ಮಗಳಿಗೆ ತಂದೆಯಿಂದ ಸ್ತನ್ಯಪಾನ: ವಿಡಿಯೋ ವೈರಲ್

ತಂದೆ ತನ್ನ ಮಗಳಿಗೆ ಸ್ತನ್ಯಪಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನವೆಂಬರ್ 17ರಂದು ಸ್ಟೇನ್ಸ್ ಗ್ರೌಂಡೆಡ್ ಟ್ವಿಟ್ಟರ್ ಖಾತೆಯಲ್ಲಿ 8 ಸೆಕೆಂಡ್ ಇರುವ ಈ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ. ಈ ವಿಡಿಯೋಗೆ ಇದುವರೆಗೂ 47 ಲಕ್ಷ ವ್ಯೂವ್ ಆಗಿದೆ. ಈ ವಿಡಿಯೋ ನೋಡಿ ಹಲವು ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಡಿಯೋ ಟ್ವೀಟ್ ಮಾಡಿ ಅದಕ್ಕೆ, ಮಗುವಿನ ತಾಯಿ ಇರಲಿಲ್ಲ. ಅಲ್ಲದೆ ಮಗುವಿಗೆ ಫೀಡಿಂಗ್ ಬಾಟಲ್‍ನಲ್ಲಿ ಹಾಲು ಕುಡಿಯಲು ಆಗುವುದಿಲ್ಲ. ಹಾಗಾಗಿ ಈಕೆಗೆ ಈ ರೀತಿ ಮೋಸ ಮಾಡಬೇಕಾಯಿತು. ಹಾಸ್ಯದ ವಿಷಯ ಏನೆಂದರೆ ನಾನು ಅಳುತ್ತಿದ್ದೇನೆ. ಡ್ಯಾಡ್ ಆಫ್ ದಿ ಇಯರ್ ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ತಂದೆ ತನ್ನ ಮಗಳನ್ನು ಅಪ್ಪಿಕೊಂಡು ಟೀ ಶರ್ಟ್ ಒಳಗಿನಿಂದ ಬಾಟಲ್ ಮೂಲಕ ಹಾಲು ಕುಡಿಸುತ್ತಿದ್ದಾರೆ. ಏಕೆಂದರೆ ಮಗು ನೇರವಾಗಿ ಬಾಟಲ್ ನಿಂದ ಹಾಲು ಕುಡಿಯುತ್ತಿರಲಿಲ್ಲ. ಅಂದಹಾಗೆ ಈ ವ್ಯಕ್ತಿ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಸದ್ಯ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಹಲವರು ರೀ-ಟ್ವೀಟ್ ಮಾಡುತ್ತಿದ್ದಾರೆ. ಕೆಲವರು ನನಗೆ ಈ ಪ್ರಯತ್ನ ಇಷ್ಟವಾಯಿತು. ಇದು ತಂದೆಯ ಶುದ್ಧ ಪ್ರೀತಿ. ಈ ವಿಡಿಯೋ ಟ್ವೀಟ್ ಮಾಡಿದ್ದಕ್ಕೆ ಧನ್ಯವಾದಗಳು ಎಂದು ರೀ-ಟ್ವೀಟ್ ಮಾಡಿದ್ದಾರೆ.

ಮತ್ತೆ ಕೆಲವರು ಮಹಿಳೆಯರಿಗೆ ಈ ರೀತಿಯ ಬೆಂಬಲದ ಅಗತ್ಯವಿದೆ. ಎಲ್ಲರೂ ಈ ಮಾತನ್ನು ನೆನಪಿಟ್ಟುಕೊಳ್ಳಿ ಎಂದು ರೀ-ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ಮಗುವಿಗೆ ತಾಯಿ-ತಂದೆ ಸ್ತನ್ಯಪಾನ ಮಾಡಿದ ವ್ಯತ್ಯಾಸ ಗೊತ್ತಾಗಿದೆ. ಆದರೂ ಮಗು ಹಾಲು ಕುಡಿಯುತ್ತಿತ್ತು ಎಂದು ರೀ-ಟ್ವೀಟ್ ಮಾಡಿದ್ದಾರೆ.

https://twitter.com/Lgrishamousdahl/status/1196162183559647232?ref_src=twsrc%5Etfw%7Ctwcamp%5Etweetembed%7Ctwterm%5E1196162183559647232&ref_url=https%3A%2F%2Fwww.indiatoday.in%2Ftrending-news%2Fstory%2Fman-breastfeeds-baby-in-adorable-viral-video-read-that-again-1620565-2019-11-19

Comments

Leave a Reply

Your email address will not be published. Required fields are marked *