ಅಗ್ನಿಸಾಕ್ಷಿ ರಾಜೇಶ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ-ಬಯಲಾಯ್ತು ನಟನ ಅಸಲಿ ಮುಖ!

ಬೆಂಗಳೂರು: ಕಿರುತೆರೆ ನಟ ರಾಜೇಶ್ ಧ್ರುವ ವಿರುದ್ಧ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. 49 ಪುಟಗಳ ದೋಷಾರೋಪ ಪಟ್ಟಿಯಲ್ಲಿ ರಾಜೇಶ್ ನ ಅಸಲಿ ಮುಖ ಬಯಲಾಗಿದೆ. ಕೆಲವು ತಿಂಗಳ ಹಿಂದೆ ರಾಜೇಶ್ ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ಪತಿಯ ವಿರುದ್ಧ ದೂರು ಸಲ್ಲಿಕೆ ಮಾಡಿದ್ರು. ಈ ಸಂಬಂಧ ಇಬ್ಬರು ಪರಸ್ಪರ ಆರೋಪ -ಪ್ರತ್ಯಾರೋಪ ಮಾಡಿ ಕೆಲವು ವಿಡಿಯೋಗಳನ್ನು ಬಿಡುಗಡೆ ಮಾಡಿಕೊಂಡಿದ್ದರು.

ಪತ್ನಿಯ ಆರೋಪವೇನು?
2013 ನವೆಂಬರ್ ನಲ್ಲಿ ರಾಜೇಶ್ ಯುವತಿಯೊಂದಿಗೆ ರಿಜಿಸ್ಟರ್ ಮದುವೆ ಆಗಿದ್ದನು. ಮದುವೆ ಬಳಿಕ ಇಬ್ಬರು ಬಿಪಿಒದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲ ದಿನಗಳ ಬಳಿಕ ಶಾರ್ಟ್ ಫಿಲಂ ಮಾಡೋದಾಗಿ ಕೆಲಸ ತೊರೆದಿದ್ದನು. ಅನಂತರ ಧಾರಾವಾಹಿಯ ಅವಕಾಶಗಳು ರಾಜೇಶ್ ಗೆ ಸಿಕ್ಕಿತ್ತು. ಧಾರಾವಾಹಿಯಲ್ಲಿಯ ಹಲವು ಸಹನಟಿಯರೊಂದಿಗೆ ರಾಜೇಶ್ ಲವ್ವಿಡವ್ವಿ ಆರಂಭಿಸಿಕೊಂಡಿದ್ದನು. ಕೆಲ ಯುವತಿಯರ ಜೊತೆ ಅಕ್ರಮ ಸಂಬಂಧ ಸಹ ಹೊಂದಿದ್ದ, ಈ ಸಂಬಂಧ ಇಬ್ಬರ ನಡುವೆ ಮನೆಯಲ್ಲಿ ಸದಾ ಗಲಾಟೆ ನಡೆಯುತ್ತಿತ್ತು ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಿಜಿಸ್ಟರ್ ಮದುವೆ ಬಳಿಕ ರಾಜೇಶ್ ಕೆಲಸಕ್ಕೆ ಹೋಗಿ ಸಂಬಳ ತರಬೇಕೆಂದು ಪತ್ನಿಗೆ ಷರತ್ತು ಹಾಕಿದ್ದ. ಪತ್ನಿಯ ಪೋಷಕರು ಸಂಪ್ರದಾಯಕವಾಗಿ ಮದುವೆ ಆಗುವಂತೆ ಮನವಿ ಮಾಡಿಕೊಂಡಿದ್ದರು. ಈ ವೇಳೆ ಮದುವೆಗೆ ಧಾರಾವಾಹಿಯ ಕಲಾವಿದರೆಲ್ಲಾ ಆಗಮಿಸುತ್ತಾರೆ. ಹಾಗಾಗಿ ಮದುವೆ ಅದ್ಧೂರಿಯಾಗಿ ನಡೆಬೇಕೆಂಬ ಕಂಡೀಷನ್ ರಾಜೇಶ್ ಹಾಕಿದ್ದ ಎನ್ನಲಾಗಿದೆ. ರಾಜೇಶ್ ಷರತ್ತು ಒಪ್ಪಿದ ಪೋಷಕರು 2017 ಮೇ 21ರಂದು ಮದುವೆಯನ್ನು ಅದ್ಧೂರಿಯಾಗಿಯೆ ಮಾಡಿದ್ದರು.

