ಭಾರತದ ಶೂನ್ಯ ಬಡತನಕ್ಕೆ ಪುರಾವೆ ನೀಡಿದ ಆನಂದ್ ಮಹೀಂದ್ರಾ

ನವದೆಹಲಿ: ಸಕಾಲಿಕ ವಿಷಯಗಳ ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಹೀಂದ್ರ ಮೋಟಾರ್ ಮಾಲೀಕ ಆನಂದ್ ಮಹೀಂದ್ರಾ ಅವರು, ಮಕ್ಕಳು ಮಣ್ಣಿನಲ್ಲಿ ಕ್ಯಾರಂ ನಿರ್ಮಿಸಿ ಆಡುತ್ತಿರುವ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಕ್ಯಾರಂನ್ನು ಮರ ಅಥವಾ ಪ್ಲಾಸ್ಟಿಕ್ ನಿಂದ ತಯಾರಿಸಿದ ಬೋರ್ಡ್ ಮೇಲೆ ಆಡುತ್ತಾರೆ. ಆದರೆ ಫೋಟೊದಲ್ಲಿರುವ ಮಕ್ಕಳು, ನೆಲದ ಮೇಲೆ ಕ್ಯಾರಂ ಮಾಡಿ ಪ್ಲಾಸ್ಟಿಕ್ ಬಾಟಲಿ ಮುಚ್ಚಳವನ್ನು ಪಾನ್ ಗಳಾಗಿ ಬಳಕೆ ಮಾಡಿಕೊಂಡು ಕ್ಯಾರಂ ಆಡುತ್ತಿರುವುದನ್ನು ಕಾಣಬಹುದು. ಇದನ್ನು ಓದಿ: ವಿಡಿಯೋ ಶೇರ್ ಮಾಡಿ ಅಳು ತಡೆಯಲಾಗಲಿಲ್ಲ ಎಂದ ಆನಂದ್ ಮಹೀಂದ್ರಾ

ಈ ಫೋಟೋವನ್ನು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಅವರು, ಎಂತಹ ಸ್ಫೂರ್ತಿದಾಯಕ ಫೋಟೋ. ಭಾರತ ಶೂನ್ಯ ಬಡತನವನ್ನು ಹೊಂದಿದೆ ಎಂಬುವುದಕ್ಕೆ ಪುರಾವೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆನಂದ್ ಮಹೀಂದ್ರಾ ಅವರ ಈ ಪೋಸ್ಟ್ ಗೆ ಹಲವು ಮಂದಿ ಪ್ರತಿಕ್ರಿಯೆ ನೀಡಿ ಮೆಚ್ಚುಗೆ ಸೂಚಿಸಿದ್ದು, ಇದುವರೆಗೂ 4 ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟನ್ನು ರಿಟ್ವೀಟ್ ಮಾಡಿದ್ದಾರೆ. ಅಲ್ಲದೇ 27 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಟ್ವಿಟ್ಟರಿನಲ್ಲಿ ಆನಂದ್ ಮಹೀಂದ್ರಾ ಅವರು 70 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಈ ಹಿಂದೆಯೂ ಹಲವು ಬಾರಿ ಇಂತಹ ಹಲವು ಫೋಟೋ ಹಾಗೂ ವಿಡಿಯೋ, ಪೋಸ್ಟ್ ಗಳನ್ನು ಹಂಚಿಕೊಂಡಿದ್ದ ಆನಂದ್ ಮಹೀಂದ್ರಾ ಅವರು ಸಮಾಜದಲ್ಲಿನ ಸ್ಪೂರ್ತಿದಾಯಕ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದನ್ನು ಓದಿ: ಶಾಲಾ ಮಕ್ಕಳ ದುರ್ಗಾ ಮಾತೆ ಅವತಾರಕ್ಕೆ ಆನಂದ್ ಮಹೀಂದ್ರಾ ಫಿದಾ

Comments

Leave a Reply

Your email address will not be published. Required fields are marked *