ವಿಶ್ವಾಸ ಉಳಿಸಿಕೊಳ್ಳಲು ಸಿಎಂಗೆ ಬೇಕು 5 ವಿಕೆಟ್

ಬೆಂಗಳೂರು: ದಿನ ಹೋದಂತೆ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ಆಗುತ್ತಿದ್ದು, ಸಿಎಂ ವಿಶ್ವಾಸಮತ ಯಾಚನೆ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ವಿಶ್ವಾಸ ಉಳಿಸಿಕೊಳ್ಳಲು ಸಿಎಂಗೆ ಐದು ವಿಕೆಟ್ ಬೇಕು.

ಹೌದು. ಮೈತ್ರಿ ಸರ್ಕಾರದ ಉಳಿವಿಗೆ ಪಂಚ ಪಾಂಡವರ ನೆರವು ಬೇಕಾಗಿದೆ. ಐವರ ನೆರವು ಸಿಕ್ಕರೆ ಅವರು ಸರ್ಕಾರದ ಪಾಲಿಗೆ ಆಪತ್ಬಾಂಧವರಾಗೋದು ಗ್ಯಾರಂಟಿಯಾಗಿದ್ದು, ಈ ಐದು ಜನರ ನಿರ್ಧಾರದ ಮೇಲೆ ದೋಸ್ತಿ ಸರ್ಕಾರದ ಭವಿಷ್ಯ ನಿಂತಿದೆ ಎನ್ನಲಾಗಿದೆ.

ಆ 5 ಮಂದಿ ಯಾರು?
ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಸುಧಾಕರ್, ಎಂಟಿಬಿ ನಾಗರಾಜ್ ಈ ನಾಲ್ವರು ನೆರವು ನೀಡಬಹುದೆಂಬ ನಂಬಿಕೆಯಲ್ಲಿ ಕಾಂಗ್ರೆಸ್ ಇದೆ. ರಾಮಲಿಂಗಾರೆಡ್ಡಿ, ರೋಷನ್ ಬೇಗ್ ಜೊತೆ ಚರ್ಚೆ ಬಳಿಕ ಈ ವಿಶ್ವಾಸ ಹೆಚ್ಚಾಗಿದೆ. ಅಲ್ಲದೆ ರಾಮಲಿಂಗಾ ರೆಡ್ಡಿ, ಬೇಗ್ ಮೂಲಕ ಓರ್ವ ಅತೃಪ್ತನ ಮನವೊಲಿಕೆ ಮಾಡಿಸುವ ನಂಬಿಕೆ ಕೂಡ ಕಾಂಗ್ರೆಸ್ಸಿಗರದ್ದಾಗಿದೆ.

ಇತ್ತ ಸುಧಾಕರ್, ಎಂಟಿಬಿ ನಾಗರಾಜ್‍ರ ಮನವೊಲಿಕೆ ಜವಾಬ್ದಾರಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹೆಗಲಿಗೆ ಹಾಕಲಾಗಿದೆ. ಇನ್ನೊಂದು ವಿಕೆಟ್‍ಗಾಗಿ ಬೆಂಗಳೂರಿನ ಶಾಸಕರ ಮೇಲೆ ಕಣ್ಣಿಡಲಾಗಿದೆ. ಬೈರತಿ ಬಸವರಾಜ್, ಮುನಿರತ್ನ, ಎಸ್.ಟಿ ಸೋಮಶೇಖರ್ ಮನವೊಲಿಕೆಗೂ ಪ್ಲಾನ್ ಮಾಡಿಕೊಳ್ಳಲಾಗಿದೆ. 5 ಮಂದಿ ಶಾಸಕರು ಸಿಗದಿದ್ದರೆ ರಿವರ್ಸ್ ಆಪರೇಷನ್‍ಗೂ ಚಿಂತನೆ ನಡೆಸಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *