ಸೇನಾ ಲಾಂಛನ ಇರುವ ಗ್ಲೌಸ್ ಧರಿಸಲು ಐಸಿಸಿ ಸಮ್ಮತಿ

#DhoniKeepTheGlove: ಧೋನಿ ಬೆಂಬಲಕ್ಕೆ ನಿಂತ ಅಭಿಮಾನಿಗಳು

ನವದೆಹಲಿ: ಸೇನಾ ಲಾಂಛನ ಇರುವ ಗ್ಲೌಸ್ ಧರಿಸಲು ಐಸಿಸಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಧೋನಿಗೆ ಅನುಮತಿ ನೀಡಿದೆ.

ಐಸಿಸಿ ನಿಯಮಗಳ ಅನ್ವಯ ಯಾವುದೇ ಜನಾಂಗೀಯ ನಿಂದನೆ, ರಾಜಕೀಯ ಹಾಗೂ ವಾಣಿಜ್ಯ ಚಿಹ್ನೆಗಳ ಬಟ್ಟೆಗಳನ್ನು ಧರಿಸಿ ಆಟಗಾರರು ಪಂದ್ಯ ಆಡುವಂತಿಲ್ಲ. ಆದರೆ ಧೋನಿ ಧರಿಸಿರುವುದು ದೇಶದ ಸೈನಿಕರಿಗೆ ಗೌರವ ಸೂಚಿಸುವ ಚಿಹ್ನೆ ಆಗಿರುವುದರಿಂದ ಸಮ್ಮತಿ ಸೂಚಿಸಿದೆ. ಸೇನಾ ಲಾಂಛನ ಇರುವ ಗ್ಲೌಸ್ ಧರಿಸಲು ಧೋನಿ ಬೆನ್ನಿಗೆ ಬಿಸಿಸಿಐ ನಿಂತಿತ್ತು. ಇದೇ ಸಂದರ್ಭದಲ್ಲಿ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಧೋನಿ ಪರ ನಿಂತು ಅಭಿಯಾನವನ್ನೇ ಆರಂಭಿಸಿದ್ದರು.

ಇದಕ್ಕೂ ಮುನ್ನ ಬಿಸಿಸಿಐ ಕಮಿಟಿ ಆಫ್ ಆಡ್ಮಿನಿಸ್ಟ್ರೇಟರ್ಸ್‍ನ ಅಧ್ಯಕ್ಷ ವಿನೋದ್ ರಾಯ್ ಧೋನಿಗೆ ಗ್ಲೌಸ್ ಹಾಕಿ ಆಡಲು ಅನುಮತಿ ನೀಡಬೇಕೆಂದು ಬಿಸಿಸಿಐ ಐಸಿಸಿಗೆ ಮನವಿ ಮಾಡುವುದಾಗಿ ತಿಳಿಸಿದ್ದರು.

ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನದ ಮಂತ್ರಿಯಾದ ಫವಾದ್ ಚೌಧರಿ ಅವರು ಟ್ವೀಟ್ ಮಾಡಿ, ‘ಧೋನಿ ಇಂಗ್ಲೆಂಡ್‍ಗೆ ವಿಶ್ವಕಪ್ ಅಡಲು ಹೋಗಿದ್ದಾರೆ ಹೊರತು ಮಹಾಭಾರತಕ್ಕಲ್ಲ. ಭಾರತೀಯ ಮಾಧ್ಯಮಗಳು ಈ ವಿಚಾರದ ಬಗ್ಗೆ ವಿಲಕ್ಷಣ ಚರ್ಚೆ ಮಾಡುತ್ತಿದ್ದಾರೆ ಯಾಕೆ? ಯುದ್ಧ ದಾಹಿಗಳಾಗಿರುವ ಈ ಮಾಧ್ಯಮದ ಮಂದಿಯನ್ನು ಸಿರಿಯಾ, ಅಫ್ಘಾನಿಸ್ತಾನ ಅಥವಾ ರುವಾಂಡಗಳಿಗೆ ಕೂಲಿ ಸೈನಿಕರನ್ನಾಗಿ ಕಳಿಸಬೇಕು’ ಎಂದು ಟ್ವೀಟ್ ಮಾಡಿದ್ದಾರೆ.

ಭಾರತೀಯ ಸೇನೆಯ ಲೋಗೋವನ್ನು ಧೋನಿ ತಮ್ಮ ವಿಕೆಟ್ ಕೀಪಿಂಗ್ ಗ್ಲೌಸ್ ಮೇಲೆ ಧರಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯವನ್ನಾಡಿದ್ದರು. ಧೋನಿ ದೇಶಪ್ರೇಮಕ್ಕೆ ಮತ್ತು ಸೇನೆಯ ಮೇಲಿನ ಗೌರವಕ್ಕೆ ವ್ಯಾಪಕ ಪ್ರಶಂಸೆ ಕೂಡ ವ್ಯಕ್ತವಾಗಿತ್ತು. ಸದ್ಯ ಅಭಿಮಾನಿಗಳು ಈ ಲೋಗೋವನ್ನು ತೆಗೆಯುವುದು ಬೇಡ ಎಂದು #DhoniKeepTheGlove ಅಭಿಯಾನ ನಡೆಸಿದ್ದಾರೆ. ಐಸಿಸಿ ತನ್ನ ನಿಯಮಗಳು ಉಲ್ಲಂಘನೆ ಆಗುವ ಸಂದರ್ಭದಲ್ಲಿ ಕಣ್ಣು ಮುಚ್ಚಿ ಕುಳಿತಿರುತ್ತದೆ. ಆದರೆ ಧೋನಿ ವಿಚಾರದಲ್ಲಿ ಮಾತ್ರ ಹೆಚ್ಚಿನ ಮುತುವರ್ಜಿ ತೋರಿಸುತ್ತಿದೆ. ಐಸಿಸಿ ಈ ಬಗ್ಗೆ ಕ್ರಮಕ್ಕೆ ಮುಂದಾದರೆ ವಿಶ್ವಕಪ್ ಟೂರ್ನಿಯಿಂದಲೇ ಭಾರತ ಹೊರ ಬರುವುದು ಸೂಕ್ತ ಎಂದು ಅಭಿಮಾನಿಗಳು ಖಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://twitter.com/DoctorrSays/status/1136678613640630272

https://twitter.com/asutosh007/status/1136681607903842305

Comments

Leave a Reply

Your email address will not be published. Required fields are marked *