ಕಾಲಿಗೆ ಚಪ್ಪಲಿಯೂ ಇಲ್ದೆ ಚೆನ್ನೈನ ಬೀದಿಯಲ್ಲಿ ಹುಚ್ಚ ವೆಂಕಟ್

ಚೆನ್ನೈ: ನಟ ಹುಚ್ಚ ವೆಂಕಟ್ ಕಾಲಿಗೆ ಚಪ್ಪಲಿಯೂ ಇಲ್ಲದೆ ಚೆನ್ನೈನ ಬೀದಿಯಲ್ಲಿ ಅಲೆದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನಟ ಭುವನ್ ಕೂಡ ವಿಡಿಯೋ ಶೇರ್ ಮಾಡಿ ಬೇಸರ ವ್ಯಕ್ತ ಪಡಿಸಿದ್ದಾರೆ.

ನಟ ಭುವನ್ ಅಭಿನಯದ ‘ರಾಂಧವ’ ಚಿತ್ರತಂಡ ಚೆನ್ನೈಗೆ ತೆರಳಿತ್ತು. ಈ ವೇಳೆ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಚೆನ್ನೈ ಬೀದಿಯಲ್ಲಿ ಅದೂ ಬರಿಗಾಲಲ್ಲಿ ಚಪ್ಪಲಿ ಇಲ್ಲದೇ ಕೊಳಕು ಬಟ್ಟೆ ಹಾಕಿಕೊಂಡು ವೆಂಕಟ್ ನಡೆದುಕೊಂಡು ಹೋಗುವುದನ್ನು ನೋಡಿದ್ದಾರೆ. ತಕ್ಷಣ ಅವರನ್ನು ಮಾತನಾಡಿಸಲು ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ಸ್ನೇಹಿತರು ಹೋಗಿದ್ದಾರೆ. ಆದರೆ ಹುಚ್ಚ ವೆಂಕಟ್ ಯಾವುದೇ ರೀತಿ ಸಹಕರಿಸದೆ ಮುಂದೆ ಹೋಗಿದ್ದಾರೆ.

ತಕ್ಷಣ ಆ ವಿಡಿಯೋವನ್ನ ನಟ ಭುವನ್ ಅವರಿಗೆ ಕಳುಹಿಸಿದ್ದಾರೆ. ಅವರು ತಮ್ಮ ಫೇಸ್ ಬುಕ್‍ನಲ್ಲಿ ಹಂಚಿಕೊಂಡಿದ್ದು, “ಗೆಳೆಯರೆ, ಹುಚ್ಚ ವೆಂಕಟ್ ಯೂಟ್ಯೂ ಸ್ಟಾರ್ ಅವರು ವಿಡಿಯೋ ನೋಡಿ ನನಗೆ ಕರಳು ಚಿವುಟಿದ ಹಾಗೆ ಆಯಿತು, ಹಾಕೋದಕ್ಕೆ ಕಾಲಿಗೆ ಚಪ್ಲೀನು ಇಲ್ದೆ ಚೆನ್ನೈನ ವೊಡಾಪಳನಿಯಲ್ಲಿ ಈ ರೀತಿ ಓಡಾಡುತ್ತಿರುವ ವಿಡಿಯೋ ನಮ್ಮ ರಾಂಧವ ಚಿತ್ರದ ಸದಸ್ಯರು ಕಳುಹಿಸಿಕೊಟ್ಟರು. ನಿಮಗೆ ಅವರ ಕುಟುಂಬ ಅಥವಾ ಗೆಳೆಯರು ಪರಿಚಯವಿದ್ದಲ್ಲಿ ನನಗೆ ತಿಳಿಸಿ. ದಯವಿಟ್ಟು. ಸಹಾಯ ಮಾಡೋಣ. ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ. ಪಾಪ” ಎಂದು ಬರೆದು ವಿಡಿಯೋ ಪೋಸ್ಟ್ ಮಾಡಿದ್ದಾರೆ.

https://www.facebook.com/IamBhuvannPonannaa/videos/432987807303087/

Comments

Leave a Reply

Your email address will not be published. Required fields are marked *