ಭಾರತೀಯರ ಟೆಕ್ನಿಕ್ ಮುಂದೆ ಯಾರು ಇಲ್ಲ: ಆನಂದ್ ಮಹೀಂದ್ರಾ

ನವದೆಹಲಿ: ಮಹೀಂದ್ರ ಮೋಟರ್ ಮಾಲೀಕ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾದಲ್ಲಿ ಸಕ್ರಿಯರಾಗಿದ್ದು, ಟ್ವಿಟ್ಟರ್ ಮೂಲಕ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಭಾರತೀಯರ ಟೆಕ್ನಿಕ್ ಮೆಚ್ಚಿ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಭಾರತೀಯರ ಟೆಕ್ನಿಕ್ ಮುಂದೇ ಯಾರು ಇಲ್ಲ ಎಂದಿದ್ದಾರೆ.

ಅಗತ್ಯತೆಯೇ ಸಂಶೋಧನೆಯ ಮೂಲ ಎಂದು ಬರೆದುಕೊಂಡಿರುವ ಆನಂದ್ ಮಹೀಂದ್ರಾ, ವಿಡಿಯೋದಲ್ಲಿ ಸಾಮಾನ್ಯ ಟ್ರ್ಯಾಕ್ಟರನ್ನು ಬಹುಪಯೋಗಿಯಾಗಿ ಬಳಕೆ ಮಾಡುತ್ತಿರುವ ಹಾಗೂ ತಮ್ಮ ಸುತ್ತಲಿನ ವಸ್ತುಗಳನ್ನೇ ಬಳಸಿ ಕಷ್ಟದ ಕಾರ್ಯವನ್ನು ಸುಲಭವಾಗಿಸುವ ಕುರಿತು ಮೆಚ್ಚುಗೆ ಸೂಚಿಸಿದ್ದಾರೆ.

ಆನಂದ್ ಅವರು ಟ್ವೀಟ್ ಮಾಡಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಬೆಳೆಯ ಹೊಟ್ಟನ್ನು ಒಂದೆಡೆ ಸಂಗ್ರಹಿಸಲು ಸಾಮಾನ್ಯ ಟ್ರ್ಯಾಕ್ಟರಿಗೆ ವಿಶೇಷ ಸಾಧನ ಆಳವಡಿಸಿ ಅದಕ್ಕೆ ಮಲಗಲು ಉಪಯೋಗಿಸುವ ಕಬ್ಬಿಣದ ಮಂಚವನ್ನು ಕಟ್ಟಿ ಕಷ್ಟದ ಕಾರ್ಯವನ್ನು ಸುಲಭವಾಗಿಸಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿಯ ಜಾಣ್ಮೆಗೆ ಆನಂದ್ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಟ್ವಿಟ್ಟರಿನಲ್ಲಿ ಆನಂದ್ ಮಹೀಂದ್ರಾ ಅವರು 60 ಲಕ್ಷ ಹಿಂಬಾಲಕರನ್ನು ಹೊಂದಿದ್ದು, ಅವರು ಟ್ವೀಟ್ ಮಾಡಿರುವ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ವಿಡಿಯೋಗೆ ಇದುವರೆಗೂ 16 ಸಾವಿರಕ್ಕೂ ಹೆಚ್ಚು ಲೈಕ್ ಗಳು ಬಂದಿದ್ದು, 3 ಸಾವಿರಕ್ಕೂ ಅಧಿಕ ಮಂದಿ ರೀ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಹಲವರು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಹಿಂದೆ ಇರಾನಿ ಹುಡುಗ ಫುಟ್ಬಾಲ್ ಆಡುವುದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದ ಅವರು ಆ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಬಾಲಕನ ಫುಟ್ಬಾಲ್ ಆಡುವ ರೀತಿಗೆ ಆನಂದ್ ಮಹೀಂದ್ರಾ ಫಿದಾ ಆಗಿದ್ದರು.

Comments

Leave a Reply

Your email address will not be published. Required fields are marked *