ಪ್ರವಾಹದಿಂದ ರಕ್ಷಿಸಿದ NDRF ಸಿಬ್ಬಂದಿ ಕಾಲಿಗೆ ನಮಸ್ಕರಿಸಿದ ಮಹಿಳೆ

ಮುಂಬೈ/ಕೋಲ್ಹಾಪುರ: ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋಲ್ಹಾಪುರ, ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗೆ ಎನ್‍ಡಿಆರ್ ಎಫ್ ಸಿಬ್ಬಂದಿ ಮಳೆಯನ್ನು ಲೆಕ್ಕಿಸದೇ ಕಾರ್ಯಚರಣೆ ನಡೆಸುತ್ತಿದ್ದಾರೆ. ನಿರಾಶ್ರಿತ ಮಹಿಳೆ ತಮ್ಮನ್ನು ರಕ್ಷಿಸಿದ ಎನ್‍ಡಿಆರ್ ಎಫ್ ಸಿಬ್ಬಂದಿಯ ಕಾಲಿಗೆ ನಮಸ್ಕರಿಸಿರುವ ವಿಡಿಯೋ ವೈರಲ್ ಆಗಿದೆ.

ಪ್ರವಾಹಕ್ಕೆ ತುತ್ತಾಗಿರುವ ಕೋಲ್ಹಾಪುರ ಪ್ರದೇಶದಲ್ಲಿ ಮಹಿಳೆ ಬೋಟ್ ನಲ್ಲಿ ಎನ್‍ಡಿಆರ್‍ಎಫ್ ಸಿಬ್ಬಂದಿಗೆ ನಮಸ್ಕರಿಸುವ ದೃಶ್ಯಗಳು ಖಾಸಗಿ ವಾಹಿನಿಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಬ್ಬಂದಿ ಕಾಲಿಗೆ ನಮಸ್ಕರಿಸೋದು ತಪ್ಪು ಎಂದು ಹೇಳಿದರೂ, ನೀವು ನನ್ನ ಜೀವವನ್ನು ರಕ್ಷಿಸಿದ್ದೀರಿ ಎಂದು ಕೈ ಮುಗಿದು ಮಹಿಳೆ ಧನ್ಯವಾದ ಸಲ್ಲಿಸಿದ್ದಾರೆ. ವಿಡಿಯೋದಲ್ಲಿ ನಮಗೆ ಸಿಬ್ಬಂದಿ ಮತ್ತು ಮಹಿಳೆ ಮಾತುಗಳು ಕೇಳಿಸಲ್ಲ. ಮಾತುಗಳ ಹೇಳುವದಕ್ಕಿಂತ ಹೆಚ್ಚಿನ ವಿಷಯವನ್ನು ಆ ಎಲ್ಲ ದೃಶ್ಯಗಳು ನೋಡುಗರಿಗೆ ಮನದಟ್ಟು ಮಾಡಿವೆ.

ಇತ್ತ ಕರ್ನಾಟಕದ ಬಹುತೇಕ ಜಿಲ್ಲೆಗಳು ನದಿಗಳ ಅಬ್ಬರಕ್ಕೆ ಬೆಚ್ಚಿ ಬೀಳುತ್ತಿವೆ. ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಗ್ರಾಮಗಳು ಜಲಾವೃತಗೊಂಡಿವೆ. ನಿರಾಶ್ರಿತರಿಗಾಗಿ ಸ್ಥಳೀಯ ಸುರಕ್ಷಿತ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

Comments

Leave a Reply

Your email address will not be published. Required fields are marked *