ಸೆಕ್ಸ್ ಟಾಯ್ಸ್ ಬಳಸಿ ಅಪ್ರಾಪ್ತೆಯರಿಗೆ ಮಹಿಳೆಯಿಂದ ಕಿರುಕುಳ

–  ಪತ್ನಿಯ ಅವಮಾನವೀಯ ಕೃತ್ಯ ಪತಿ ಆತ್ಮಹತ್ಯೆಗೆ ಶರಣು

ಹೈದರಾಬಾದ್: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪತ್ನಿಯ ಅವಮಾನವೀಯ ಕೃತ್ಯಕ್ಕೆ ಮನನೊಂದು ವ್ಯಕ್ತಿಯೊಬ್ಬ ಮೂರು ಅಂತಸ್ತಿನ ಕಟ್ಟಡದಿಂದ ಬಿದ್ದು ಮೃತಪಟ್ಟ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಪ್ರಕಾಶಂ ಜಿಲ್ಲೆಯ ಒಂಗೋಲ್ ನಗರದ ಕೃಷ್ಣ ಕಿಶೋರೆ (32) ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮಹಿಳೆ. ಆರೋಪಿಯ ಮೂರನೇ ಪತಿ, 47 ವರ್ಷದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಒಂಗೋಲ್ ನಗರದಲ್ಲಿ ಘಟನೆ ನಡೆದಿದ್ದು, ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾಗದ ಯುವಕರೇ ಟಾರ್ಗೆಟ್- ಬರೋಬ್ಬರಿ 14 ಮಂದಿಯೊಂದಿಗೆ ವಕೀಲೆಯ ಪ್ರೇಮ ಪುರಾಣ

ಕೃಷ್ಣ ಕಿಶೋರೆ ಪುರುಷರಂತೆ ಬಟ್ಟೆ ಧರಿಸಿ, ಹೇರ್ ಕಟ್ಟಿಂಗ್ ಮಾಡಿಸಿದ್ದಾಳೆ. ಈ ಮೂಲಕ ಅಪ್ರಾಪ್ತೆಯರನ್ನು ಪರಿಚಯ ಮಾಡಿಕೊಂಡು ಸೆಕ್ಸ್ ಟಾಯ್ಸ್ ಬಳಸಿ ಅವರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದಳು. 17 ವರ್ಷದ ಬಾಲಕಿ ಪ್ರಕಾಶಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅಧಿಕೃತ ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತೆಯ ದೂರಿನಲ್ಲಿ, ಕೃಷ್ಣ ಕುಮಾರ್ ರೆಡ್ಡಿ ಎಂಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿಸಿದ್ದಳು. ಆದರೆ ಪ್ರಕರಣದ ಪ್ರಾಥಮಿಕ ತನಿಖೆಯ ವೇಳೆ, ಆರೋಪಿ ಬೇರೆ ಯಾರು ಅಲ್ಲ, ಪುರುಷರ ಧಿರಿಸಿನಲ್ಲಿ ಓಡುತ್ತಿರುವ ಕೃಷ್ಣ ಕಿಶೋರೆ ಎನ್ನುವುದು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.

ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಒಂಗೋಲ್ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ.ರವಿ ಚಂದ್ರ, ಆರೋಪಿ ಮಹಿಳೆ ಪುರುಷರ ಬಟ್ಟೆಗಳನ್ನು ಧರಿಸುವುದನ್ನು ಇಷ್ಟಪಡುತ್ತಾಳೆ. ಪುರುಷನಂತೆ ಕಾಣಲು ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡಿದ್ದಾಳೆ. ಆರೋಪಿಯು ಈ ಮೊದಲು ಎರಡು ಬಾರಿ ಮದುವೆಯಾಗಿದ್ದಳು. ಆಕೆ 2016ರಲ್ಲಿ ತನ್ನ ಗ್ರಾಮವನ್ನು ತೊರೆದು ಒಂಗೋಲ್‍ಗೆ ಬಂದಿದ್ದಳು. ಈ ವೇಳೆ ಇಲ್ಲಿಯೇ 47 ವರ್ಷದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಳು. ಬಳಿಕ ಅಪ್ರಾಪ್ತ ಬಾಲಕಿಯರ ಪರಿಚಯ ಮಾಡಿ ಅವರೊಂದಿಗೆ ಆತ್ಮೀಯ ಸಂಬಂಧವನ್ನು ಪ್ರಾರಂಭಿಸಲು ಯತ್ನಿಸುತ್ತಿದ್ದಳು ಎಂದು ತಿಳಿಸಿದ್ದಾರೆ.

17 ವರ್ಷದ ಬಾಲಕಿ ಹಾಗೂ ಪತಿಯೊಂದಿಗೆ ಒಂದೇ ಮನೆಯಲ್ಲಿ ಇರಲು ಮಹಿಳೆ ಮುಂದಾಗಿದ್ದಳು. ಅಷ್ಟೇ ಅಲ್ಲದೆ 28 ವರ್ಷದ ಸ್ನೇಹಿತ ಮತ್ತು ಅಪ್ರಾಪ್ತೆಗೆ ನಕಲಿ ವಿವಾಹ ಮಾಡಿಸಲು ಮನವೊಲಿಸಿದ್ದಳು. ಈ ವಿಚಾರವನ್ನು ಸಂತ್ರಸ್ತೆಯು ಪೋಷಕರ ಮುಂದೆ ಹೇಳಿಕೊಂಡಿದ್ದಳು. ಇದರಿಂದ ಗಾಬರಿಗೊಂಡ ಬಾಲಕಿಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಕೃಷ್ಣ ಕಿಶೋರೆ ಕೃತ್ಯ ಬಯಲಿಗೆ ಬಂದಿತ್ತು ಎಂದು ಬಿ.ರವಿ ಚಂದ್ರ ಮಾಹಿತಿ ನೀಡಿದ್ದಾರೆ.

ಸಂತ್ರಸ್ತ ಬಾಲಕಿ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ಆರೋಪಿಯ ಮನೆಯ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಪತ್ನಿಯ ಕೃತ್ಯ ತಿಳಿದ ಪತಿ, ಪೊಲೀಸರಿಂದ ತಪ್ಪಿಸಿಕೊಂಡು ಮೂರನೇ ಮಹಡಿಯಿಂದ ಜಿಗಿದಿದ್ದ. ಪರಿಣಾಮ ಗಂಭೀರಾಗಿ ಗಾಯಗೊಂಡಿದ್ದ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆರೋಪಿ ಮಹಿಳೆಯ ಪತಿ ಮೃತಪಟ್ಟಿದ್ದಾನೆ. ಮಹಿಳೆಯ ಮನೆಯಲ್ಲಿದ್ದ ದೊಡ್ಡ ಬ್ಯಾಗ್‍ನಲ್ಲಿ ಸೆಕ್ಸ್ ಟಾಯ್ಸ್ ಸಿಕ್ಕಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿ.ರವಿ ಚಂದ್ರ ತಿಳಿಸಿದ್ದಾರೆ.

ಆರೋಪಿ ಕೃಷ್ಣ ಕಿಶೋರೆಯನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಬಂಧಿತಳ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *