚ್ಚಿಕೊಂಡಿದ್ದರಿಂದ ಉಸಿರುಗಟ್ಟಿ ಪ್ರಿಯಾಂಕ ಸಾವನ್ನಪ್ಪಿದ್ದಾರೆ. ನಂತರ ಇವರು ದೇಹವನ್ನು ತೆಗೆದುಕೊಂಡು ಹೋಗಿ ಸೇತುವೆ ಕೆಳಗೆ ಪೆಟ್ರೋಲ್ ಹಾಕಿ ಸುಟ್ಟು ಬಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರೇಪ್ ಮಾಡಿ ಮೃತ ದೇಹವನ್ನು ಸುಟ್ಟ ನಂತರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಮೊಹಮ್ಮದ್ ಆರೀಫ್ ಉಳಿದ ಮೂವರನ್ನು ಅರಮ್‍ಘರ್ ಎಕ್ಸ್ ರಸ್ತೆಗೆ ಡ್ರಾಪ್ ಮಾಡಿ ನಂತರ ನಾರಾಯಣಪೇಟೆಯಲ್ಲಿರುವ ತನ್ನ ಮನೆಗೆ ಹೋಗಿದ್ದಾನೆ. ಆದರೆ ತನಿಖೆ ವೇಳೆ ಟೋಲ್ ಗೇಟ್ ಸಿಬ್ಬಂದಿ ಲಾರಿ ಇಲ್ಲಿ ನಿಂತಿದ್ದನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ. ನಂತರ ಲಾರಿ ಮಾಲೀಕ ಶ್ರೀನಿವಾಸ್ ರೆಡ್ಡಿಯನ್ನು ವಿಚಾರಣೆ ಮಾಡಿದಾಗ ಈ ನಾಲ್ವರ ಬಗ್ಗೆ ಗೊತ್ತಾಗಿದೆ.

ಇದರಲ್ಲಿ ಪ್ರಮುಖ ಆರೋಪಿಯಾದ ಆರೀಫ್ ಲಾರಿ ಡ್ರೈವರ್ ಆಗಿದ್ದು, ಇನ್ನುಳಿದ ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚಿಂತಕುಂಟ ಚೆನ್ನಾಕೇಶಾವುಲು ಲಾರಿಯಲ್ಲಿ ಕ್ಲೀನರ್ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ನಾಲ್ವರನ್ನು ಪೊಲೀಸರು ಶುಕ್ರವಾರ ಅರೆಸ್ಟ್ ಮಾಡಿದ್ದಾರೆ. ಈ ನಾಲ್ವರು ಚಿಕ್ಕಂದಿನಿಂದಲೂ ಸ್ವೇಹಿತರಾಗಿದ್ದು, ಎಲ್ಲರೂ ಶಾಲೆಯನ್ನು ಬಿಟ್ಟು ಲಾರಿ ಓಡಿಸುವ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *