ಧೋನಿಗೆ ಹೊಸ ‘ಆಟಿಕೆ’ ಗಿಫ್ಟ್ ಕೊಟ್ಟ ಪತ್ನಿ ಸಾಕ್ಷಿ

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ನಿವಾಸಕ್ಕೆ ಹೊಸ ಕಾರಿನ ಆಗಮನ ಆಗಿದ್ದು, ಧೋನಿ ಪತ್ನಿ ಸಾಕ್ಷಿ ಅವರು ಹೊಸ ಕಾರಿನ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಧೋನಿ ಅವರಿಗೆ ಬೈಕ್ ಹಾಗೂ ಕಾರುಗಳ ಮೇಲೆ ಇರುವ ಪ್ರೀತಿ ಅಭಿಮಾನಿಗಳಿಗೆ ತಿಳಿದಿದೆ. ಈಗಾಗಲೇ ಧೋನಿ ಅವರ ಬಳಿ ವಿವಿಧ ಬೈಕ್ ಹಾಗೂ ಕಾರುಗಳು ಇವೆ. ನೂತನ ಕಾರಿನ ಫೋಟೋ ಶೇರ್ ಮಾಡಿರುವ ಸಾಕ್ಷಿ ಅವರು, ಕಾರಿಗೆ ಸ್ವಾಗತ ಕೋರಿ, ನಿಮ್ಮ ಆಟಿಕೆ ಇಲ್ಲಿ ಬಂದಿದೆ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದೆ ಎಂದು ಬರೆದುಕೊಂಡಿದ್ದಾರೆ.

https://www.instagram.com/p/B08c3ftnGUz/

ಅಂದಹಾಗೇ ಸದ್ಯ ನೂತನ ಗ್ರ್ಯಾಂಡ್ ಚೆರೋಕಿ ಕಾರನ್ನು ಖರೀದಿ ಮಾಡಿದ್ದು, ಕೆಂಪು ಬಣ್ಣದ ಕಾರು ಎಲ್ಲರನ್ನು ಆಕರ್ಷಿಸಿದೆ. ಅಂದಹಾಗೆ ಭಾರತದಲ್ಲಿ ಖರೀದಿಸಿದ ಮೊದಲ ಗ್ರ್ಯಾಂಡ್ ಚೆರೋಕಿ ಕಾರ್ ಇದಾಗಿದೆ ಎಂದು ಸಾಕ್ಷಿ ಧೋನಿ ತಿಳಿಸಿದ್ದಾರೆ. ಸದ್ಯ ಜಮ್ಮು ಕಾಶ್ಮೀರದಲ್ಲಿ ಸೇನೆಯ ಕರ್ತವ್ಯ ನಿರ್ವಹಿಸುತ್ತಿರುವ ಧೋನಿ, ಆಗಸ್ಟ್ 15 ವರೆಗೂ ಸೇನೆಯಲ್ಲಿ ಇರುತ್ತಾರೆ.

ಈಗಾಗಲೇ ಈಗಾಗಲೇ ಹಲವು ಕಂಪೆನಿಗಳ ವಿವಿಧ ಶ್ರೇಣಿಯ ಬೈಕ್‍ಗಳಿದ್ದು, ದಿ ಕಾನ್ಫಿಡರೇಟ್ ಫ್ಯಾಟ್‍ಬಾಯ್, ಯಮಹಾ ವೈಝಡ್‍ಎಫ್600, ಡುಗಾಟಿ 1098, ಥಂಡರ್ ಕ್ಯಾಟ್, ಕವಾಸಕಿ ನಿಂಝಾ ಝಡ್‍ಎಕ್ಸ್14ಆರ್ ಹಾಗೂ ಇದೇ ಕಂಪೆಮಿಯ ನಿಂಝಾ ಎಚ್-2 ಬೈಕ್‍ಗಳನ್ನು ಹೊಂದಿದ್ದಾರೆ. ಕ್ರಿಕೆಟ್‍ನಿಂದ ಬಿಡುವು ಸಿಕ್ಕ ಸಂದರ್ಭದಲ್ಲಿ ಧೋನಿ ಅವರು ಜಾಲಿ ರೈಡ್‍ಗೆ ತೆರಳುತ್ತಾರೆ. ಅಲ್ಲದೇ ತಮ್ಮ ನಿವಾಸ ಬಳಿ ಕಾರು, ಬೈಕ್ ಗಳಿಗಾಗಿಯೇ ಧೋನಿ ಒಂದು ಶೋ ರೂಮ್ ನಿರ್ಮಿಸಿದ್ದಾರೆ. ಈ ಹಿಂದೆ ಸಾಕ್ಷಿ ಧೋನಿ ಪತಿಯ ಬೈಕ್ ಹಾಗೂ ಕಾರುಗಳನ್ನು ಕಾರುಗಳನ್ನು ಅಟಿಕೆಗಳು ಎಂದು ಕರೆದಿದ್ದರು.

https://www.instagram.com/p/Bldp2xtFMms/

Comments

Leave a Reply

Your email address will not be published. Required fields are marked *