‘ರುದ್ರಪ್ರಯಾಗ’ದಲ್ಲಿ ನಟಿಸಲು ಸುವರ್ಣಾವಕಾಶ – ಬೆಳಗಾವಿ, ಹುಬ್ಬಳ್ಳಿ, ಧಾರವಾಡದ ಮಂದಿಗೆ ಪ್ರಾಶಸ್ತ್ಯ

ಬೆಂಗಳೂರು: ‘ಬೆಲ್ ಬಾಟಂ’ ಸಿನಿಮಾ ಬಳಿಕ ಮತ್ತೆ ನಿರ್ದೇಶನದತ್ತ ಮುಖ ಮಾಡಿರುವ ನಿರ್ದೇಶಕ, ನಟ ರಿಷಬ್ ಶೆಟ್ಟಿ ‘ರುದ್ರಪ್ರಯಾಗ’ ಸಿನಿಮಾಗಾಗಿ ಸಿದ್ಧತೆ ನಡೆಸಿದ್ದಾರೆ. ಸದಾ ಒಂದಿಲ್ಲೊಂದು ವಿಶೇಷತೆ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ರಿಷಬ್ ಶೆಟ್ಟಿ, ಈ ಬಾರಿ ಟೈಟಲ್ ಮೂಲಕವೇ ಕುತೂಹಲ ಮೂಡಿಸಿದ್ದಾರೆ.

ರಿಷಬ್ ಶೆಟ್ಟಿ ಸದ್ಯ ತಮ್ಮ ‘ರುದ್ರಪ್ರಯಾಗ’ ಸಿನಿಮಾಗಾಗಿ ಹೊಸ ಕಲಾವಿದರ ಹುಟುಕಾಟವನ್ನು ನಡೆಸಿದ್ದಾರೆ. ಈ ಕುರಿತು ಕಲಾವಿದರು ಬೇಕಾಗಿದ್ದಾರೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕಲಾವಿದರ ಆಯ್ಕೆ ವೇಳೆ ಕೆಲ ಮಾಹಿತಿಯನ್ನು ಕೋರಿರುವ ರಿಷಬ್ ಅವರು, ಆಸ್ತಕಿ ಇರುವವರು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. ವಿಶೇಷ ಎಂದರೆ ಬೆಳಗಾವಿ, ಹುಬ್ಬಳ್ಳಿ, ಧಾರವಾಡದ ಮಂದಿಗೆ ರಿಷಬ್ ಪ್ರಾಶಸ್ತ್ಯ ನೀಡಿದ್ದಾರೆ.

ರಿಷಬ್ ಆಹ್ವಾನ ಇಂತಿದೆ: ‘ರುದ್ರಪ್ರಯಾಗ’ ಸಿನಿಮಾದಲ್ಲಿ ನಟಿಸಲು ಪುರುಷ ಹಾಗೂ ಮಹಿಳಾ ಕಲಾವಿದರಿಗೆ ಅವಕಾಶವಿದೆ. ಪುರುಷರಿಗೆ 35 ರಿಂದ 55 ವಯಸ್ಸು ನಿಗದಿ ಮಾಡಿದ್ದು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಯವರಾಗಿರಬೇಕು ಎಂದು ಹೇಳಿದ್ದಾರೆ. ಅಲ್ಲದೇ 30 ರಿಂದ 35 ವಯಸ್ಸಿನ ಮಹಿಳಾ ಕಲಾವಿದರು ಬೇಕಾಗಿದ್ದಾರೆ ಎಂದು ತಿಳಿಸಿದ್ದು, ಇಲ್ಲಿಯೂ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಯವರಾಗಿರಬೇಕು ಎಂದಿದ್ದಾರೆ.

ಹೆಚ್ಚಿನ ವಿವರಗಳು: ಚಿತ್ರದಲ್ಲಿ ನಟಿಸಲು ಆಸಕ್ತಿ ಹೊಂದಿರುವವರು ತಮ್ಮ 4 ಫೋಟೋ(ಮುಖದ ಮುಂಭಾಗ, ಎಡ, ಬಲ, ಮತ್ತು ಫುಲ್‍ಲೆಂಥ್ ಫೋಟೋ) ಕಳುಹಿಸಬೇಕು. ಆಡಿಷನ್ ಮಾಡಲು ಒಂದು ವಿಷಯವನ್ನು ನೀಡಿದ್ದಾರೆ. ಸರ್ಕಾರಿ ನೌಕರರಾಗಿ ಅಭಿನಯಿಸಿ ಮೇಲಾಧಿಕಾರಿ ಜೊತೆ 1 ತಿಂಗಳು ರಜೆ ನೀಡುವಂತೆ ಕೇಳುವ ದೃಶ್ಯವನ್ನು 60 ಸೆಕೆಂಡ್ ಮೀರದಂತೆ ಚಿತ್ರೀಕರಿಸಿ ಕಳುಹಿಸಿ ಕೊಡಬೇಕೆಂದು ರಿಷಭ್ ಶೆಟ್ಟಿ ಕೇಳಿಕೊಂಡಿದ್ದಾರೆ.

ಇದರ ಜೊತೆ ವೈಯಕ್ತಿಕ ವಿವರಗಳಾದ – ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸ, ನಟನಾ ಅನುಭವ (ಇದ್ದಲ್ಲಿ) ಕುರಿತು ಮಾಹಿತಿ ನೀಡಬೇಕಿದೆ.

ಈ ಮೇಲಿನ ಮಾಹಿತಿಗಳನ್ನು ತಿಳಿಸಲು ಅ.15 ಅಂತಿಮ ದಿನವಾಗಿದ್ದು, 80888 08302 ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮೆಸೇಜ್ ಕಳುಹಿಸಬಹುದಾಗಿದೆ.

ಅಂದಹಾಗೇ ‘ರುದ್ರಪ್ರಯಾಗ’ ಸಿನಿಮಾದ ಮುಖ್ಯ ಪಾತ್ರದಲ್ಲಿ ಅನಂತ್ ನಾಗ್ ಅವರು ನಟಿಸುವುದು ಖಚಿತವಾಗಿದ್ದು, ನಾಯಕಿಯಾಗಿ ಶ್ರದ್ದಾ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ.

Comments

Leave a Reply

Your email address will not be published. Required fields are marked *