ಮನೆಯವರೆಲ್ಲ ಜೈಲು ಪಾಲು- ಪೊಲೀಸ್ ಠಾಣೆಯಲ್ಲೇ ಸ್ಥಾನ ಪಡೆದ ನಾಯಿ

ಭೋಪಾಲ್: ನಾಯಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಎನ್ನುತ್ತೇವೆ. ಮನೆಯವರೆಲ್ಲರೂ ಕೊಲೆ ಪ್ರಕಣರದಲ್ಲಿ ಜೈಲು ಸೇರಿದ ಮೆಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಯಿ ಆಶ್ರಯ ಪಡೆದಿದೆ.

ಮಧ್ಯಪ್ರದೇಶದ ಚೋಟಿ ಬಜಾರಿಯಾ ಪೊಲೀಸ್ ಠಾಣೆಯಲ್ಲಿ ಪೊಲೀಸರು ಈ ಬಿಳಿ ನಾಯಿ(ಸುಲ್ತಾನ್)ಗಾಗಿ ಒಂದು ಮನೆಯನ್ನೇ ಕಟ್ಟಿದ್ದು, ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ನಾಯಿ ಸಾಕುತ್ತಿದ್ದ ಕುಟುಂಬದ 6 ಜನ ಸದಸ್ಯರು ಆಸ್ತಿ ಕಲಹದ ವೇಳೆ ಕೊಲೆ ಪ್ರಕರಣದಲ್ಲಿ ಜೂನ್ 21ರಂದು ಜೈಲು ಸೇರಿದ್ದಾರೆ. ಈ ವೇಳೆ ತುಂಬಾ ದಿನಗಳ ಕಾಲ ನೀರು, ಅನ್ನವಿಲ್ಲದೆ, ನಾಯಿ ಮನೆಯ ಬಳಿಯೇ ಉಪವಾಸವಿದೆ. ಕುಟುಂಬದವರನ್ನು ಜೈಲಿಗೆ ಹಾಕಿದ ನಂತರ ಸಾಕು ಪ್ರಾಣಿ ಕುರಿತು ಮಾಹಿತಿ ಪಡೆದ ಪೊಲೀಸರು ಠಾಣೆಗೆ ತಂದು ಸಾಕುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಕುಟುಂಬಸ್ಥರನ್ನು ಬಂಧಿಸಿದ ನಂತರ ನಾಯಿ ತುಂಬಾ ಸಿಟ್ಟಿನಿಂದ ಇತ್ತು. ಆದರೆ, ಇತ್ತೀಚೆಗೆ ಮನೆಯ ಸದಸ್ಯನಂತಾಗಿದೆ ಎಂದು ತಿಳಿಸಿದ್ದಾರೆ.

ನಾಯಿ ಇದೀಗ ಪೊಲೀಸರು ವಿಶ್ರಾಂತಿ ಪಡೆಯುವ ಕೋಣೆಗಳಲ್ಲೇ ವಾಸಿಸುತ್ತಿದ್ದು, ಮನೆಯಿಂದ ತಂದ ಆಹಾರವನ್ನು ತಿನ್ನಿಸಿ ಮುದ್ದು ಮಾಡುತ್ತಾರೆ. ಚೋಟಿ ಬಜಾರಿಯಾ ಪೊಲೀಸ್ ಠಾಣೆಯ ಇನ್ ಚಾರ್ಜ್ ಮನಿಶಾ ತಿವಾರಿ ಅವರು ಸುಲ್ತಾನನ ಕುರಿತು ಇನ್ನೂ ಕಾಳಜಿ ವಹಿಸಿದ್ದಾರೆ.

ಸುಲ್ತಾನನ ಯಜಮಾನ ಸೇರಿದಂತೆ ಕುಟುಂಬಸ್ಥರು 5 ಜನ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಮನೆಯಲ್ಲಿ ಸುಲ್ತಾನನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಹೀಗಾಗಿ ಪೊಲೀಸ್ ಠಾಣೆ ಬಳಿ ಕರೆ ತಂದೆವು. ಆಗಿನಿಂದ ಸುಲ್ತಾನ್ ಇಲ್ಲೆಯೇ ಇದ್ದಾನೆ. ಆಹಾರ ನೀಡಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇವೆ ಎಂದು ಮನಿಶಾ ತಿವಾರಿ ತಿಳಿಸಿದ್ದಾರೆ.

ಜಿಂಕೆ ಬಣ್ಣದ ಸುಲ್ತಾನನಿಗೆ ಪೊಲೀಸರು ಬ್ರೆಡ್, ಹಾಲು ಮತ್ತು ಚಪಾತಿಯನ್ನು ಆಹಾರವಾಗಿ ನೀಡಲಾಗುತ್ತಿದೆ. ಅಧಿಕಾರಿಗಳು ಠಾಣೆಗೆ ಮರಳಿದ ತಕ್ಷಣ ತನ್ನ ಕೋರೆ ಹಲ್ಲುಗಳಿಂದ ನಗುತ್ತದೆ. ಬಾಲ ಅಲ್ಲಾಡಿಸಿಕೊಂಡು ನಮ್ಮ ಕಾಲ ಸುತ್ತುತ್ತದೆ ಎಂದು ಠಾಣೆಯ ಸಿಬ್ಬಂದಿ ಹೇಳುತ್ತಾರೆ.

Comments

Leave a Reply

Your email address will not be published. Required fields are marked *