ಖಾಸಗಿ ದೃಶ್ಯ ಸೆರೆ ಹಿಡಿದು ಬ್ಲ್ಯಾಕ್‌ಮೇಲ್‌ ಮಾಡ್ತಿದ್ದವನಿಗೆ ಬಿತ್ತು ಗೂಸಾ

ಬೆಂಗಳೂರು: ಯುವತಿ ಜೊತೆಗಿನ ಖಾಸಗಿ ದೃಶ್ಯವನ್ನು ಸೆರೆಹಿಡಿದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಖದೀಮನಿಗೆ ಸಖತ್ ಗೂಸಾ ಕೊಟ್ಟಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ನಡೆದಿದೆ.

ಸುನೀಲ್ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಯುವಕ. ಆರೋಪಿ ಸುನೀಲ್ ಮೇ 18ರಂದು ಯುವತಿ ಜೊತೆಗಿನ ಖಾಸಗಿ ದೃಶ್ಯಗಳನ್ನು ವಿಡಿಯೋ ಮಾಡಿದ್ದನು. ನಂತರ ಪದೇ ಪದೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಅತ್ಯಾಚಾರವೆಸಗಿದ್ದ ಎಂದು ನೊಂದ ಯುವತಿ ಆರೋಪಿಸಿದ್ದಾಳೆ.

ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ ಸುನೀಲ್ ತನ್ನ ಮನೆಗೆ ಸಂತ್ರಸ್ತೆಯನ್ನು ಬರಮಾಡಿಕೊಂಡು ಕೃತ್ಯವೆಸಗಿದ್ದನು. ನಂತರ ವಿಡಿಯೋ ತೋರಿಸಿ ಯುವತಿಗೆ ಕಿರುಕುಳ ಕೊಡುತ್ತಿದ್ದನು. ಸುನೀಲ್ ಕಿರುಕುಳಕ್ಕೆ ಬೇಸತ್ತ ನೊಂದ ಯುವತಿ ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆಗೆ ವಿಷಯ ತಿಳಿಸಿದ್ದಾಳೆ.

ವಿಷಯ ತಿಳಿದ ನಂತರ ಆರೋಪಿ ಸುನೀಲ್ ಮನೆಗೆ ಸಂಘಟನೆಯ ಸದಸ್ಯರು ನುಗ್ಗಿ ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *