ಉಗ್ರರ ಭೀತಿ – 4 ನಗರಗಳಲ್ಲಿ ಹೈಅಲರ್ಟ್

– ಬೆಂಗಳೂರಲ್ಲಿ ಸೆಕ್ಯೂರಿಟಿ ಟೈಟ್

ಬೆಂಗಳೂರು: ಉಗ್ರರ ಭೀತಿ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಬೆಂಗಳೂರಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.  ಮಂಗಳೂರಿನಲ್ಲಿ ಈಗಾಗಲೇ 9 ಮಂದಿ ಶಂಕಿತರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಮೇಲೆ ಕೂಡ ಉಗ್ರರ ಕರಿನೆರಳು ಇರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಕೇಂದ್ರ ಗುಪ್ತಚರ ಇಲಾಖೆಯನ್ನ ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸರು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಮೆಜೆಸ್ಟಿಕ್, ಮೆಜೆಸ್ಟಿಕ್ ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣಗಳಲ್ಲಿ ಟೈಟ್ ಸೆಕ್ಯುರಿಟಿ ನಿಯೋಜನೆ ಮಾಡಲಾಗಿದೆ.

ಮಂಗಳೂರಿನ ಕದ್ರಿ ಲಾಡ್ಜ್ ಒಂದರಲ್ಲಿ ತಂಗಿದ್ದ ಒಂಬತ್ತು ಮಂದಿ ಶಂಕಿತರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತರು ಕೇರಳ, ಮಡಿಕೇರಿ ಮತ್ತು ಮಂಗಳೂರು ಮೂಲದವರಾಗಿದ್ದು, ಟಿಯುವಿ 300 ಮಹೀಂದ್ರಾ ಕಾರಿನಲ್ಲಿ ಪಂಪ್ ವೆಲ್ ಲಾಡ್ಜ್ ಗೆ ಬಂದಿದ್ದರು. ಅಷ್ಟೇ ಅಲ್ಲದೆ ತಾವು ನ್ಯಾಷನಲ್ ಕ್ರೈಂ ಇನ್ವೆಸ್ಟಿಗೇಷನ್ ಬ್ಯೂರೋ ಅಧಿಕಾರಿಗಳು ಎಂದು ಹೇಳಿಕೊಂಡಿದ್ದರು. ಒಂಬತ್ತು ಜನರ ಪೈಕಿ 5 ಜನರು ಗನ್ ಹಿಡಿದಿದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದಾರೆ.

ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಪಂಪ್ ವೆಲ್ ಲಾಡ್ಜ್ ದೌಡಾಯಿಸಿದ ಪೊಲೀಸರು ಶಂಕಿತ 9 ಜನರನ್ನು ಬಂಧಿಸಿದ್ದು, ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *