ಜನರೇಟರ್ ಬಳಸಿ ಮೊಬೈಲ್ ಚಾರ್ಜ್ ಮಾಡಿ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದಾರೆ ಸಂತ್ರಸ್ತರು

ಬೆಳಗಾವಿ(ಚಿಕ್ಕೋಡಿ): ಎಡಬಿಡದೆ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ನದಿ ತೀರದ ಗ್ರಾಮಗಳಲ್ಲಿ ಒಂದೆಡೆ ಪ್ರವಾಹ ಸೃಷ್ಟಿಯಾಗಿದ್ದರೆ, ಇನ್ನೊಂದೆಡೆ ವಿದ್ಯುತ್ ಇಲ್ಲದೆ ಜನ ಪರದಾಡುತ್ತಿದ್ದಾರೆ.

ಈಗಾಗಲೇ ಜಿಲ್ಲೆಯ 323 ಗ್ರಾಮಗಳು ಪ್ರವಾಹ ಸ್ಥಿತಿಯನ್ನು ಎದುರಿಸುತ್ತಿದೆ. ಈ ನಡುವೆ ಸುತ್ತಮುತ್ತಲು ಏನಾಗುತ್ತಿದೆ ಎಂಬುದನ್ನು ತಿಳಿಯಲು ಯಾವುದೇ ಸಂವಹನ ಸೌಲಭ್ಯವಿಲ್ಲದೆ, ಬೇರೆಡೆಗೆ ಹೋಗಲು ರಸ್ತೆ ಸಂಪರ್ಕವಿಲ್ಲದೆ ಜನರು ಕಂಗಲಾಗಿದ್ದರೆ. ಜಿಲ್ಲೆಯ ಬಹುತೇಹ ಗ್ರಾಮಗಳು ಅಲ್ಲಿನ ಹರಿಯುವ ನದಿಗಳ ಅಬ್ಬರಕ್ಕೆ ಜಲಾವೃತಗೊಂಡಿದೆ. ವಿದ್ಯುತ್ ಸಂಪರ್ಕವಿಲ್ಲದೆ ನದಿ ಪಾತ್ರದ ಜನರು ಕತ್ತಲಲ್ಲಿ ಮುಳುಗಿದ್ದಾರೆ.

ಜನರ ಬಳಿ ಇರುವ ಮೊಬೈಲ್‍ಗಳೆಲ್ಲಾ ಸ್ವಿಚ್ ಆಫ್ ಆಗಿದ್ದು, ತಮ್ಮ ಆಪ್ತರನ್ನು ಸಂಪರ್ಕ ಮಾಡಲು ಆಗದೇ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಪಂಪ್ ಗಳಿಗೆ ಬಳಸುತ್ತಿದ್ದ ಡೀಸೆಲ್ ಜನರೇಟರ್ ಬಳಸಿಕೊಂಡು ಮೊಬೈಲ್‍ಗಳನ್ನು ಚಾರ್ಜ್ ಮಾಡುತ್ತಿದ್ದಾರೆ.

ಜನರೇಟರ್ ಬಳಸಿಕೊಂಡು ಜನರು ಸಾಮೂಹಿಕವಾಗಿ ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈಗಾಗಲೇ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯದಲ್ಲಿ ಎನ್‍ಡಿಆರ್‍ಎಫ್ ತಂಡ ತೊಡಗಿದೆ. ನಿರಾಶ್ರಿತರಿಗಾಗಿ ಗಂಜಿ ಕೇಂದ್ರಗಳನ್ನೂ ಕೂಡ ತೆರೆಯಲಾಗಿದೆ.

https://www.youtube.com/watch?v=xy9ITwQCxI0

Comments

Leave a Reply

Your email address will not be published. Required fields are marked *