ಮುಂಬೈ: ಬಾಲಿವುಡ್ ದಂಗಲ್ ಬೆಡಗಿ ಝೈರಾ ವಾಸಿಂ ಚಿತ್ರರಂಗ ತೊರೆಯುವುದಾಗಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಝೈರಾ ಎರಡೇ ಚಿತ್ರದ ಮೂಲಕ ಬಾಲಿವುಡ್‍ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಝೈರಾ ಮಿ. ಪರ್ಫೆಕ್ಟ್ ಎಂದೇ ಖ್ಯಾತರಾಗಿರುವ ನಟ ಅಮೀರ್ ಖಾನ್ ಜೊತೆ ದಂಗಲ್ ಹಾಗೂ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ನಟಿಸಿದ್ದರು. ಈ ಎರಡು ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿತ್ತು. ಈಗ ಝೈರಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬಾಲಿವುಡ್ ತೊರೆಯುವುದಾಗಿ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
5 ವರ್ಷದ ಮೊದಲು ನಾನು ಒಂದು ನಿರ್ಧಾರ ಮಾಡಿದೆ. ಆ ನಿರ್ಧಾರ ನನ್ನ ಜೀವನವನ್ನೇ ಬದಲಾಯಿಸಿದೆ. ನಾನು ಬಾಲಿವುಡ್‍ಗೆ ಹೆಜ್ಜೆ ಇಟ್ಟಾಗ ನನಗೆ ಪಾಪುಲ್ಯಾರಿಟಿಯ ರಸ್ತೆಯನ್ನು ತೆರೆಯಿತು. ನಿಧಾನವಾಗಿ ನಾನು ಯುವ ಜನತೆಗೆ ರೋಲ್ ಮಾಡಲ್ ಆಗಿ ಕಾಣಲಾರಂಭಿಸಿದೆ. ಬಾಲಿವುಡ್‍ಗೆ ಬಂದು 5 ವರ್ಷ ಆಗಿದೆ. ಆದರೆ ನನ್ನ ಕೆಲಸದಲ್ಲಿ ನನಗೆ ಖುಷಿಯಿಲ್ಲ ಎಂದು ಹೇಳಲು ಇಷ್ಟಪಡುತ್ತೇನೆ. ನಾನು ಇಲ್ಲಿ ಫಿಟ್ ಆಗಿದ್ದೇನೆ ಆದ್ರೆ ನಾನು ಇಲ್ಲಿಯವಳಲ್ಲ. ನಟಿ ಆಗುವ ಕಾರಣದಿಂದ ನಾನು ನನ್ನ ಇಸ್ಲಾಂ ಧರ್ಮದಿಂದ ದೂರವಾಗುತ್ತಿದ್ದೇನೆ. ಹಾಗಾಗಿ ನಾನು ಚಿತ್ರರಂಗದಿಂದ ನನ್ನ ಸಂಬಂಧವನ್ನು ಮುರಿಯುತ್ತಿದ್ದೇನೆ. ನಾನು ಯೋಚಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.

ಝೈರಾ ದಂಗಲ್ ಚಿತ್ರದಲ್ಲಿ ಅಮೀರ್ ಖಾನ್ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಝೈರಾ ಮಹಿಳಾ ಪೈಲ್ವಾನ್ ಗೀತಾ ಪೋಗಾಟ್‍ನ ಬಾಲ್ಯದ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರ 2016ರಲ್ಲಿ ಬಿಡುಗಡೆ ಆಗಿತ್ತು.
View this post on Instagram

Leave a Reply