ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮೋದಿ ಸಚಿವ ಸಂಪುಟದಲ್ಲಿ ನೂತನ ರಾಜ್ಯ ರೈಲ್ವೇ ಸಚಿವರಾದ ಸುರೇಶ್ ಅಂಗಡಿ ರೈಲಿನಲ್ಲಿ ಸಂಚರಿಸಿ ಪ್ರಯಾಣಿಕರ ಸಮಸ್ಯೆ ಅಲಿಸಿದ್ದಾರೆ.
ಸೋಮವಾರ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದ ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡಿ ಪ್ರಯಾಣಿಕರ ಸಮಸ್ಯೆಗಳನ್ನು ಅಲಿಸಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ ಆದಷ್ಟೂ ಬೇಗ ಪರಿಹಾರ ನೀಡುತ್ತೇವೆ ಎಂದು ಪ್ರಯಾಣಿಕರಿಗೆ ಭರವಸೆ ನೀಡಿದ್ದಾರೆ.
https://twitter.com/AngadiMp/status/1135609308190715904
ಇಂದು ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸುರೇಶ್ ಅಂಗಡಿಯವರು, ಆ ರೈಲು ನಿಲ್ದಾಣದ ಆಡಳಿತ ವ್ಯವಸ್ಥೆ ಮತ್ತು ಕುಂದು ಕೊರೆತಗಳ ಬಗ್ಗೆ ಪರಿಶೀಲನೆ ಮಾಡಿ. ಅಲ್ಲಿನ ರೈಲ್ವೇ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆದಿದರು. ನಿಲ್ದಾಣದಲ್ಲಿ ಅಭಿವೃದ್ಧಿ ಕೆಲಸಗಳ ಕುರಿತು ಮಾಹಿತಿ ಪಡೆದ ಅಂಗಡಿ ಅವರು ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಒದಗಿಸುವುದಾಗಿ ತಿಳಿಸಿದರು.
ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ನೀಲ್ದಾಣದ ಆಡಳಿತ ವ್ಯವಸ್ಥೆ, ಕುಂದು ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದೆನು.
1/2 pic.twitter.com/AHDLGkyitV— Mangal Suresh Angadi (Modi Ka Parivar) (@MangalSAngadi) June 4, 2019

Leave a Reply