ಸೋನಾಲಿ ಬೇಂದ್ರೆ ಕಿಡ್ನಾಪ್‍ಗೆ ಸ್ಕೆಚ್ ಹಾಕಿದ್ದ ಶೋಯೆಬ್ ಅಖ್ತರ್

ಮುಂಬೈ: ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಶೋಯೆಬ್ ಅಖ್ತರ್ ಆ ದಿನಗಳಲ್ಲೇ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅಂದರೆ ಇಷ್ಟ ಎಂದು ಹೇಳಿ ಸಾಕಷ್ಟು ಸುದ್ದಿಯಾಗಿದ್ದರು. ಆದರೆ ಅಂದು ನೇರ ಅಖ್ತರ್‍ಗೆ ಟಾಂಗ್ ನೀಡಿದ್ದ ಬೇಂದ್ರೆ ನನಗೆ ಅಖ್ತರ್ ಯಾರು ಎಂದು ಗೊತ್ತೆ ಇಲ್ಲ ಎಂದಿದ್ದರು.

ಸದ್ಯ ಮತ್ತೆ ಸಂದರ್ಶನವೊಂದರಲ್ಲಿ ಬೇಂದ್ರೆ ಬಗ್ಗೆ ಮಾತನಾಡಿರುವ ಶೋಯೆಬ್ ಅಖ್ತರ್, ತನ್ನ ಪ್ರೀತಿಗಾಗಿ ಆಕೆಯನ್ನು ಕಿಡ್ನಾಪ್ ಮಾಡವ ಯೋಚನೆ ಮಾಡಿದ್ದೆ ಎಂದು ತಿಳಿಸಿದ್ದಾರೆ.

ಬಾಲಿವುಡ್‍ನ ‘ಇಂಗ್ಲಿಷ್ ಬಾಬು ದೇಸಿ ಮೆಮ್’ ಎಂಬ ಸಿನಿಮಾದಲ್ಲಿ ಸೋನಾಲಿ ಬೇಂದ್ರೆರ ನಟನೆಯನ್ನು ನೋಡಿದ್ದ ಅಖ್ತರ್, ಹಲವು ಬಾರಿ ನಟಿ ಎಂದರೆ ನನಗೆ ಇಷ್ಟ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೇ ಸೋನಾಲಿ ಬೇಂದ್ರೆಯವರ ಫೋಟೋವನ್ನು ಪಾಕೆಟ್‍ನಲ್ಲಿ ಇಟ್ಟುಕೊಂಡು ಓಡಾಡುತ್ತಿದೆ. ಒಂದೊಮ್ಮೆ ತನ್ನ ಪ್ರೀತಿಯನ್ನ ನಿರಾಕರಿಸಿದರೆ, ಕಿಡ್ನಾಪ್ ಮಾಡುವುದು ನನ್ನ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.

ಹಲವು ಸಂದರ್ಭದಲ್ಲಿ ಶೋಯೆಬ್ ಹೇಳಿಕೆಯಿಂದ ಮುಜುಗರಕ್ಕೆ ಒಳಗಾಗಿದ್ದ ಸೋನಾಲಿ ಬೇಂದ್ರೆ, ನಾನು ಕ್ರಿಕೆಟ್ ಅಭಿಮಾನಿ ಅಲ್ಲ. ನನಗೆ ಅಖ್ತರ್ ಯಾರು ಎಂಬುವುದೇ ತಿಳಿದಿಲ್ಲ ಎಂದಿದ್ದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ ಸೋನಾಲಿ ಬೇಂದ್ರೆ ಇತ್ತಿಚೇಗಷ್ಟೇ ನೂಯಾರ್ಕ್ ನಿಂದ ಭಾರತಕ್ಕೆ ಮರಳಿದ್ದಾರೆ.

Comments

Leave a Reply

Your email address will not be published. Required fields are marked *