ಮುಂಬೈ: ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ವಡೋದರ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಅಲ್ಲದೆ ಸಂತ್ರಸ್ತರಿಗೆ ಊಟ ಬಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹದ ಸ್ಥಿತಿ ಎದುರಾಗಿದೆ. ಅಲ್ಲದೆ ಗುಜರಾತ್ನ ವಡೋದರದಲ್ಲಿ ಎರಡು ದಿನದಿಂದ ಭಾರೀ ಮಳೆಯಾಗುತ್ತಿರುವ ಕಾರಣ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಅಗತ್ಯ ವಸ್ತು ಸಿಗದೇ ಸಂತ್ರಸ್ತರು ಪರದಾಡುತ್ತಿದ್ದಾರೆ. ಹೀಗಿರುವಾಗ ಇರ್ಫಾನ್ ಪಠಾಣ್ ಹಾಗೂ ಯೂಸುಫ್ ಪಠಾಣ್ ಸಂತ್ರಸ್ತರಿಗೆ ಊಟ ಬಡಿಸುವ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
https://twitter.com/farheenSRK/status/1157592182242459648?ref_src=twsrc%5Etfw%7Ctwcamp%5Etweetembed%7Ctwterm%5E1157592182242459648&ref_url=https%3A%2F%2Fwww.jagran.com%2Fcricket%2Fbouncer-indian-cricketer-irfan-pathan-and-yusuf-pathan-arranges-food-for-flood-hit-victims-in-vadodara-19458435.html
ಯೂಸುಫ್ ಪಠಾಣ್ ಹಾಗೂ ಇರ್ಫಾನ್ ಪಠಾಣ್ ಅವರು ತಮ್ಮ ತಂಡದ ಜೊತೆ ಸೇರಿ ಪ್ರವಾಹ ಸಂತ್ರಸ್ತರಿಗೆ ಊಟ ಹಾಗೂ ಅಗತ್ಯ ವಸ್ತು ನೀಡಿದ್ದಾರೆ. ಈ ವೇಳೆ ಯೂಸುಫ್ ಪಠಾಣ್ ಸಂತ್ರಸ್ತರಿಗೆ ಆಹಾರ ಸಿದ್ಧತೆ ನಡೆಸಿ, ಕೆಲವು ಮಂದಿಗೆ ಊಟ ಕೂಡ ಬಡಿಸುವುದು ಕ್ಯಾಮೆರಾದಲ್ಲಿ ಸೆರೆ ಆಗಿದೆ. ಅಲ್ಲದೆ ಇರ್ಫಾನ್ ಪಠಾಣ್ ಅವರು ಕೂಡ ಜನರ ಸಹಾಯ ಮಾಡಿದ್ದಾರೆ.
ಅಭಿಮಾನಿಯೊಬ್ಬರು ಟ್ವಿಟ್ಟರಿನಲ್ಲಿ ಇರ್ಫಾನ್ ಹಾಗೂ ಯೂಸುಫ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡುವ ಮೂಲಕ ಅವರ ಬಳಿ ಸಹಾಯ ಕೇಳಿದರು. ಅಲ್ಲದೆ, “ಕೆಲವು ಯುವತಿಯರು ಭಾರೀ ಮಳೆಯಿಂದ ತಮ್ಮ ಹಾಸ್ಟಲಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರಿಗೆ ಅಲ್ಲಿ ತಿನ್ನಲು ಸಹ ಏನೂ ಇಲ್ಲ” ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನೋಡಿ ಇರ್ಫಾನ್ ಅವರು, “ನಿಮಗೆ ಅತಿ ಶೀಘ್ರದಲ್ಲೆ ಸಹಾಯ ಮಾಡುತ್ತೇವೆ” ಎಂದು ರೀ-ಟ್ವೀಟ್ ಮಾಡಿದ್ದರು.

Leave a Reply