ಮದುವೆ ಬಳಿಕ ವರಸೆ ಬದಲಿಸಿದ ರಾಜೇಶ್, ವರೋಪಚಾರ ಸರಿಯಾಗಿ ನೀಡಿಲ್ಲ. ಸರಿಯಾಗಿ ವರದಕ್ಷಿಣೆಯನ್ನು ನೀಡಿಲ್ಲ. ಯಾಕೋ ನನಗೂ, ನಿನಗೂ ಸರಿಯಾಗಿ ಹೊಂದಾಣಿಕೆ ಆಗುತ್ತಿಲ್ಲ. ತವರು ಮನೆಯಿಂದ ಹಣ ತಂದ್ರೆ ಮಾತ್ರ ನನ್ನ ಜೊತೆಯಲ್ಲಿರು ಎಂದು ಪತ್ನಿಗೆ ರಾಜೇಶ್ ಹೇಳಿದ್ದನಂತೆ. ಹಣ ತರದೇ ಇದ್ದರೆ ಕಟ್ಟಿರುವ ತಾಳಿಯನ್ನು ಬಿಚ್ಚಿಕೊಡುವಂತೆ ಮಾನಸಿಕವಾಗಿ ರಾಜೇಶ್ ಕಿರುಕುಳ ನೀಡುತ್ತಿದ್ದ ಪತ್ನಿ ತಿಳಿಸಿದ್ದಾರೆ.

ಏನಿದು ಪ್ರಕರಣ?
ರಾಜೇಶ್ ಧ್ರುವ 2017ರಲ್ಲಿ ನನ್ನನ್ನು ಮದುವೆಯಾಗಿ ಬಳಿಕ ಅವರಿಗೆ ವರದಕ್ಷಿಣೆ ತರುವಂತೆ ಟಾರ್ಚರ್ ನೀಡಿದ್ದಾರೆ. ಅಲ್ಲದೆ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಪತ್ನಿ ಶೃತಿ ತಮ್ಮ ಪತಿ ರಾಜೇಶ್ ಮೇಲೆ ಆರೋಪ ಮಾಡಿದ್ದಾರೆ. ಮದುವೆ ಆದ ಬಳಿಕ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಮದುವೆ ಆದರೂ ನನಗೆ ಮದುವೆಯಾಗಿಲ್ಲ ಎಂದು ಧ್ರುವ ಹೇಳಿಕೊಂಡು ತಿರುಗಾಡುತ್ತಿದ್ದರು. ಮದುವೆಯಾದ ಬಳಿಕ ಧ್ರುವ ಬೇರೆ ಯುವತಿಯರ ಜೊತೆ ಅಫೈರ್ ಇಟ್ಟುಕೊಂಡಿದ್ದರು. ಯುವತಿ `ತಕಧಿಮಿತ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಶೃತಿ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು

ಪತ್ನಿ ಆರೋಪಕ್ಕೆ ತಿರುಗೇಟು:
ನಮ್ಮದು ಸಂಪ್ರದಾಯ ಕುಟುಂಬವಾಗಿದ್ದು, ಪತ್ನಿ ಹೊರಗಡೆ ಮಾಂಸ ತಿಂದು ಮಾನಸಿಕವಾಗಿ ನನ್ನ ತಾಯಿಗೆ ಹಿಂಸೆ ನೀಡುತ್ತಿದ್ದರು. ನಾನು ಯಾವುದೇ ಕಿರುಕುಳ ನೀಡಿಲ್ಲ. ನಮ್ಮ ತಾಯಿಗೆ ಯಾರಿಂದ ಕಿರುಕುಳ ಆಗುತ್ತಿದೆ ಅಂತ ದೂರಿನಲ್ಲಿದೆ. ಒಟ್ಟು ಮೂರು ದೂರು ದಾಖಲಾಗಿದೆ. 2018 ಜುಲೈನಲ್ಲಿ ವಿಚ್ಛೇದನ ಕೋರಿ ಪತ್ನಿ ಅರ್ಜಿ ಹಾಕಿದ್ದಾರೆ. ಆಗ ಯಾಕೆ ಶ್ರುತಿ ವರದಕ್ಷಿಣೆ ಕೇಸ್ ಹಾಕಿಲ್ಲ. ನಾನು ಕಿರುಕುಳ ನೀಡಿದ್ದಕ್ಕೆ ಸಾಕ್ಷಿ ನೀಡಲಿ ಎಂದು `ಅಗ್ನಿಸಾಕ್ಷಿ’ ಧಾರಾವಾಹಿಯ ಅಖಿಲ್ ಪಾತ್ರಧಾರಿಯಾಗಿರುವ ನಟ ರಾಜೇಶ್ ಧ್ರುವ ಅವರು ಶ್ರುತಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

https://www.youtube.com/watch?v=z83AFF9LPEY

Comments

Leave a Reply

Your email address will not be published. Required fields are marked *