ಈಗ ಆನಂದ್ ಸಿಂಗ್ ಸರದಿ, ಸರ್ಕಾರ ಯಾವುದೇ ಸಮಯದಲ್ಲಿ ಪತನ – ಶೆಟ್ಟರ್ ಭವಿಷ್ಯ

ಹುಬ್ಬಳ್ಳಿ: ಈಗ ಅನಂದ್ ಸಿಂಗ್ ಸರದಿ, ಎಷ್ಟು ಜನ ಶಾಸಕರು ಬರುತ್ತಾರೆ ಎಂಬುವುದನ್ನು ಕಾದು ನೋಡಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ರಾಜೀನಾಮೆ ನೀಡಿರುವ ವಿಚಾರ ನನಗೂ ಈಗ ಮಾಹಿತಿ ಬಂದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿ ಬಹಳಷ್ಟು ಶಾಸಕರಿಗೆ ಅಸಮಾಧಾನ ಇದೆ ಎಂದು ಹೇಳಿದರು.

ಎರಡೂ ಪಕ್ಷದ ಧುರೀಣರ ನಡುವೆ ಒಳಜಗಳ ಇದ್ದು ಆರೋಪ ನಡೆದಿದೆ. ದೊಡ್ಡ ಪ್ರಮಾಣದ ಸಮಸ್ಯೆ ಈ ಸರ್ಕಾರದಲ್ಲಿ ಉಲ್ಬಣವಾಗುತ್ತಿದೆ. ಈ ಸರ್ಕಾರ ಯಾವುದೇ ಸಮಯದಲ್ಲಿ ಪತನವಾಗಬಹುದು. ಬಹಳಷ್ಟು ಜನ ಶಾಸಕರಲ್ಲಿ ಭಿನ್ನಾಭಿಪ್ರಾಯ ಇದೆ. ಕೇವಲ ಕಾಂಗ್ರೆಸ್ ಶಾಸಕರಲ್ಲಿ ಅಷ್ಟೇ ಅಲ್ಲದೆ ಜೆಡಿಎಸ್‍ನ ಹಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಇನ್ನೂ ಎಷ್ಟು ಜನ ಶಾಸಕರು ಬರುತ್ತಾರೆ ಎನ್ನುವುದನ್ನು ಇನ್ನು ಕಾದು ನೋಡಬೇಕಾಗಿದೆ ಎಂದು ಶೆಟ್ಟರ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕಿತ್ತು. ಸಿಎಂ ಮತ್ತು ಮಾಜಿ ಸಿಎಂಗೆ ಕಾಮನ್‍ಸೆನ್ಸ್ ಇಲ್ಲ. ಈ ಇಬ್ಬರು ಪ್ರಜಾಪ್ರಭುತ್ವಕ್ಕೆ ಮಾರಕ ಆಗುವ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಈ ಸಮ್ಮಿಶ್ರ ಸರ್ಕಾರ ತನ್ನಿಂದ ತಾನೇ ಪತನ ಆಗುವವರೆಗೂ ನಾವು ಕಾದು ನೋಡುವ ತಂತ್ರವನ್ನು ಅನುಸರಿಸುತ್ತೆವೆ. ನಾವು ಸದ್ಯಕ್ಕೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *