ಪೋಷಕರಿಗೆ ಪತ್ರ ಬರೆದು, ಟಿಕ್‍ಟಾಕ್ ಗೆಳೆಯನ ಭೇಟಿಗೆ ಮನೆ ಬಿಟ್ಟ 14ರ ಪೋರಿ

ಮುಂಬೈ: ಟಿಕ್ ಟಾಕ್ ಇತ್ತೀಚಿನ ಕಾಲದಲ್ಲಿ ಯುವ ಪೀಳಿಗೆಯನ್ನು ತುಂಬಾ ಆಕರ್ಷಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ ಮುಂಬೈಯಲ್ಲಿ ಪೋಷಕರಿಗೆ ಪತ್ರ ಬರೆದಿಟ್ಟು 14 ವರ್ಷದ ಹುಡುಗಿಯೊಬ್ಬಳು ಟಿಕ್‍ಟಾಕ್ ಗೆಳೆಯನನ್ನು ಭೇಟಿ ಮಾಡಲು ಮನೆ ಬಿಟ್ಟುಹೋಗಿದ್ದಾಳೆ.

ಪೋಷಕರಿಗೆ ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ನನ್ನ ಬಗ್ಗೆ ಚಿಂತಿಸಬೇಡಿ ಎಂದು ಭಾವನಾತ್ಮಕ ಪತ್ರ ಬರೆದಿಟ್ಟು, ನೇಪಾಳ ಮೂಲದ 16 ವರ್ಷದ ರಿಯಾಜ್ ಅಫ್ರೀನ್ ನನ್ನು ಭೇಟಿ ಮಾಡಲು ಮನೆ ಬಿಟ್ಟು ಹೋಗಿದ್ದಾಳೆ.

ಹುಡುಗಿ ಬರೆದ ಪತ್ರದಲ್ಲಿ “ಮಮ್ಮಿ ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ನನಗೆ ಬಾಬಾ (ತಂದೆ) ಮೇಲೆ ತುಂಬಾ ಬೇಸರವಾಗಿದೆ. ನನ್ನ ಬಗ್ಗೆ ಜಾಸ್ತಿ ಯೋಚಿಸಬೇಡ. ಈ ಕಾರಣಕ್ಕೆ ನೀವು ಅತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ದೇವರ ಮೇಲೆ ಆಣೆ ಮಾಡಿ. ನಾನು ಯಾವುದೋ ಹುಡುಗ ಜೊತೆ ಮನೆ ಬಿಟ್ಟು ಹೋಗುತ್ತಿಲ್ಲ” ಎಂದು ಪತ್ರ ಬರೆದು ಮನೆ ಬಿಟ್ಟು ಹೋಗಿದ್ದಾಳೆ.

ಈ ಪತ್ರವನ್ನು ನೋಡಿ ಭಯಗೊಂಡ ಪೋಷಕರು ತಕ್ಷಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಕೇವಲ ಎಂಟು ಗಂಟೆಯ ಒಳಗಡೆ ಹುಡುಗಿಯನ್ನು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ.

ಈ ಹುಡುಗಿ ಟಿಕ್ ಟಾಕ್‍ನಲ್ಲಿ ವಿಡಿಯೋ ಮಾಡುವ ಒಬ್ಬ ಹುಡುಗನ ಅಭಿಮಾನಿಯಾಗಿದ್ದು. ಆ ಹುಡುಗನ್ನು ಭೇಟಿ ಮಾಡಲು ನೇಪಾಳಕ್ಕೆ ಹೋಗುವ ಪ್ಲಾನ್ ಮಾಡಿದ್ದಳು ಎಂದು ಅವಳ ಸ್ನೇಹಿತೆ ಹೇಳಿದ ಮಾಹಿತಿ ಮೇರೆಗೆ ಪೊಲೀಸರು ಹುಡುಗಿಯನ್ನು ಪತ್ತೆ ಹಚ್ಚಿದ್ದಾರೆ.

ಇದೇ ವೇಳೆ ಹುಡುಗಿಯನ್ನು ವಿಚಾರಣೆ ನಡೆಸಿದಾಗ, ಹುಡುಗರೊಂದಿಗೆ ಮಾತನಾಡಲು ಬಿಡದ ತಂದೆಯ ಮೇಲೆ ಇದ್ದ ಅಸಮಾಧಾನದಿಂದ ಮನೆಬಿಟ್ಟು ಹೋಗಿದ್ದೆ ಎಂದು ತಿಳಿಸಿದ್ದಾಳೆ.

Comments

Leave a Reply

Your email address will not be published. Required fields are marked *