ಕರ್ನಾಟಕದ ಮೊದಲ ಲೋಕಾಯುಕ್ತ ಎನ್. ವೆಂಕಟಾಚಲ ವಿಧಿವಶ

ಬೆಂಗಳೂರು: ಕರ್ನಾಟಕ ಮೊದಲ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದ ಎನ್. ವೆಂಕಟಾಚಲ(89) ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಇಂದು ವೆಂಕಟಾಚಲ ಅವರು ವಿಧಿವಶರಾಗಿದ್ದಾರೆ. ವಯಾಲಿಕಾವಲ್ ಮನೆಯಲ್ಲಿ ವೆಂಕಟಾಚಲ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕು ಮಿತ್ತೂರ್‍ನಲ್ಲಿ 1930, ಜುಲೈ 3 ರಂದು ವೆಂಕಟಾಚಲನವರು ಜನಿಸಿದರು. ನ್ಯಾ.ನಂಜೇಗೌಡ ವೆಂಕಟಾಚಲ ಅವರು ಬಿಎಸ್ಸಿ, ಬಿ ಎಲ್ ಪದವಿ ಪಡೆದಿದ್ದರು. 1955 ರಲ್ಲಿ ಕರ್ನಾಟಕ(ಮೈಸೂರು ರಾಜ್ಯ) ಹೈಕೋರ್ಟಿನ ವಕೀಲರಾಗಿದ್ದ ಅವರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.

1973 ರಿಂದ 1977ರವರೆಗೆ ಸರ್ಕಾರದಿಂದ ಕರ್ನಾಟಕ ಹೈಕೋರ್ಟಿನ ವಕೀಲರಾಗಿದ್ದ ವೆಂಕಟಾಚಲ ಅವರನ್ನು 1977 ರಿಂದ ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಯ್ತು. ಹಾಗೆಯೇ 2001ರಿಂದ 2006ರವರೆಗೆ ಅವರು ಲೋಕಾಯುಕ್ತರಾಗಿ ಸೇವೆ ಸಲ್ಲಿಸಿ, ಭ್ರಷ್ಟರಲ್ಲಿ ನಡುಕ ಹುಟ್ಟಿಸಿದ್ದರು.

Comments

Leave a Reply

Your email address will not be published. Required fields are marked *