ಐಎಂಎ ಹೆಸರಿನಲ್ಲಿಯೇ ಮಹಾಮೋಸ – ನೊಂದವರಿಗೆ ಮತ್ತೆ ನೋವು ನೀಡ್ತಿದ್ದಾರೆ ಕಿರಾತಕರು

ಬೆಂಗಳೂರು: ಐಎಂಎ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗಿ ಕಂಗಾಲಾಗಿರುವ ಜನರಿಗೆ ಮತ್ತೆ ಆದೇ ಹೆಸರಿನಲ್ಲಿ ಮೋಸ ಮಾಡಿ ಮತ್ತಷ್ಟು ಹಣ ದೋಚುತ್ತಿರುವ ಘಟನೆಗಳು ವರದಿಯಾಗಿದೆ.

ಈ ಕುರಿತು ಬೆಂಗಳೂರು ಪೊಲೀಸರು ಟ್ವೀಟ್ ಮಾಡಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಜನರಿಗೆ ಫೋನ್ ಮಾಡಿ ನೀವು ಐಎಂಎ ಅಲ್ಲಿ ಹಣ ಹೂಡಿಕೆ ಮಾಡಿದ್ದೀರಾ ಎಂದು ಪ್ರಶ್ನಿಸುವ ಆರೋಪಿಗಳು, ನಿಮ್ಮ ಹಣವನ್ನು ನಿಮ್ಮ ಅಕೌಂಟ್ ಹಾಕುತ್ತೇವೆ. ನಿಮ್ಮ ಎಟಿಎಂ ಕಾರ್ಡ್ ನಂಬರ್ ಹಾಗೂ ಸಿವಿವಿ ನಂಬರ್ ಕೊಡಿ ಎಂದು ಪಡೆದು ಕೊಳ್ಳುತ್ತಿದ್ದಾರೆ. ಹಣ ಕಳೆದು ಕೊಂಡಿರುವ ಜನ ಸಾಮಾನ್ಯರು ಹಣ ಬರುವ ಆಸೆಯಲ್ಲಿ ನಂಬರ್ ಕೊಟ್ಟು ಖಾತೆಯಲ್ಲಿ ಇರುವ ಹಣ ಕಳೆದುಕೊಳ್ಳುತ್ತಿದ್ದಾರೆ.

ಐಎಂಎ ಜ್ಯೂವೆಲ್ಲರ್ಸ್ ಹಗರಣದ ತನಿಖೆಯಲ್ಲಿರುವ ಪೊಲೀಸರಿಗೆ ಆನ್ ಲೈನ್ ನಲ್ಲಿ ಜನರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಮತ್ತೊಂದು ತಲೆನೋವಿಗೆ ಕಾರಣವಾಗಿದೆ. ಐಎಂಎ ಹೆಸರಿನಲ್ಲಿ ಕರೆ ಮಾಡಿ ನಿಮ್ಮ ಹೆಸರಿಗೆ ಹಣ ಹಾಕುತ್ತೇವೆ ಎಂದು ಹೇಳಿ ಕರೆ ಮಾಡುವ ಆರೋಪಿಗಳ ಮಾತು ನಂಬಿ ಮೋಸ ಹೋಗ ಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಈಗಾಗಲೇ ಜನರಿಗೆ ಐಎಂಎ ಹಣ ವಾಪಸ್ ನೀಡುವುದಾಗಿ ಮೋಸ ಮಾಡಿರುವ ಸಂಬಂಧ ದೂರುಗಳು ಕೇಳಿ ಬಂದಿದ್ದು, ಮತ್ತೆ ಹಲವರು ಹಣ ಕಳೆದುಕೊಂಡಿದ್ದಾರೆ. ಈಗಾಗಲೇ ಹಣ ಕಳೆದು ಕೊಂಡು ಕಂಗಾಲಾಗಿರುವ ಹೂಡಿಕೆದಾರರಿಗೆ ಮತ್ತೆ ಆನ್ ಲೈನ್‍ನಲ್ಲಿ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಪೊಲೀಸರು ಜನರಿಗೆ ಮನವಿ ಮಾಡಿ, ಐಎಂಎ ಹೆಸರಲ್ಲಿ ಎಟಿಎಂ ಪಿನ್ ಮತ್ತು ಯಾವುದೇ ಮಾಹಿತಿ ಕೇಳಿದರೆ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *