ಚಿಕ್ಕಬಳ್ಳಾಪುರ: ಊಸರವಳ್ಳಿ ಹಿಡಿದು ಕೋತಿಗಳು ಚೆಂಡಿನಂತೆ ಆಟ ಆಡಿರುವ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದ ಬಳಿ ನಡೆದಿದೆ.
ಕೋತಿಗಳು ಊಸರವಳ್ಳಿವನ್ನು ಕ್ರಿಕೆಟ್ ಚೆಂಡಿನಂತೆ ಮನಸ್ಸೋ ಇಚ್ಚೆ ಕೈಯಲ್ಲಿ ಹಿಡಿದು ಅಟ್ಟಾಡಿಸಿದೆ. ಅಲ್ಲದೆ ಬಟ್ಟೆ ಒಗೆದ ರೀತಿಯಲ್ಲಿ ಅದನ್ನು ಬಾರಿಸಿದೆ. ಊಸರವಳ್ಳಿಯನ್ನೆ ತಮ್ಮ ಆಟದ ಚೆಂಡು ಮಾಡಿಕೊಂಡಿದ್ದ ಕೋತಿಗಳ ಕೀಟಲೆ ನೋಡುಗರಿಗೆ ಮನರಂಜನೆ ನೀಡುತ್ತಿತ್ತು. ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಾ, ತನ್ನ ವಿಷದ ಉಸಿರಾಟದಿಂದಲೇ ಎಲ್ಲರನ್ನು ಭಯಭೀತಿ ಗೊಳಿಸುತ್ತಿದ್ದ ಊಸರವಳ್ಳಿಯೇ ಕೋತಿಗಳ ಕೈಗೆ ಸಿಲುಕಿ ಪ್ರಾಣ ಸಂಕಟದಿಂದ ನರಳಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದ ಬಳಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಬಳಿ ಭಾನುವಾರ ರಜೆ ಎಂದು ಭಕ್ತರು ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಐದಾರು ಕೋತಿಗಳ ಹಿಂಡು ಊಸರವಳ್ಳಿಯನ್ನು ಹಿಡಿದು ದೇವಸ್ಥಾನದ ಬಳಿ ಇರುವ ಹೊಂಗೆ ಮರದ ಬಳಿ ಆಟ ಆಡುತ್ತಿದ್ದವು.

ಒಂದು ಕೋತಿ ಇತ್ತ ಕಡೆಯಿಂದ ಮತ್ತೊಂದು ಕೋತಿ ಅತ್ತ ಕಡೆಯಿಂದ ಚೆಂಡಿನಂತೆ ಊಸರವಳ್ಳಿಯನ್ನು ಹಿಡಿದು ಆಟ ಆಡಿದೆ. ಕೋತಿಗಳ ಕೈಗೆ ಸಿಕ್ಕ ಊಸರವಳ್ಳಿ ರಕ್ಷಣೆಗೆ ಗೀಳಿಡುತ್ತಿದ್ರೆ, ಇತ್ತ ಕೋತಿಗಳು ಸಿಕ್ಕಿದ್ದೆ ಚಾನ್ಸ್ ಎಂದು ಆಟವಾಡಿದೆ.
https://www.youtube.com/watch?v=-Ml0nl5dvV8

Leave a Reply