ನಟಿಯ ಮೇಲೆ ನಿರಂತರ ಅತ್ಯಾಚಾರ

ಭೋಪಾಲ್: 24 ವರ್ಷದ ನಟಿಯೊಬ್ಬರಿಗೆ ಮದುವೆಯಾಗುವುದಾಗಿ ಭರವಸೆ ಕೊಟ್ಟು ಬ್ಯೂಟಿ ಕ್ಲಿನಿಕ್ ಮಾಲೀಕ ನಿರಂತರವಾಗಿ 4 ವರ್ಷದಿಂದ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.

ಸಂತ್ರಸ್ತೆ ಒಂದು ತಿಂಗಳ ಹಿಂದೆ ಆರೋಪಿ ನಟನ ಮೇಲೆ ಅತ್ಯಾಚಾರದ ದೂರನ್ನು ದಾಖಲಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ಮುಂಬೈ ಪೊಲೀಸರು ಶೂನ್ಯ ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಈ ಕೇಸ್ ಎಂಪಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಆ ಪೊಲೀಸ್ ಠಾಣೆಗೆ ಕೇಸನ್ನು ವರ್ಗಾವಣೆ ಮಾಡಿದ್ದಾರೆ. ಅವರು ಆರೋಪಿಯ ವಿರುದ್ಧ ಅತ್ಯಾಚಾರ ಮತ್ತು ಚೀಟಿಂಗ್ ಕೇಸನ್ನು ದಾಖಲಿಸಿಕೊಂಡಿದ್ದಾರೆ.

ಏನಿದು ಪ್ರಕರಣ?
ಸಂತ್ರಸ್ತೆ ಮುಂಬೈ ಮೂಲದವಳಾಗಿದ್ದು, ಮಾಡೆಲ್ ಕ್ಷೇತ್ರದಲ್ಲಿ ಮತ್ತು ಸಿನಿಮಾದಲ್ಲಿ ಸಣ್ಣ-ಪುಟ್ಟ ಪಾತ್ರವನ್ನು ಮಾಡಿಕೊಂಡಿದ್ದರು. ನಾಲ್ಕು ವರ್ಷಗಳಿಂದ ಆರೋಪಿ ಮತ್ತು ತನಗೆ ಪರಿಚಯವಿದೆ ಎಂದು ತಿಳಿಸಿದ್ದಾರೆ. ಆರೋಪಿಯನ್ನು ಅಭಿನೇತ್ ಎಂದು ಗುರುತಿಸಲಾಗಿದ್ದು, ಈತ ಚುನಭಟ್ಟಿ ಪ್ರದೇಶದ ನಿವಾಸಿಯಾಗಿದ್ದಾನೆ. ಅದೇ ಪ್ರದೇಶದಲ್ಲಿ ಬ್ಯೂಟಿ ಕ್ಲಿನಿಕ್ ನಡೆಸುತ್ತಿದ್ದನು. ಇಬ್ಬರು ಸ್ನೇಹಿತರಾಗಿದ್ದು, ಆರೋಪಿ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಭೋಪಾಲ್‍ನಲ್ಲಿ ಸಂತ್ರಸ್ತೆಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದಾನೆ. ಒಂದು ದಿನ ಎಂಪಿ ನಗರ ಪ್ರದೇಶದ ಹೋಟೆಲ್‍ಗೆ ಕರೆದುಕೊಂಡು ಹೋಗಿ ಮದುವೆಯಾಗುವ ಭರವಸೆ ನೀಡಿದ್ದಾನೆ. ಬಳಿಕ ಅತ್ಯಾಚಾರ ಎಸಗಿದ್ದಾನೆ. ನಂತರ ಗೋವಾ ಸೇರಿದಂತೆ ಅನೇಕ ಕಡೆ ಕರೆದುಕೊಂಡು ಹೋಗಿ ಹಲವು ಬಾರಿ ನಿರಂತರವಾಗಿ ನಾಲ್ಕು ವರ್ಷಗಳ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚೆಗೆ ಸಂತ್ರಸ್ತೆ ಮದುವೆಯಾಗುವಂತೆ ಕೇಳಿದ್ದಾಳೆ. ಆಗ ಆರೋಪಿ ಅಭಿನೇತ್ ವಿವಾಹವಾಗಲು ನಿರಾಕರಿಸಿದ್ದಾನೆ. ನಂತರ ಸಂತ್ರಸ್ತೆ ಸಮ್ತಾ ನಗರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

ಸದ್ಯಕ್ಕೆ ನಾವು ಶೂನ್ಯ ಎಫ್‍ಐಆರ್ ಆಧಾರದ ಮೇರೆಗೆ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದೇವೆ. ನಾಲ್ಕು ವರ್ಷಗಳ ಹಿಂದೆ ಹೋಗಿದ್ದ ಹೋಟೆಲ್‍ಗೆ ಹೋಗಿ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸದ್ಯದಲ್ಲೇ ಸಂತ್ರಸ್ತೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳುತ್ತೇವೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.

ಶೂನ್ಯ ಎಫ್‍ಐಆರ್?
ಅಪರಾಧ ನಡೆದ ಸ್ಥಳ ಬೇರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದರೂ ಸಂತ್ರಸ್ತರು ನೀಡುವ ದೂರಿನ ಮೇರೆಗೆ ಎಲ್ಲಿ ಬೇಕಾದರೂ ಝೀರೋ ಎಫ್‍ಐಆರ್ ದಾಖಲಿಸಬಹುದು. ಆ ನಂತರ ಆ ಪ್ರಕರಣವನ್ನು ನಿರ್ದಿಷ್ಟ ಪೊಲೀಸ್ ಠಾಣೆಗೆ ವರ್ಗಾಯಿಸಬಹುದು. ಸಂತ್ರಸ್ತರನ್ನು ನಮ್ಮ ಪೊಲೀಸ್ ಠಾಣೆಯಲ್ಲ ಎಂದು ಅಲ್ಲಿಂದಿಲ್ಲಿಗೆ ಅಲೆದಾಡುವುದನ್ನು ತಪ್ಪಿಸಲು ಗೃಹ ಇಲಾಖೆ ವ್ಯವಸ್ಥೆ ಜಾರಿಗೆ ತಂದಿದೆ.

Comments

Leave a Reply

Your email address will not be published. Required fields are marked *