ಮುದ್ದಾದ ಹೆಣ್ಣು ಮಗುವಿನ ತಂದೆಯಾದ ರಹಾನೆ

ಮುಂಬೈ: ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿದ್ದು, ಈ ವೇಳೆ ಅವರಿಗೆ ಸಿಹಿ ಸುದ್ದಿ ಲಭಿಸಿದೆ. ರಹಾನೆರ ಪತ್ನಿ ರಾಧಿಕಾ ಅವರು ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ರಹಾನೆಗೆ ಶುಭಕೋರಿ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದು, ಜೀವನದ ಬಹುಮುಖ್ಯ ಸಂತಸದ ದಿನಗಳು ಆರಂಭವಾಗಿದೆ ಎಂದು ತಿಳಿಸಿದ್ದಾರೆ. ಟೀಂ ಇಂಡಿಯಾ ಆಟಗಾರರಾದ ಧೋನಿ, ಹರ್ಭಜನ್, ಸುರೇಶ್ ರೈನಾ, ಹನುಮ ವಿಹಾರಿ ಬಳಿಕ ರಹಾನೆ ಅವರು ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

https://www.instagram.com/p/B2x_AA5AllF/

2014ರಲ್ಲಿ ಬಾಲ್ಯದ ಗೆಳತಿ ರಾಧಿಕಾರನ್ನು ಮದುವೆಯಾಗಿದ್ದರು. ಕಳೆದ ಒಂದು ವಾರದ ಹಿಂದೆಯಷ್ಟೇ ರಾಧಿಕಾ ಇನ್‍ಸ್ಟಾದಲ್ಲಿ ಬೇಬಿ ಬಂಪ್  ಫೋಟೋ ಪೋಸ್ಟ್ ಮಾಡಿದ್ದರು. ವಿಶ್ವಕಪ್ ಬಳಿಕ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ರಹಾನೆ ಭಾಗಿಯಾಗಿದ್ದರು. ವಿಶ್ವಕಪ್ ತಂಡದಲ್ಲಿ ರಹಾನೆ ಸ್ಥಾನ ಪಡೆಯಲು ವಿಫಲರಾದರೂ ಕೂಡ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ವೇಳೆಗೆ ತಂಡಕ್ಕೆ ಮರಳಲು ಯಶಸ್ವಿಯಾಗಿದ್ದರು.

https://www.instagram.com/p/B23txivA2Li/

Comments

Leave a Reply

Your email address will not be published. Required fields are marked *