ವೈಶಾಖ ಮಾಸದ ಹನುಮ ಜಯಂತಿ ಆಚರಣೆ ವಿಧಾನಗಳು

– ಶನಿ ದೋಷ ನಿವಾರಣೆಗಾಗಿ ಕದಳಿ ನೈವೈದ್ಯ

ಹಳಷ್ಟು ಜನರು ಮಾರ್ಗಶಿರ ಮಾಸ ಇದು ಅಲ್ಲ. ಹಾಗಾಗಿ ಇವಾಗ ಯಾವ ಹನುಮ ಜಯಂತಿ ಬರುವುದಿಲ್ಲ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಇದೇ ಬುಧವಾರ ಹನುಮ ಜಯಂತಿ ಬಂದಿದೆ. ಮಾರ್ಗಶಿರ ಮಾಸದಲ್ಲಿ ಬರುವುದನ್ನು ಹನುಮ ದ್ರವತ್ವ, ವೈಶಾಖದಲ್ಲಿ ಬರುವುದನ್ನು ಹನುಮ ಜಯಂತಿ ಎಂದು ಕರೆಯಲಾಗುತ್ತದೆ.

ಕೃಷ್ಣ ಪಕ್ಷದ ವೈಶಾಖ ಮಾಸದಲ್ಲಿ ಬರುವ ಹನುಮ ಜಯಂತಿಯನ್ನು ನಿಯಮಬದ್ಧವಾಗಿ ಪಾಲಿಸುವವರು ಆಂಜನೇಯನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎನ್ನುವುದು ನಂಬಿಕೆ. ಹನುಮ ಜಯಂತಿಯನ್ನು ನಿಯಮ ಬದ್ಧವಾಗಿ ಪಾಲಿಸುವವರಿಗೆ ಜನ್ಮದಲ್ಲಿ ಬರತಕ್ಕಂತಹ ಶನಿ ದೋಷ ಮತ್ತು ಸಾಡೇ ಸಾತ್ (ಏಳರಾಟ ಶನಿ ದೋಷ) ನಿವಾರಣೆ ಆಗುತ್ತೆ ಎಂಬುವುದು ಸುಂದರ ಕಾಂಡದಲ್ಲಿ ಲಭ್ಯವಾಗುತ್ತದೆ.

ಹನುಮ ಜಯಂತಿಯ ಆರಾಧನೆ:
ಕದಳಿ ನೈವೈದ್ಯ: ಬಾಳೆಹಣ್ಣು ನೈವೈದ್ಯ ನೀಡುವುದನ್ನು ಕದಳಿ ನೈವೈದ್ಯ ಎಂದು ಕರೆಯಲಾಗುತ್ತದೆ. ಗ್ರಾಮೀಣ ಭಾಗಗಳಲ್ಲಿ ಬಾಳೆಹಣ್ಣು ಬಳಸಿ ರಸಾಯನ ಮಾಡಲಾಗುತ್ತದೆ. ಪಂಚಫಲಗಳಲ್ಲಿ ರಸಾಯನ ಮಾಡೋದಕ್ಕಿಂತ ಕೇವಲ ಬಾಳೆಹಣ್ಣು ಬಳಸಿ ನೈವೈದ್ಯ ಸಲ್ಲಿಸೋದು ಉತ್ತಮ ಮತ್ತು ಸರಳ. ನಿಯಮಬದ್ಧವಾಗಿ ಶೋಡಶ ಉಪಚಾರ ಮತ್ತು ಭಕ್ತರು ತಮ್ಮ ಶಕ್ತಿಯ ಅನುಗುಣವಾಗಿ ಆರಾಧನೆ ಮಾಡಬೇಕು.

ಆರಾಧನೆಯ ಬಳಿಕ ಸಿದ್ಧಪಡಿಸಿಕೊಂಡಿರುವ ಬಾಳೆ ಹಣ್ಣಿನ ರಸಾಯನವನ್ನು ಬಂದಂತಹ ಭಕ್ತರಿಗೆ ವಿನಿಮಯ ಮಾಡಬೇಕು. ಈ ರೀತಿ ನಿಯಮಬದ್ಧವಾಗಿ ರಸಾಯನ ವಿನಿಮಯ ಮಾಡುವವರ ಶನಿ ದೋಷ ನಿವಾರಣೆ ಆಗುತ್ತದೆ ಎನ್ನುವುದು ನಂಬಿಕೆ.

ಶನಿ ಮೂರು, ಆರನೇ ಅಥವಾ ಹನ್ನೊಂದನೇ ಮನೆಯಲ್ಲಿದ್ದರೆ ಬಲಯುಕ್ತನಾಗಿ ಲಾಭವನ್ನು ತಂದುಕೊಡುತ್ತಾನೆ. ಬುಧವಾರ ಹುನಮ ಜಯಂತಿ ದಿನದಂದು ನಿಮಗೆ ಸಮೀಪದಲ್ಲಿರುವ ಆಂಜನೇಯ ದೇವಾಲಯಕ್ಕೆ ಪ್ರಾತಃಕಾಲ ತೆರಳಿ ನಿಮ್ಮ ಶಕ್ತಿಗೆ ಅನುಸಾರವಾಗಿ ಬಾಳೆಹಣ್ಣು ನೀಡಬೇಕು. ತುಂಬಾನೇ ಕಷ್ಟವಿದ್ದರೆ ಎರಡು ಬಾಳೆಹಣ್ಣುಗಳನ್ನು ಸಹ ನೀಡಿ ಭಕ್ತಿಯಿಂದ ಆಂಜನೇಯನನ್ನು ಪ್ರಾರ್ಥನೆ ಮಾಡಬೇಕು. ಶಕ್ತಿಗನುಗುಣವಾಗಿ ಮಂತ್ರ ಹೇಳುತ್ತಾ  ಜಪವನ್ನು ಮಾಡಬೇಕು. ಆರ್ಥಿಕವಾಗಿ ಸಬಲರಾಗಿದ್ದರೆ ದೇವಾಲಯಗಳಿಗೆ ಬರುವ ಭಕ್ತರಿಗೆ ಅನ್ನದಾನ ಮಾಡಿದ್ರೆ ಹುನುಮನ ಅನುಗ್ರಹ ಪ್ರಾಪ್ತಿಯಾಗುತ್ತದೆ.

ಪ್ರಾರ್ಥನೆ ವೇಳೆ ಹೇಳುವ ಮಂತ್ರ: ಮನೋಜವಂ ಮಾರುತತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿ ಮತಾಂ ವರಿಷ್ಠಂ ವಾತಾತ್ಮಜಂ ವಾನರಯೂಧ ಮುಖ್ಯಂ ಶ್ರೀ ರಾಮದೂತಂ ಶಿರಸಾ ನಮಾಮ್ಯಹಂ

Comments

Leave a Reply

Your email address will not be published. Required fields are marked *