ಪಾಗಲ್ ಪ್ರೇಮಿಯಿಂದ ವಿವಾಹಿತ ಟೆಕ್ಕಿಗೆ ಬ್ಲಾಕ್‍ಮೇಲ್

ಬೆಂಗಳೂರು: ಕೊಲ್ಕತ್ತಾ ಮೂಲದ ವಿವಾಹಿತ ಟೆಕ್ಕಿಗೆ ಮಾಜಿ ಪ್ರಿಯಕರನೊಬ್ಬ ಬ್ಲಾಕ್‍ಮೇಲ್ ಮಾಡುತ್ತಿದ್ದು, ಇದೀಗ ಪೊಲೀಸರು ಪಾಗಲ್ ಪ್ರೇಮಿಯನ್ನು ಬಂಧಿಸಿದ್ದಾರೆ.

ಕೊಲ್ಕತ್ತಾ ಮೂಲದ ಸಾಯನ್ ಟೆಕ್ಕಿ ಮುಖ್ಯೋಪಾಧ್ಯಯ ಬಂಧನಕ್ಕೆ ಒಳಗಾದ ಆರೋಪಿ. ಅಷ್ಟೇ ಅಲ್ಲದೇ ಯುವತಿಯ ಜೊತೆಗಿನ ಖಾಸಗಿ ಫೋಟೋ ವಿಡಿಯೋ ಕಳುಹಿಸಿ ಪತಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾನೆ.

ಏನಿದು ಪ್ರಕರಣ?
ಟೆಕ್ಕಿಗಳಾಗಿದ್ದ ಇಬ್ಬರು ಕೋಲ್ಕತ್ತಾದಲ್ಲಿ 2006 ರಿಂದ 2009 ರವರೆಗೂ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿದ್ದರು. ನಂತರ ಸಾಯನ್ ನಡತೆ ಸರಿಯಿಲ್ಲ ಎಂದು ಆತನಿಂದ ದೂರವಾಗಿ 2015ರಲ್ಲಿ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದಳು.

ಮಾಜಿ ಗೆಳತಿ ಬೆಂಗಳೂರಿನಲ್ಲಿರುವ ಮಾಹಿತಿ ತಿಳಿದು ಆರೋಪಿ ಟೆಕ್ಕಿ ಸಾಯನ್ ಕೊಲ್ಕತಾದಿಂದ ಬೆಂಗಳೂರಿಗೆ ಬಂದಿದ್ದಾನೆ. ಈಗ ಮತ್ತೆ ಆಕೆಯ ಫೋನಿಗೆ ಕರೆ ಮಾಡಿ, ಆಕೆಯೊಂದಿಗೆ ಇದ್ದ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನ ಕಳುಹಿಸಿ ಅವಾಚ್ಯವಾಗಿ ನಿಂದಿಸಿದ್ದಾನೆ. ದಿನೇ ದಿನೇ ಬೆದರಿಕೆ ಹೆಚ್ಚಾಗುತ್ತಿದ್ದಂತೆ ಸಂತ್ರಸ್ತೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾಳೆ.

ಸಂತ್ರಸ್ಥೆ ನೀಡಿದ ದೂರಿನ ಆಧಾರದ ಮೇರೆಗೆ ಸಾಯನ್ ವಿರುದ್ಧ ಐಪಿಸಿ 354(ಡಿ) ಲೈಂಗಿಕ ಕಿರುಕುಳ, 504(ಮಾನಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಿ ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *