#BoycottIndianProducts ಆರಂಭಿಸಿ ಭಾರತೀಯರ ತಿರುಗೇಟಿಗೆ ಸುಸ್ತಾಯ್ತು ಪಾಕ್

– ಟ್ವೀಟ್ ಸುರಿಮಳೆಗೈದು ಪಾಕಿನ ಕಾಲೆಳೆಯುತ್ತಿರುವ ಭಾರತೀಯರು

ನವದೆಹಲಿ: ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿದ್ದ ಉದ್ವಿಗ್ನ ಪರಿಸ್ಥಿತಿ ಉಲ್ಭಣಗೊಂಡಿದೆ. ಮೊದಲೇ ಆರ್ಥಿಕವಾಗಿ ಕುಗ್ಗಿರುವ ಪಾಕಿಸ್ಥಾನ ಈಗ ಭಾರತದ ವಿರುದ್ಧ #BoycottIndianProducts(ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ) ಎಂಬ ಅಭಿಯಾನ ಶುರುಮಾಡಿಕೊಂಡಿದೆ. ಆದರೆ ಈ ಅಭಿಯಾನಕ್ಕೆ ಭಾರತೀಯರು ತಿರುಗೇಟು ನೀಡುತ್ತಿರುವ ಪರಿ ಪಾಕಿನ ಬೆವರಿಳಿಸುತ್ತಿದೆ.

ಹೌದು. ಪಾಕಿಸ್ತಾನ ಈ ಅಭಿಯಾನ ಮಾಡಿದರೆ ಭಾರತಕ್ಕೆ ಏನೂ ನಷ್ಟವಿಲ್ಲ. ನಮ್ಮ ಉತ್ಪನ್ನಗಳನ್ನು ಬಹಿಷ್ಕರಿಸಿದರೆ ನಿಮ್ಮ ದೇಶಕ್ಕೆ ನಷ್ಟ. ನಿಮ್ಮ ಈ ಒಳ್ಳೆಯ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಭಾರತೀಯರು ಪಾಕಿಗೆ ಸಖತ್ ಟಾಂಗ್ ನೀಡುತ್ತಿದ್ದಾರೆ. ಭಾರತೀಯರ ತಿರುಗೇಟುಗಳ ಸುರಿಮಳೆ ಪಾಕಿಸ್ತಾನಿಯರನ್ನು ಸುಸ್ತಾಗಿಸಿದೆ.

https://twitter.com/Abida07/status/1166548530292346880

ಪಾಕಿಸ್ತಾನ ಪ್ರಜೆಗಳು ಭಾರತೀಯ ಉತ್ಪನ್ನಗಳನ್ನು ಖರೀದಿಸಬೇಡಿ, ನೀವು ಖರೀದಿಸುವ ಉತ್ಪನ್ನಗಳಿಂದ ಸಿಗುವ ಹಣವನ್ನು ಭಾರತ ಕಾಶ್ಮೀರಿಯರನ್ನು ಕೊಲ್ಲಲು ಬಳಸುತ್ತಿದೆ ಎಂದು ಕೆಲ ಪಾಕಿಯರು #BoycottIndianProducts ಅಭಿಯಾನವನ್ನು ಇಂದು ಬೆಳಗ್ಗೆಯಿಂದ ಆರಂಭಿಸಿದ್ದಾರೆ. ಇದಕ್ಕೆ ಪಾಕಿಸ್ತಾನದ ಬಹುತೇಕ ನೆಟ್ಟಿಗರು, ಬೆಂಬಲ ನೀಡಿ ದೊಡ್ಡದಾಗಿ #BoycottIndianProducts ಎಂದು ಹ್ಯಾಷ್‍ಟ್ಯಾಗ್ ಹಾಕಿಕೊಂಡು ಟ್ವೀಟ್ ಮಾಡುತ್ತಿದ್ದಾರೆ.

ಈ ಟ್ವೀಟ್‍ಗಳನ್ನು ನೋಡಿ ಭಾರತೀಯರು ಬಿದ್ದು ಬಿದ್ದು ನಗುತ್ತಿದ್ದಾರೆ. ನಾವೇನು ನಿಮ್ಮ ದುಡ್ಡನ್ನೇ ನಂಬಿ ಕುಳಿತಿಲ್ಲ. ಮೊದಲು ಕತ್ತೆ ರಫ್ತು ಮಾಡುತ್ತಿದ್ದವರು ಈಗ ಬೀದಿ ನಾಯಿಗಳ ರಫ್ತು ಮಾಡುವ ಪರಿಸ್ಥಿತಿಗೆ ಬಂದಿದ್ದೀರಾ. ನೀವು ನಮ್ಮ ಬಗ್ಗೆ ಮಾತನಾಡುತ್ತೀರಾ ಎಂದು ಟಾಂಗ್ ಕೊಟ್ಟಿದ್ದಾರೆ. ಕೆಲವರು ಟ್ವೀಟ್‍ನಲ್ಲಿ, ಭಾರತದ ಇಂಡಸ್ ನದಿ ನೀರು ಪಾಕಿಸ್ತಾನಕ್ಕೆ ಹರಿದು ಬರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಶೌರ್ಯ ಪ್ರದರ್ಶನ ಮಾಡುವ ನೀವು ಇಂಡಸ್ ನೀರನ್ನು ಬಹಿಷ್ಕಾರ ಮಾಡಿ ಎಂದು ಸವಾಲು ಎಸೆದಿದ್ದಾರೆ. ಇನ್ನೂ ಕೆಲವರು, ಪಾಕಿನ ಹುಚ್ಚು ಅಭಿಯಾನ ಕಂಡು ಸಿಕ್ಕಾಪಟ್ಟೆ ನಗುಬರುತ್ತಿದೆ. ಈಗಾಗಲೇ ಪಾಕಿಸ್ತಾನ ಆರ್ಥಿಕತೆ ಪಾತಾಳ ಕಂಡಿದೆ. ಇದರಿಂದ ಮತ್ತಷ್ಟು ಆರ್ಥಿಕತೆ ಕುಸಿಯಲಿದೆ ಎಂದು ಎಂದು ಕಮೆಂಟ್ ಮಾಡಿದ್ದಾರೆ.

ಈ ವಿಚಾರಕ್ಕೆ ಪಾಕಿಸ್ತಾನ ಮತ್ತೆ ಭಾರತೀಯರಿಂದ ಟ್ರೋಲ್ ಆಗುತ್ತಿದೆ. ಚಿತ್ರ ವಿಚಿತ್ರವಾಗಿ ಪಾಕಿನ ಈ ಅಭಿಯಾನವನ್ನು ಭಾರತೀಯರು ಟ್ರೋಲ್ ಮಾಡಿಕೊಂಡು ಪಾಕಿಸ್ತಾನಿಯರ ಕಾಲೆಳೆಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *