ಪ್ರವಾಹದಲ್ಲಿ ಕೊಚ್ಚಿ ಹೋದ ಸಹೋದರರಿಗಾಗಿ ಶೋಧ ಕಾರ್ಯಾಚರಣೆ ಆರಂಭ

ಗದಗ: ಮಳೆಯಿಂದ ಮತ್ತೆ ಬೆಣ್ಣೆಹಳ್ಳ ಪ್ರವಾಹಕ್ಕೆ ಇಬ್ಬರು ಸಹೋದರರು ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಮಾಳವಾಡ ಬಳಿ ನಡೆದಿದೆ.

ಶನಿವಾರ ಸಂಜೆ ಬೆಣ್ಣೆಹಳ್ಳ ದಾಟುವಾಗ ಹದ್ಲಿ ಗ್ರಾಮದ ನಾಲ್ಕು ಜನ ಯುವಕರು ನೀರು ಪಾಲಾಗಿದ್ದರು. ಅದರಲ್ಲಿ ಇಬ್ಬರ ರಕ್ಷಣೆ ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ನರಗುಂದ ತಾಲೂಕಿನ ಹದ್ಲಿಗ್ರಾಮದ ಈರಪ್ಪ ಹಾಗೂ ಅಮೃತ್ ಇಬ್ಬರು ಈಜಿ ದಡ ಸೇರಿದ್ದಾರೆ. ಆದರೆ 30 ವರ್ಷದ ಕಳಸಪ್ಪ, ಹಾಗೂ 15 ವರ್ಷದ ಬಾಲಕ ಈರಣ್ಣ ನೀರು ಪಾಲಾಗಿದ್ದಾರೆ.

ಅಮಾವಾಸ್ಯೆಗೆ ದೇವರ ಪೂಜೆಗೆ ನದಿ ನೀರು ತರಲು ಹೋದ ವೇಳೆ ಈ ದುರ್ಘಟನೆ ನಡೆದಿದೆ. ಸದ್ಯ ನೀರು ಪಾಲಾದ ಯುವಕರಿಗೆ ರೋಣ ತಾಲೂಕಿನ ಮೆಣಸಗಿ ಬಳಿಯ ಬೆಣ್ಣೆಹಳ್ಳದಲ್ಲಿ ಎನ್‍ಡಿಆರ್‍ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ), ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳಿಯರು ಶೋಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಸದ್ಯ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಗದಗ ಜಿಲ್ಲೆ ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Comments

Leave a Reply

Your email address will not be published. Required fields are marked *