ಇಂದು ಮಧ್ಯಾಹ್ನ ನೂತನ ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ 17 ಮಂದಿ ಶಾಸಕರು ಮಂತ್ರಿಯಾಗಿ ಪ್ರಯಾಣವಚನ ಸ್ವೀಕರಿಸಿ ನಾಲ್ಕು ದಿನಗಳಾದರೂ ಯಾರಿಗೂ ಅಧಿಕೃತವಾಗಿ ಖಾತೆ ಹಂಚಿಕೆ ಮಾಡಿರಲಿಲ್ಲ. ಇದೀಗ ಇಂದು ಮಧ್ಯಾಹ್ನ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಿದ್ದಾರೆ.

ಹೈಕಮಾಂಡ್ ಒಪ್ಪಿಗೆ ಸೂಚಿದ ನಂತರ ಸಿಎಂ ಯಡಿಯೂರಪ್ಪ ಇಂದು ಸಚಿವರಿಗೆ ಖಾತೆ ಹಂಚಿಕೆಗೆ ಮಾಡಲಿದ್ದಾರೆ. ಸತತ ಒಂದೂವರೆ ಗಂಟೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಸಿಎಂ ಯಡಿಯೂರಪ್ಪ ಅವರು ಮಾತುಕತೆ ನಡೆಸಿದ್ದಾರೆ. ಹೀಗಾಗಿ ಯಾರಿಗೆ ಯಾವ ಖಾತೆ ಹಂಚಿಕೆಯಾಗುತ್ತೆ?, ಬಿಎಸ್‍ವೈ ಆಪ್ತರಿಗೆ ಪ್ರಬಲ ಖಾತೆ ಸಿಗುತ್ತಾ? ಎಂದು ಕಾದು ನೋಡಬೇಕಿದೆ.

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ದೆಹಲಿಯಲ್ಲಿ ಅಮಿತ್ ಶಾರನ್ನು ಭೇಟಿಯಾಗಿ ಸುಮಾರು ಒಂದೂವರೆ ಗಂಟೆಗಳ ಕಾಲ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಹೀಗಾಗಿ ಮಧ್ಯಾಹ್ನ ಯಾರಿಗೆ ಯಾವ ಯಾವ ಇಲಾಖೆ ಹಂಚಿಕೆ ಮಾಡಬೇಕು ಎಂದು ಫೈನಲ್ ಮಾಡಿದ್ದೇವೆ ಎಂದು ತಿಳಿಸಿದರು.

ಸಂಭವನೀಯ ಖಾತೆ
* ಸಿಎಂ ಯಡಿಯೂರಪ್ಪ – ಹಣಕಾಸು, ಜಲಸಂಪನ್ಮೂಲ, ಇಂಧನ, ಗುಪ್ತದಳ, ವಾರ್ತಾ, ಐಟಿಬಿಟಿ, ಗಣಿ ಮತ್ತು ಭೂ ವಿಜ್ಞಾನ
* ಜಗದೀಶ್ ಶೆಟ್ಟರ್ – ಕಂದಾಯ
* ಜೆ.ಸಿ.ಮಾಧುಸ್ವಾಮಿ- ಕಾನೂನು ಮತ್ತು ಸಂಸದೀಯ /ಕೃಷಿ
* ಸುರೇಶ್ ಕುಮಾರ್- ಪ್ರಾಥಮಿಕ, ಪ್ರೌಢ ಶಿಕ್ಷಣ/ನಗರಾಭಿವೃದ್ಧಿ
* ಬಸವರಾಜ ಬೊಮ್ಮಾಯಿ- ಗ್ರಾಮೀಣಾಭಿವೃದ್ಧಿ/ ಬೃಹತ್ ಕೈಗಾರಿಕೆ
* ಈಶ್ವರಪ್ಪ – ಲೋಕೋಪಯೋಗಿ

* ಡಾ.ಅಶ್ವಥ್‍ನಾರಾಯಣ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ/ ವೈದ್ಯಕೀಯ ಶಿಕ್ಷಣ
* ವಿ.ಸೋಮಣ್ಣ –  ವಸತಿ/ನಗರಾಭಿವೃದ್ಧಿ
* ಆರ್.ಅಶೋಕ್- ಬೆಂಗಳೂರು ಅಭಿವೃದ್ಧಿ/ಗೃಹ
* ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ
* ಲಕ್ಷ್ಮಣ ಸವದಿ – ಸಹಕಾರ/ಸಕ್ಕರೆ
* ಸಿ.ಟಿ.ರವಿ- ಉನ್ನತ ಶಿಕ್ಷಣ/ ಅರಣ್ಯ
* ಶ್ರೀರಾಮುಲು- ಸಮಾಜ ಕಲ್ಯಾಣ/ ಸಾರಿಗೆ
* ಗೋವಿಂದ ಕಾರಜೋಳ- ಸಮಾಜ ಕಲ್ಯಾಣ/ ಗೃಹ/ ಸಮಾಜ ಕಲ್ಯಾಣ
* ಸಿ.ಸಿ. ಪಾಟೀಲ್- ಕನ್ನಡ ಮತ್ತು ಸಂಸ್ಕೃತಿ/ ತೋಟಗಾರಿಕೆ
* ನಾಗೇಶ್ – ಸಣ್ಣ ಕೈಗಾರಿಕೆ/ ಸಣ್ಣ ನೀರಾವರಿ/ ಕಾರ್ಮಿಕ
* ಪ್ರಭು ಚೌಹಾಣ್ – ಯುವಜನ ಸೇವೆ ಮತ್ತು ಕ್ರೀಡೆ/ ಕೌಶಲ್ಯಾಭಿವೃದ್ಧಿ
* ಕೋಟ ಶ್ರೀನಿವಾಸ ಪೂಜಾರಿ- ಮೀನುಗಾರಿಕೆ/ ಮುಜರಾಯಿ/ ಬಂದರು.

Comments

Leave a Reply

Your email address will not be published. Required fields are marked *