ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ- ತಾಯಿ, ಇಬ್ಬರು ಮಕ್ಕಳು ಸಾವು

ಚಂಢಿಗಡ್: ಬಟ್ಟೆ ಗೋಡೌನ್‍ನಲ್ಲಿ ಅಗ್ನಿ ಅವಘಡ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಮಹಿಳೆ ಮೃತಪಟ್ಟ ಘಟನೆ ಹರ್ಯಾಣದ ಫರಿದಾಬಾದ್‍ನಲ್ಲಿ ನಡೆದಿದೆ.

ನೀತಾ, ಯಶಿಕಾ ಹಾಗೂ ಲಕ್ಕಿ ಮೃತ ದುರ್ದೈವಿಗಳು. ಅಗ್ನಿ ಅವಘಡದಿಂದ ಉಸಿರುಗಟ್ಟಿ ಒಂದೇ ಕುಟುಂಬದ ತಾಯಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಕೆಳಮಹಡಿಯಲ್ಲಿ ಇದ್ದ ಬಟ್ಟೆಯ ಗೋಡೌನ್‍ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಈ ಕಟ್ಟಡದ ಮೊದಲ ಹಾಗೂ ಎರಡನೇಯ ಮಹಡಿಯಲ್ಲಿ ಶಾಲೆ ನಡೆಸಲಾಗುತಿತ್ತು. ಅಲ್ಲದೆ ಶಾಲೆಯ ನಿರ್ವಾಹಕ ಎರಡನೇ ಮಹಡಿಯಲ್ಲಿರುವ ಕೋಣೆಯಲ್ಲಿ ವಾಸಿಸುತ್ತಿದ್ದರು.

ಗ್ರೌಂಡ್ ಫ್ಲೋರ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದ ಶಾಲೆಯ ನಿರ್ವಾಹಕ ಅದನ್ನು ನಂದಿಸಲು ಕೆಳಗೆ ಬಂದಿದ್ದಾನೆ. ಮೊದಲು ಗೋಡೌನ್‍ನ ಬೀಗ ತೆಗೆದು ಬಳಿಕ ಕೆಳಗಡೆ ನಿಂತಿದ್ದ ತಮ್ಮ ಕಾರನ್ನು ಹೊರಗೆ ನಿಲ್ಲಿಸಿ ಮತ್ತೆ ಮೇಲೆ ಹೋಗಲು ಯತ್ನಿಸಿದ್ದಾನೆ.

ನೋಡುವಷ್ಟರಲ್ಲಿ ಬೆಂಕಿ ಮೊದಲನೇ ಹಾಗೂ ಎರಡನೇ ಮಹಡಿ ತಲುಪಿದೆ. ಎರಡನೇ ಮಹಡಿಯಲ್ಲಿ ನೀತಾ ಹಾಗೂ ಅವರ ಇಬ್ಬರ ಮಕ್ಕಳು ಯಶಿಕಾ ಹಾಗೂ ಲಕ್ಕಿ ಇದ್ದರು. ಹೊಗೆ ಹರಡಿಕೊಂಡಿದ್ದ ಕಾರಣ ಮೂವರು ಕೆಳಗೆ ಬರಲು ಸಾಧ್ಯವಾಗಲಿಲ್ಲ.

ಹೊಗೆಯಿಂದ ಮೂವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಬಳಿಕ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸಿದ್ದಾರೆ. ನಂತರ ಮನೆಯಲ್ಲಿ ಸಿಲುಕಿಕೊಂಡಿದ್ದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆ ತಲುಪುವಷ್ಟರಲ್ಲಿ ಮೂವರು ಮೃತಪಟ್ಟಿದ್ದಾರೆ.

Comments

Leave a Reply

Your email address will not be published. Required fields are marked *