ವಿದ್ಯಾರ್ಥಿನಿಗೆ ಕಾಮಪಾಠ-ಉಪನ್ಯಾಸಕನಿಗೆ ಬಿತ್ತು ಧರ್ಮದೇಟು

ಕಲಬುರಗಿ: ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನಿಗೆ ವಿದ್ಯಾರ್ಥಿಗಳು ಥಳಿಸಿದ್ದಾರೆ. ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.

ಚೆನ್ನು ಬಿರಾಜಿ ವಿದ್ಯಾರ್ಥಿಗಳಿಂದ ಒದೆ ತಿಂದ ಉಪನ್ಯಾಸಕ. ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ವಿಭಾಗದ ಉಪನ್ಯಾಸಕನಾಗಿರುವ ಚೆನ್ನು ವಿದ್ಯಾರ್ಥಿನಿಗಳಿಗೇ ಪಾಠ ಮಾಡುವದು ಬಿಟ್ಟು ತನ್ನ ಚಪ್ಪಲ ತೀರಿಸಿಕೊಳ್ಳಲು ಹೋಗಿದ್ದಾನೆ. ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಪಡೆದು ಅಸಭ್ಯ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ್ದಾನೆ. ಉಪನ್ಯಾಸಕನ ಕಾಟದಿಂದ ಬೇಸತ್ತ ವಿದ್ಯಾರ್ಥಿನಿ ರಹಸ್ಯವಾಗಿ ಮೊಬೈಲ್ ನಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದಾಳೆ.

ಈ ವಿಷಯ ವಿದ್ಯಾರ್ಥಿನಿಯ ಪೋಷಕರಿಗೆ ಗೊತ್ತಾಗುತ್ತಿದ್ದಂತೆ ಕಾಲೇಜಿನತ್ತ ಬಂದು ಕಾಮುಕನ ಉಪನ್ಯಾಸಕನ ಗ್ರಹಚಾರ ಬಿಡಿಸಿದ್ದಾರೆ. ವಿದ್ಯಾರ್ಥಿಗಳ ಎದುರೇ ಕ್ಲಾಸ್‌ರೂಂನಲ್ಲಿ ಥಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿನಿ ಕಡೆಯವರು ಎಲ್ಲಾ ವಿದ್ಯಾರ್ಥಿನಿಯರಿಗೇ ಕ್ಷಮೆ ಕೇಳುವಂತೆ ಬಾರಿಸಿದ್ದಾರೆ. ನಂತರ ಚೆನ್ನು ತರಗತಿ ಕೋಣೆಯಲ್ಲಿ ಎಲ್ಲ ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಿದ್ದಾನೆ.

ಈ ವಿಷಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಗಮನಕ್ಕೆ ಬರುತ್ತಿದ್ದಂತೆ, ಕೂಡಲೇ ಉಪನ್ಯಾಸಕ ಚೆನ್ನುವಿನ ರಾಜೀನಾಮೆ ಪಡೆದು ಮನೆಗೆ ಕಳುಹಿಸಿದ್ದಾರೆ. ಸದ್ಯ ಈ ಉಪನ್ಯಾಸಕನಿಗೆ ನೀಡಿರುವ ಧರ್ಮದೇಟಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *