ರಾಯಲ್ ಎನ್‍ಫೀಲ್ಡ್ ಬೈಕ್ ಕದೀತಿದ್ದ ಅಂತರಾಜ್ಯ ಕಳ್ಳರ ಬಂಧನ

ಕೋಲಾರ: ರಾಯಲ್ ಎನ್‍ಫೀಲ್ಡ್ ಬೈಕ್ ಕದಿಯುತ್ತಿದ್ದ ಕುಖ್ಯಾತ ಅಂತರಾಜ್ಯ ಐದು ಮಂದಿ ಕಳ್ಳರನ್ನು ಕೋಲಾರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಕಳ್ಳರನ್ನು ತಮಿಳುನಾಡು ಮತ್ತು ಹೊಸೂರು ಮೂಲದ ನದೀಮ್ 22, ಮುನೀರ್ 20, ಶ್ರೀಧರ್ 21, ದಾತ್ರ 18 ಮತ್ತು ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 20 ಲಕ್ಷ ರೂಪಾಯಿ ಮೌಲ್ಯದ 8 ರಾಯಲ್ ಎನ್‍ಫೀಲ್ಡ್ ಸೇರಿದಂತೆ 15 ಬೈಕ್ ವಶಪಡಿಸಿಕೊಳ್ಳಲಾಗಿದೆ.

ಈ ಕಳ್ಳರು ಪ್ರಮುಖವಾಗಿ ರಾಯಲ್ ಎನ್‍ಫೀಲ್ಡ್ ಬೈಕ್‍ಗಳನ್ನು ಗುರಿಯಾಗಿಸಿಕೊಂಡು, ಕೋಲಾರ, ಬೆಂಗಳೂರು ಮತ್ತು ಹೊಸೂರು ಭಾಗದಲ್ಲಿ ಕಳವು ಮಾಡಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಇದೀಗ ಕೋಲಾರದ ಕಾಮಸಮುದ್ರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *