12 ವರ್ಷದ ಬಾಲಕಿ ಮೇಲೆ 2 ವರ್ಷದಿಂದ 30 ಮಂದಿ ರೇಪ್- ತಂದೆ ಅರೆಸ್ಟ್

POLICE

ತಿರುವನಂತಪುರಂ: 12 ವರ್ಷದ ಬಾಲಕಿ ಮೇಲೆ 2 ವರ್ಷದಿಂದ 30 ಮಂದಿ ಅತ್ಯಾಚಾರಗೈದ ಪ್ರಕರಣವೊಂದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಸದ್ಯ ಬಾಲಕಿಯನ್ನು ಆಶ್ರಯ ಮನೆಗೆ ಕಳುಹಿಸಲಾಗಿದೆ. ಹಣಕ್ಕಾಗಿ ಮನೆಯವರೇ ಆಕೆಯ ಮೇಲೆ ಅತ್ಯಾಚಾರ ಮಾಡಿಸಿರುವುದಾಗಿ ತಿಳಿದುಬಂದಿದೆ.

ಬೆಳಕಿಗೆ ಬಂದಿದ್ದು ಹೇಗೆ?
ಶಾಲೆಯಲ್ಲಿ ಕೌನ್ಸಿಲಿಂಗ್ ನಡೆದ ವೇಳೆ ಬಾಲಕಿಯ ಮೇಲೆ ನಡೆದ ಕೃತ್ಯ ಬಯಲಾಗಿದೆ. ಮನೆಯಲ್ಲಿ ಏನು ಮಾಡುತ್ತೀಯಾ ಎಂದು ಕೇಳಿದಾಗ ಬಾಲಕಿ ತನ್ನ ಮೇಲೆ ಅತ್ಯಾಚಾರವಾದ ಘಟನೆಯನ್ನು ವಿವರಿಸಿದ್ದಾಳೆ. ಬಾಲಕಿಯ ಮಾತುಗಳನ್ನು ಕೇಳುತ್ತಿದ್ದ ಕೌನ್ಸಿಲರ್ ಗಳೇ ಒಂದು ಬಾರಿ ದಂಗಾಗಿದ್ದಾರೆ. ತನ್ನ ಕುಟುಂಬವನ್ನು ನಿಭಾಯಿಸಲು ಬಾಲಕಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಕೆಲಸ ಮಾಡಿರುವುದು ಕೌನ್ಸಿಲರ್ ಗಳಿಗೇ ಅಚ್ಚರಿ ಮೂಡಿಸಿದೆ.

ಆಕೆಯ ಕುಟುಂಬಕ್ಕೆ ಹಣದ ಅವಶ್ಯಕತೆ ಇತ್ತು. ಹೀಗಾಗಿ ಆಕೆ ಮೊದಲು ತನ್ನ ತಂದೆಯ ಗೆಳೆಯನಿಂದಲೇ ಅತ್ಯಾಚಾರಕ್ಕೆ ಒಳಗಾದಳು. ಆತ ಆಕೆಯ ಮೇಲೆ ಅತ್ಯಾಚಾರ ಮಾಡಿ ನಂತರ ಬಾಲಕಿಯ ತಂದೆಗೆ ಹಣದ ಅವಶ್ಯಕತೆ ಇದ್ದಾಗ ಹಣ ಕೊಡುತ್ತಿದ್ದನು. ಇಷ್ಟು ಮಾತ್ರವಲ್ಲದೇ ಬಾಲಕಿಯ ತಾಯಿಯನ್ನು ಕೂಡ ತಂದೆ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದನು.

ಸದ್ಯ ಬಾಲಕಿಯ ಹೇಳಿಕೆಗಳನ್ನು ಕೌನ್ಸಿಲರ್ಸ್ ರೆಕಾರ್ಡ್ ಮಾಡಿಕೊಂಡಿದ್ದು, ರೇಪ್ ಮಾಡಿರುವುದು ನಿಜನಾ ಎಂದು ತಿಳಿಯಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

ಪ್ರಕರಣ ಸಂಬಂಧ ಐಪಿಸಿ ಮತ್ತು ಪೋಕ್ಸೋ ಆ್ಯಕ್ಟ್ 354(ಮಾನ ಭಂಗ ಆರೋಪ) ಹಾಗೂ 376(ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತಂದೆ ಸೇರಿ ಮೂವರನ್ನು ಬಂಧಿಸಿದ್ದಾರೆ. ಉಳಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆದರೆ ಬಾಲಕಿಯ ತಾಯಿ ಮಾತ್ರ ಇವೆಲ್ಲವನ್ನೂ ಅಲ್ಲಗೆಳೆದಿದ್ದು, ನಮ್ಮ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ಹೀಗಾಗಹಿ ಮಗಳನ್ನು ನಮಗೆ ವಾಪಸ್ ಕೊಡಿ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *