– ನಾಳೆ ಸಂಜೆ ಎಲ್ಲಾ ವಿವರ ಕೊಡ್ತೀವಿ ಎಂದ ಅನರ್ಹ ಶಾಸಕರು
ಬೆಂಗಳೂರು: ಅನರ್ಹ ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಪ್ರತಾಪ್‍ಗೌಡ ಪಾಟೀಲ್, ರಮೇಶ್ ಜಾರಕಿಹೊಳಿ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರ ಬಂದ ಅನರ್ಹ ಶಾಸಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು. ಸ್ವಲ್ಪ ಸಮಯದ ಬಳಿಕ ಮಾತನಾಡಿದ ಅನರ್ಹ ಶಾಸಕ ಭೈರತಿ ಬಸವರಾಜ್, ನಾವು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ನಾವೇನೂ ತಪ್ಪು ಮಾಡಿಲ್ಲ. ಸುಪ್ರೀಂಕೋರ್ಟ್ ತೀರ್ಪು ನಮ್ಮ ಪರವಾಗಿಯೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪ ಚುನಾವಣೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಟಿಕೆಟ್ ಕೊಡುವುದಿಲ್ಲ ಅಂತ ಎಲ್ಲಿಯೂ ಹೇಳಿಕೊಂಡಿಲ್ಲ. ಅವರು ಟಿಕೆಟ್ ಕೊಡದಿದ್ದರೆ ಮುಂದೆ ನೋಡೋಣ ಎಂದು ಎಚ್ಚರಿಗೆ ಸಂದೇಶವೊಂದನ್ನು ರವಾನಿಸಿದರು.
ಶಿವರಾಮ್ ಹೆಬ್ಬಾರ್ ಅವರು, ಇನ್ನೆರಡು ದಿನ ಕಾದು ನೋಡಿ ಎಲ್ಲವೂ ನಿಮಗೆ ಗೊತ್ತಾಗುತ್ತದೆ. ಈಗಲೇ ಎಲ್ಲವ್ನೂ ಹೇಳಲು ಸಾಧ್ಯವಿಲ್ಲ ಎಂದರು. ಇತ್ತ ಪ್ರತಾಪ್‍ಗೌಡ ಪಾಟೀಲ್ ಅವರು, ಉಪ ಚುನಾವಣೆಗೆ ಹೋಗುವುದೇ ನಮ್ಮ ನಡೆ ಅಷ್ಟೇ. ಇದನ್ನು ಬಿಟ್ಟು ಏನನ್ನೂ ಹೇಳಲ್ಲ ಎಂದು ಕಾರ್ ಹತ್ತಿ ಹೊರಟು ಹೋದರು.

Leave a Reply