ಟವರ್ ಏರಿ ಹಾಸ್ಟೆಲ್ ಹುಡುಗಿಯರ ಕೋಣೆ ಇಣುಕಿ ನೋಡ್ತಾನೆ – ಹಾಸನದಲ್ಲೊಬ್ಬ ಸೈಕೋ

ಹಾಸನ: ಟವರ್ ಏರಿ ಹಾಸ್ಟೆಲ್ ಕೋಣೆಯನ್ನು ಇಣುಕಿ ನೋಡುವ ಸೈಕೋ ವ್ಯಕ್ತಿಯ ಕಾಟಕ್ಕೆ ನಗರದ ವಿದ್ಯಾರ್ಥಿನಿಯರು ಭಯಗೊಂಡಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‍ಗೆ ತಡರಾತ್ರಿ ನುಗ್ಗಿದ್ದಾನೆ. ಕಟ್ಟಡದ ಪಕ್ಕದಲ್ಲಿರುವ ಮೊಬೈಲ್ ಟವರ್ ಮುಖಾಂತರ ಸರಾಗವಾಗಿ ಮೇಲ್ಭಾಗಕ್ಕೆ ಹತ್ತಿ ಬರುವ ಅಪರಿಚಿತ ವ್ಯಕ್ತಿಯೊಬ್ಬ ಹಾಸ್ಟೆಲ್ ವಿದ್ಯಾರ್ಥಿನಿಯರ ಕೊಠಡಿಗಳ ಒಳಗೆ ಇಣುಕಿ ನೋಡಿದ್ದಾನೆ.

ಹಾಸ್ಟೆಲ್‍ನ ಓರ್ವ ವಿದ್ಯಾರ್ಥಿನಿ ಸೈಕೋನ ಚಲನವಲಗಳನ್ನು ಗಮನಿಸಿ ಕೂಡಲೇ ಮೇಲ್ವಿಚಾರಕರಿಗೆ ವಿಷಯ ತಿಳಿಸಿದ್ದಾಳೆ. ಸಿಸಿಟಿವಿ ಕ್ಯಾಮೆರಾದಲ್ಲಿ ಮುಖಕ್ಕೆ ಬಟ್ಟೆ ಬರುವ ಅಪರಿಚಿತನ ವ್ಯಕ್ತಿಯ ಗುರುತು ಪತ್ತೆಯಾಗಿದೆ.

ವಸತಿ ನಿಲಯಕ್ಕೆ ಹೈಸ್ಪೀಡ್ ಇಂಟರ್ ನೆಟ್ ಕಲ್ಪಿಸಲು ಟವರ್ ಹಾಕಲಾಗಿದೆ. ವ್ಯಕ್ತಿಯೊಬ್ಬ ಅದನ್ನು ಹತ್ತಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ನುಗ್ಗಿದ್ದಾನೆ. ಇದನ್ನು ನೋಡಿದ ಓರ್ವ ವಿದ್ಯಾರ್ಥಿನಿ ಕಿರುಚಾಡಿದ್ದಾಳೆ. ತಕ್ಷಣವೇ ಆ ವ್ಯಕ್ತಿ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾನೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸತೀಶ್ ತಿಳಿಸಿದ್ದಾರೆ.

ನಗರದಲ್ಲಿ ಮಹಿಳಾ ಹಾಸ್ಟೆಲ್‍ಗಳಿಗೆ ಸೈಕೋ ವ್ಯಕ್ತಿಗಳು ಪ್ರವೇಶ ಮಾಡುವುದು ಹೊಸದೆನಲ್ಲ ಈ ಹಿಂದೆ ನಗರದ ಪಶುವೈದ್ಯಕೀಯ ಕಾಲೇಜು ಮಹಿಳಾ ಹಾಸ್ಟೆಲ್‍ಗೆ ಸೈಕೋ ಎಂಟ್ರಿ ಕೊಟ್ಟಿದ್ದ. ಇದಾದ ಬಳಿಕ ಕೆಆರ್ ಪುರಂ ಬಡಾವಣೆಯ ಹಾಸ್ಟೆಲ್‍ಗೂ ಕಾಮುಕ ವ್ಯಕ್ತಿ ನುಗ್ಗಿದ್ದ. ಅಷ್ಟೇ ಅಲ್ಲದೆ ವಿದ್ಯಾನಗರದಲ್ಲಿ ಲೇಡಿಸ್ ಪಿಜಿಗೂ ಎಂಟ್ರಿ ಕೊಟ್ಟಿದ್ದ.

ಈ ಸಂಬಂಧ ಕೆ.ಆರ್ ಪುರಂ ಬಡಾವಣೆಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *