ರಿಯಾಲಿಟಿ ಚೆಕ್ – ಛೋಟಾ ರಾಜನ್ ಜೊತೆಗೆ ಮೋದಿ ಫೋಟೋ ವೈರಲ್

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿ ಅವರ ಜೊತೆ ಭೂಗತ ಪಾತಕಿ ಛೋಟಾ ರಾಜನ್ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ಮೋದಿ ಅವರು ಬಿಳಿ ಬಣ್ಣದ ಶರ್ಟ್ ಹಾಕಿಕೊಂಡಿದ್ದಾರೆ. ಇವರ ಜೊತೆಗೆ ಮೋದಿಯ ಹಿಂಬದಿಯಲ್ಲಿ ಡಾನ್ ಛೋಟಾ ರಾಜನ್ ಕೂಡ ಇರುವುದು ಕಂಡು ಬಂದಿದೆ. ಇವರ ಜೊತೆ ಪ್ರಸ್ತುತ ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಇದ್ದಾರೆ.

ಈ ಫೋಟೋವನ್ನು ಫೇಸ್‍ಬುಕ್ ಟ್ವಿಟ್ಟರ್‍ನಲ್ಲಿ ಮೊದಲಿಗೆ ವಿಜಯ್ ಅಕ್ಷಿತ್ ಎಂಬವರ ಖಾತೆಯಿಂದ ಶೇರ್ ಆಗಿದ್ದು, ಭೂಗತ ಪಾತಕಿಗೂ ಪ್ರಧಾನಿ ಮೋದಿ ಅವರಿಗೂ ಯಾವ ರೀತಿಯ ಸಂಬಂಧ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಎಲ್ಲ ಕಡೆ ತುಂಬ ವೈರಲ್ ಆಗುತ್ತಿದೆ.

ಈ ರೀತಿಯ ಫೋಟೋ ವೈರಲ್ ಆಗುತ್ತಿದ್ದಂತೆ ಈ ಫೋಟೋ ನಿಜವೋ ಸಳ್ಳೋ, ಮೋದಿ ಅವರಿಗೆ ಛೋಟಾ ರಾಜನ್‍ಗೂ ಈ ಹಿಂದೆ ಸಂಪರ್ಕ ಇತ್ತ ಎಂದು ಅನುಮಾನಗಳು ಮೂಡಿದ್ದವು. ಆದರೆ ಈಗ ಈ ಫೋಟೋ ಅಸಲಿಯತ್ತು ಬಯಲಾಗಿದ್ದು, ಈ ಫೋಟೋ ನಿಜವಲ್ಲ ಯಾರೋ ಕಿಡಿಗೇಡಿಗಳು ಫೋಟೋಶಾಪ್ ಮಾಡಿ ಎಡಿಟ್ ಮಾಡಿ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ತಿಳಿದು ಬಂದಿದೆ.

https://www.facebook.com/photo.php?fbid=2346207449030344&set=a.1411675955816836&type=3&theater

ಈ ಫೋಟೋ ಬಗ್ಗೆ ಸುದ್ದಿ ಸಂಸ್ಥೆಯೊಂದು ಈ ಹಿಂದಿನ ಇಮೇಜ್‍ಗಳನ್ನು ಪರಿಶೀಲಿಸಿದಾಗ. ಈ ಫೋಟೋ ಮೋದಿ ಅವರು 1990 ರಲ್ಲಿ ಅಮೆರಿಕ ಪ್ರವಾಸಕ್ಕೆ ಹೋದಾಗ ತೆಗೆಸಿಕೊಂಡ ಫೋಟೋ ಆಗಿದ್ದು, ಆ ವೇಳೆ ಅವರ ಜೊತೆ ದೇವೇಂದ್ರ ಫಡ್ನವೀಸ್ ಅವರು ಹೋಗಿದ್ದರು ಎಂದು ತಿಳಿದು ಬಂದಿದೆ. ಈ ಫೋಟೋವನ್ನು 2014 ರಲ್ಲಿ ದಿ ಟೈಮ್ಸ್ ಆಫ್ ಇಂಡಿಯಾ ಒಂದು ಲೇಖನದ ಮೂಲಕ ಪ್ರಕಟಮಾಡಿತ್ತು.

ಈ ಫೋಟೋವನ್ನು ತೆಗೆದುಕೊಂಡ ಕೆಲ ಕಿಡಿಗೇಡಿಗಳು ಮೋದಿ ಅವರ ಹಿಂದೆ ನಿಂತಿದ್ದ ವ್ಯಕ್ತಿಯ ಮುಖಕ್ಕೆ ಛೋಟಾ ರಾಜನ್ ಅವರ ಮುಖವನ್ನು ಫೋಟೋಶಾಪ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *